ದಾರಿ ತೋರಿಸುವ ಸ್ಮಾರ್ಟ್ ಬಿಲ್ ಬೋರ್ಡ್
Team Udayavani, Dec 16, 2018, 12:55 PM IST
ದೇಶದ ಸ್ಮಾರ್ಟ್ ಸಿಟಿಗಳಲ್ಲಿ ಇಂದು ನಗರ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ. ಅದಕ್ಕೆಂದು ಪ್ರತ್ಯೇಕ ಅನುದಾನದ ನೀಡಲಾಗುತ್ತಿದೆ. ಹಲವಾರು ಸಂಘ ಸಂಸ್ಥೆಗಳೂ ಸ್ವಚ್ಛತೆಗೆ ಪಣತೊಟ್ಟಿದ್ದರೂ ನೈರ್ಮಲ್ಯ ಕಾಪಾಡುವುದು ಸವಾಲಾಗಿದೆ. ನಗರದ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳನ್ನು ಕಸಕ್ಕೆ ಮುಕ್ತಿ ನೀಡಬಹುದು. ಆದರೆ ಎಲ್ಲೆಂದರಲ್ಲಿ ಅಂಟಿಸಲಾಗಿರುವ ಸ್ಟಿಕ್ಟರ್, ಪೋಸ್ಟರ್‌ಗಳೇ ಹೆಚ್ಚು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ ಎಂಬ ಆರೋಪ ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಕಠಿನ ಕ್ರಮ ಜರಗಿಸಿದರೂ ಜಾಹೀರಾತು ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗುತ್ತಿದ್ದು, ತ್ಯಾಜ್ಯ ನಿರ್ವಹಣೆಗೆ ಸವಾಲಾಗಿರುವ ಇದು ನಗರದ ಸೌಂದರ್ಯಕ್ಕೆ ಅಡ್ಡಿಯಾಗುತ್ತಿದೆ.
ಆದರೆ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇಂದು ಇದೆ. ಈ ಬಗ್ಗೆ ಆಲೋಚಿಸಿದಾಗ ನೆದರ್ ಲ್ಯಾಂಡ್ ಅಳವಡಿಸಿಕೊಂಡಿರುವ ಯೋಜನೆ ದೇಶದ ನಗರಗಳಿಗೆ ಮಾದರಿಯಾಗಬಹುದು.
ನೆದರ್‌ಲ್ಯಾಂಡಿನ ಆ್ಯಮಸ್ಟರ್ ಡ್ಯಾಂ, ಸ್ವೀಡನ್, ಆಸ್ಟ್ರೇಲಿಯಾ ದೇಶದ ಬಹುತೇಕ ರೈಲ್ವೇ ಹಾಗೂ ಬಸ್ ನಿಲ್ದಾಣಗಳಲ್ಲಿ ಜಾಹೀರಾತು ಪ್ರದರ್ಶನಕ್ಕಾಗಿ ಡಿಜಿಟಲ್ ಬಿಲ್‌ಬೋರ್ಡ್‌ಗಳನ್ನು ಅಳವಡಿಸಿಕೊಂಡು ನಗರದ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ.
ಏನಿದು ಬಿಲ್‌ಬೋರ್ಡ್?
ಬಿಲ್‌ಬೋರ್ಡ್ ಎಂದರೆ ಇದೊಂದು ಡಿಜಿಟಲ್ ಮಾದರಿ ವ್ಯವಸ್ಥೆ. ಇದು ಎಲ್‌ಡಿ ಸ್ಕ್ರೀನ್‌ನ ಮೇಲೆ ಚಿತ್ರಗಳನ್ನು ಕಾಣಬಹುದು. ನಾವು ಜಾಹೀರಾತು, ಪೋಸ್ಟರ್ ಹಾಗೂ ಸಂಚಾರ ಮಾರ್ಗಗಳನ್ನು ತೋರಿಸಲು ಡಿಜಿಟಲ್ ರೂಪದಲ್ಲಿ ಬಳಸುವುದಕ್ಕೆ ಬಿಲ್‌ಬೋರ್ಡ್‌ಗಳೆಂದು ಕರೆಯಲಾಗುತ್ತದೆ.
ನೆದರ್‌ಲ್ಯಾಂಡ್‌ನ ಬಹುತೇಕ ನಗರದ ರೈಲ್ವೇ, ಬಸ್ ನಿಲ್ದಾಣ ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕರು ಸಂಚರಿಸುವ ತಮ್ಮ ದಾರಿ, ವೇಳೆಯನ್ನು ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ನೋಡಬಹುದು. ನೆದರಲ್ಯಾಂಡ್‌ನ ಆ್ಯಮಸ್ಟರ್‌ಡ್ಯಾಂ ನಗರದ ರೈಲ್ವೇ ನಿಲ್ದಾಣದಲ್ಲಿ ಮಾತ್ರವೇ ಸುಮಾರು 35 ಸ್ಮಾರ್ಟ್ ಬಿಲ್‌ಬೋರ್ಡ್ ಗಳನ್ನು ನೋಡಬಹುದಾಗಿದೆ. ಅಲ್ಲದೇ ಜಾಹೀರಾತುಗಳನ್ನು ಎಲ್‌ಇಡಿ ಬಿಲ್‌ಬೋರ್ಡ್‌ಗಳೂ ಇವೆ.
ಆಸ್ಟ್ರೇಲಿಯಾದ ವಿನೂತನ ಮಾದರಿ
ಆಸ್ಟ್ರೇಲಿಯಾದಲ್ಲಿ ಬಹುತೇಕ ರಸ್ತೆಗಳಲ್ಲಿ ಸಂಚಾರ ಮಾಡಿದರೆ, ಅಲ್ಲಿ ನಮಗೆ ದಾರಿ ತೋರಿಸಲು ಹೆಚ್ಚಿನದಾಗಿ ಬಿಲ್‌ಬೋರ್ಡ್ ಗಳನ್ನೇ ಬಳಸಲಾಗಿದೆ. ಇದು ಕೂಡ ವಿನೂತನವಾದ ಮಾದರಿಯಾಗಿದೆ. ನಮ್ಮ ದೇಶದಲ್ಲೂ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಯೋಜನೆಗಳನ್ನೂ ರೂಪಿಸಲಾಗಿದೆ. ನಗರೀಕರಣಕ್ಕೆ ತೆರೆದುಕೊಡಿರುವ ಸ್ಮಾರ್ಟ್ ಸಿಟಿ ನಗರದ ಪಟ್ಟಿಯಲ್ಲಿರುವ ಮಂಗಳೂರು ಮಹಾನಗರದಲ್ಲೂ ಈ ವ್ಯವಸ್ಥೆ ಜಾರಿಯಾದರೆ ನಗರದ ನೈರ್ಮಲ್ಯಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಿದಂತಾಗುವುದು.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.