ಸ್ಕ್ರೋಲಿಂಗ್ ಡಿಜಿಟಲ್ ಎಲೆಕ್ಟ್ರಾನಿಕ್ಸ್ ಬೋರ್ಡ್
Team Udayavani, Mar 3, 2019, 7:46 AM IST
ಅರೇ ಇದೇನಿದು ನಮ್ಮೂರಲ್ಲೂ ಈ ರೀತಿ ಮಾಡಿದರೆ ಒಳ್ಳೆಯದು ಆಗಿತ್ತಲ್ವಾ, ಈ ರೀತಿಯ ಒಂದು ತಂತ್ರಜ್ಞಾನ ಇಲ್ಲಿವರೆಗೆ ನೋಡಿರಲಕ್ಕಿಲ್ಲ. ನಾವು ಇದನ್ನು ಹೋಗಿ ತೋರಿಸಿದರೆ ಒಂದು ರೀತಿಯಲ್ಲಿ ಸಾಕಷ್ಟು ಮಂದಿಗೆ ಪ್ರಯೋಜನವಾಗಬಹುದು… ಈ ಎಲ್ಲ
ಮಾತುಗಳು ನಾವು ಯಾವ್ದೋ ಊರಿಗೆ ಹೋದಾಗ, ಅಲ್ಲೇನೋ ಹೊಸತನ್ನು ಕಂಡಾಗ ನಮ್ಮ ಮನಪಟಲದಲ್ಲಿ ಹರಿದು ಹೋಗಿರುತ್ತದೆ.
ಹೌದು ಇತ್ತೀಚೆಗೆ ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಬಾಲ್ಕೋಟ್‌ನಲ್ಲಿ ನಡೆದ ಏರ್‌ಸ್ಟ್ರೈಕ್‌ಗೆ 300 ಉಗ್ರರು ಹತರಾದರು ಎನ್ನುವ ಸುದ್ದಿ ದೇಶ ವಿದೇಶಗಳಲ್ಲಿ ಪಸರಿಸಿತು.
ಆದರೆ ಬ್ರೆಝಿಲ್‌ನ ಹಾದಿ ಬೀದಿಯಲ್ಲಿ ಹೋಗುತ್ತಿದ್ದ ವರಿಗೂ ಈ ಸುದ್ದಿ ಮೊಬೈಲ್ ನೋಡದೆ ಅತೀ ಬೇಗನೆ ತಲುಪಿತು. ಅದು ಹೇಗೆ ತಲುಪಿದ್ದು ಅನ್ನೋದು ಮೇಲ್ಕಾಣಿಸಿದ ಚಿತ್ರದಲ್ಲಿ ಕಾಣಬಹತು. ಈ ಫೋಟೋ ಭಾರತದಲ್ಲಿ ವೈರಲ್ ಆಗಿ ಹೋಯ್ತು. ಆದರೆ ನಾವಿಲ್ಲಿ ಗಮನಿಸಬೇಕಾದ ಅಂಶ ವೈರಲ್ ಯಾಕೆ ಆಯ್ತು ಅನ್ನುವುದಲ್ಲ . ಬದಲಾಗಿ ಆ ಸುದ್ದಿ ತಲುಪಿದ ವೇಗ ಮತ್ತು ಅದರ ಪ್ರಸೆಂಟೇಶನ್ ಯಾವ ರೀತಿ ಇತ್ತು ಎಂದು ಗಮನಿಸಲೇಬೇಕು. ಹೌದು ನಾವೇನಾದರೂ ಮೊಬೈಲ್ ಮರೆತು ನಗರಕ್ಕೆ ಬಂದಿದ್ದರೆ ಪ್ರಮುಖ ಸುದ್ದಿಗಳನ್ನು ಬೇರೋಬ್ಬರ ಬಾಯಲ್ಲಿ ಹೇಳುವವರೆಗೆ ಗೊತ್ತಾಗೋದೇ ಇಲ್ಲ . ನಮ್ಮಲ್ಲಿ ಹಾಗೇನಾದರೂ ತಕ್ಷಣ ನ್ಯೂಸ್ ನೋಡ ಬೇಕೆಂದರೆ ಯಾವ್ದೋ ಸೆಲೂನ್‌ನ ಒಳಗೆ ಹೋಗಬೇಕಾಗುತ್ತದೆ ಅಥವಾ ವಾಟ್ಸಪ್‌ನಲ್ಲಿ ಬರುವ ಸುಳ್ಳು ಸುದ್ದಿಗಳನ್ನೇ ನಿಜವೆಂದು ನಂಬಿ ಪೇಚಿಗೆ ಸಿಲುಕಿಕೊಳ್ಳಬೇಕಾಗುತ್ತದೆ. ಅಲ್ಲಿರುವ ಹಾಗೆ ಡಿಜಿಟಲ್ ಸುದ್ದಿ ಮಾಧ್ಯಮ ನಮ್ಮ ನಗರಗಳಲ್ಲಿಲ್ಲ. ಇದು ನಮ್ಮ ಸ್ಮಾರ್ಟ್ ನಗರಿ ಮಂಗಳೂರಿಗೂ ಬಂದರೆ ಇಲ್ಲಿನ ಜನರಿಗೂ ಅತಿ ಸುಲಭವಾಗಿ ಮತ್ತು ಅತ್ಯಂತ ವೇಗವಾಗಿ ಸುದ್ದಿಗಳನ್ನು ಹಂಚಬಹುದು.
ಸುತ್ತ ಕಾಂಕ್ರೀಟ್ ಕಾಡುಗಳಲ್ಲಿ ಸ್ಕ್ರೋಲಿಂಗ್ ಡಿಜಿಟಲ್ ಎಲೆಕ್ಟ್ರಾನಿಕ್ ಬೋರ್ಡ್ ಮೂಲಕ ನ್ಯೂಸ್ ಸ್ಕ್ರೋಲಿಂಗ್ ಆಗುತ್ತಿರುತ್ತದೆ. ಈ ಮೂಲಕ ಎಲ್ಲೇ ಏನೇ ಮಹತ್ವದ ವಿಷಯವಾದರೂ ಜನರಿಗೆ ವೇಗವಾಗಿ ಮಾಹಿತಿ ಸಿಗುತ್ತದೆ. ಈ ಮಾದರಿಗಳು ನ್ಯೂಸ್ ಕೊಡುವುದರ ಹೊರತಾಗಿ ಸೆನ್ಸೆಕ್ಸ್, ಕೇವಲ ಜಾಹೀರಾತು ಮಾದರಿಗಳಾಗಿ ನಮ್ಮ ದೇಶದಲ್ಲೂ ಇದೆ. ಕಾರ್ಯನಿರ್ವಹಣೆ ಹೇಗೆ ? ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುವ ಮಹತ್ವ ವಿಚಾರಗಳನ್ನು ಕಟ್ಟಡದಲ್ಲಿ ಅಳವಡಿಸಿದ ಡಿಜಿಟಲ್ ಬೋರ್ಡ್ ಮೂಲಕ ಹಾದುಹೋಗುವುದರಿದ ಜನರು ಸಂಚಾರ ಮಾಡುತ್ತಲೇ ನ್ಯೂಸ್ ಓದಬಹುದು. ಇಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಜಾಹೀರಾತುಗಳನ್ನು ಅಳವಡಿಸಿ ಆದಾಯವನ್ನೂ ಗಳಿಸಿಕೊಳ್ಳಲು ದಾರಿಯಾಗುವುದು.
ಎಲ್ಲಿಗೆ ಸೂಕ್ತ
ಡಿಜಿಟಲ್ ಕೇಂದ್ರಿತವಾದ ಈ ನ್ಯೂಸ್ ಪದ್ಧತಿ ನಗರ ಕೇಂದ್ರಿತ ಸ್ಥಳಗಳಲ್ಲಿ ಇದ್ದರೆ ಅತೀ ಸೂಕ್ತ. ವಿಶಾಲವಾಗಿರುವ, ಅಗಲವಾಗಿರುವ ಕಟ್ಟಡಗಳು, ಮಾಲ್‌ಗಳಲ್ಲಿ ಇದನ್ನು ಅಳವಡಿಸಿಕೊಂಡರೆ ಉತ್ತಮ. ಜನನಿಬಿಡ ಪ್ರದೇಶಗಳಲ್ಲಿ ಈ ರೀತಿಯ ಸುದ್ದಿ ಪ್ರಕಟಿಸುವುದರಿಂದ ವಿದ್ಯಾರ್ಥಿಗಳ ಸಹಿತ ಎಲ್ಲರೂ ಇದರ ಲಾಭ ಪಡೆಯಬಹುದಾಗಿದೆ.
ಮಂಗಳೂರಿಗೂ ಸೂಕ್ತ ಮಂಗಳೂರಿನಲ್ಲಿ ಕಟ್ಟಡಗಳಿಗೆ ಬರವಿಲ್ಲ. ದಿನೇ ದಿನೇ ಅನೇಕ ಕಟ್ಟಡಗಳು ಬಾನೆತ್ತರಕ್ಕೇರಲು ತಾ ಮುಂದು ಎನ್ನುತ್ತಾ ಏರುತ್ತಲೇ ಇವೆ. ಇಲ್ಲಿ ಇಂಥ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಬಹುದು. ನಗರದಲ್ಲಿ ಆಗು ಹೋಗುವ ಪ್ರಮುಖ ವಿಷಯಗಳನ್ನು ಕೂಡಲೇ ಜನರಿಗೆ ಈ ಮೂಲಕ ತಲುಪಿಸಬಹದು. ಆಡಳಿತ ಕೈಗೊಳ್ಳುವ ಪ್ರಮುಖ ನಿರ್ಧಾರ, ರೋಡ್ ಬ್ಲಾಕ್, ಟ್ರಾಫಿಕ್ ಜಾಮ್ ಇತ್ಯಾದಿ ಮಾಹಿತಿಗಳನ್ನೂ ಈ ಮೂಲಕ ನೀಡಬಹುದು. ಅಲ್ಲದೇ ಆಯಾ ದಿನಗಳ ಪ್ರಮುಖ ವಿಷಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಬಹುದು.
ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.