ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸ್ಮಾರ್ಟ್‌ ಪರಿಕಲ್ಪನೆ

Team Udayavani, Dec 15, 2019, 4:39 AM IST

zx-19

ತ್ಯಾಜ್ಯ ವಿಲೇವಾರಿ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಸದ ತೊಟ್ಟಿಗಳ ಅಭಾವದಿಂದ ರಸ್ತೆ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ರಾಶಿಯ ಗುಡ್ಡೆಗಳು ಹೇರಳವಾಗಿ ಸಿಗುತ್ತಿವೆ. ಸ್ವತ್ಛತೆಯ ಸೂಕ್ತ ನಿರ್ವಹಣೆ ಇಲ್ಲದ ಪರಿಣಾಮ ಜನಸಾಮಾನ್ಯರಿಗೂ ಇದರಿಂದ ಕಿರಿಕಿರಿ ಉಂಟಾಗುತ್ತಿದೆ. ಇದೀಗ ಈ ಗಂಭೀರ ಸಮಸ್ಯೆಗೆ ಪರಿಹಾರದ ಅಗತ್ಯವಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅದ್ಯ ಕರ್ತವ್ಯವಾಗಿದೆ.ಈ ಜವಾಬ್ದಾರಿಯ ಪರಿಪಾಲನೆಗೆ ಇಲ್ಲೊಂದು ಪರಿಹಾರವಿದ್ದು, ಇದರಿಂದ ಸ್ವತ್ಛ ಸಮಾಜ ಕಟ್ಟಲು ನೆರವಾಗುತ್ತದೆ.

ಸೋಲಾರ್‌ ಸ್ಮಾರ್ಟ್‌ ಡಸ್ಟ್‌ಬಿನ್‌
ದಿನ ಕಳೆದಂತೆ ನಗರ ಪ್ರದೇಶಗಳಲ್ಲಿ ತ್ಯಾಜ್ಯ ಸಮಸ್ಯೆ ಹೆಚ್ಚಾಗುತ್ತಿದೆ ಜತೆಗೆ ನಿರ್ವಹಣೆಗೆ ಅಗತ್ಯ ಹಣಕಾಸಿನ ಸಹಾಯ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕೆ ಪರ್ಯಾಯ ವ್ಯವ‌ಸ್ಥೆಯಾಗಿ ಸೋಲಾರ್‌ ತ್ಯಾಜ್ಯ ಕಸದ ಬುಟ್ಟಿಯನ್ನು ಬಳಸಬಹುದಾಗಿದ್ದು, ಇದರಲ್ಲಿ ಅಳವಡಿಸಿರುವ ತಂತ್ರಜ್ಞಾನದ ಸಹಾಯದಿಂದ ತ್ಯಾಜ್ಯ ವಿಲೇವಾರಿಯನ್ನು ಸುಲಭವಾಗಿ ಮಾಡಬಹುದು.

ಸಂದೇಶ ರವಾನಿಸುತ್ತದೆ
ಈ ಡಸ್ಟ್‌ಬಿನ್‌ ಸೌರಶಕ್ತಿಯ ಸಹಾಯದಿಂದ ಮಾಹಿತಿ ತಂತ್ರಜ್ಞಾನ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಪ್ರತ್ಯೇಕ ನೆಟ್‌ವರ್ಕ್‌ ವ್ಯವಸ್ಥೆಯನ್ನು ಒಳಗೊಂಡಿದೆ. ಜತೆಗೆ ಈ ತಂತ್ರಜ್ಞಾನದ ನೆರವಿನಿಂದ ತ್ಯಾಜ್ಯದ ತೊಟ್ಟಿ ಪೂರ್ಣಗೊಂಡ ಕೂಡಲೇ ಸಂಗ್ರಾಹಕರಿಗೆ ಸಂದೇಶವನ್ನು ರವಾನಿಸುತ್ತದೆ.

ಅಧಿಕ ಮಟ್ಟದಲ್ಲಿ ಸಂಗ್ರಹಣೆ
ಅಧಿಕ ಮಟ್ಟದಲ್ಲಿ ತ್ಯಾಜ್ಯವನ್ನು ಸಂಗ್ರಹಿಸುವ ಸಾಮರ್ಥ್ಯವಿರುವ ಈ ಡಸ್ಟ್‌ ಬಿನ್‌ ಪೂರ್ಣಗೊಂಡಾಗ ತಂತ್ರಾಂಶವು ಸ್ವಯಂಚಾಲಿತವಾಗಿ ತಳ್ಳುವುದರಿಂದ ಇನ್ನಷ್ಟು ಕಸವನ್ನು ಹಾಕಬಹುದಾಗಿದೆ. ಈ ಬಿನ್‌ ಇತರೆ ಕಸ ಶೇಖರಣ ತೊಟ್ಟಿಗಳಿಗಿಂತ ವಿಸ್ತಾರವಾಗಿದ್ದು, 5-8 ಬಿನ್‌ಗಳ ಸಾಮರ್ಥ್ಯಕ್ಕಿಂತ ಹೆಚ್ಚು ಕಸವನ್ನು ಶೇಖರಣೆ ಮಾಡಬಹುದಾಗಿದೆ.

ನಮ್ಮ ನಗರಕ್ಕೂ ಬರಲಿ
ಮಂಗಳೂರು ನಗರ ಸ್ಮಾರ್ಟ್‌ ನಗರವಾಗಿ ಬೆಳೆಯುತ್ತಿರುವುದರಿಂದ ಇಂತಹ ಮಾದರಿ ಯೋಜನೆಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವೆನ್ನಿಸುತ್ತದೆ. ನಗರದ ಪ್ರಮುಖ ಕೇಂದ್ರಗಳಲ್ಲಿ, ತ್ಯಾಜ್ಯ ವಿಲೇವಾರಿ ಸಮಸ್ಯೆ ಕಾಡುತ್ತಿದೆ, ಉದ್ಯಾನವನಗಳಲ್ಲಿ , ಶಾಪಿಂಗ್‌ ಮಾಲ್‌ಗ‌ಳಲ್ಲಿ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಇರುವ ತ್ಯಾಜ್ಯ ಸಮಸ್ಯೆಯನ್ನು ಬಗೆಹರಿಸಬಹುದು. ಯುಎಸ್‌ ದೇಶ ಸೇರಿದಂತೆ ಇತರೆ 47 ರಾಷ್ಟ್ರಗಳಲ್ಲಿ ಬಿಗ್‌ ಬೆಲ್ಲಿ ಎಂಬ ಸಂಸ್ಥೆ ಈ ಸೌರಚಾಲಿತ ತ್ಯಾಜ್ಯ ಸಂಗ್ರಹಣೆ ಪ್ರಾರಂಭಿಸಿದ್ದು, ನ್ಯೂಯಾರ್ಕ್‌, ಬೋಸ್ಟನ್‌, ಚಿಕಾಗೆ‌, ಹ್ಯಾಂಬರ್ಗ್‌ ಸೇರಿದಂತೆ ಮುಂತಾದ ಹೆಸರಾಂತ ನಗರಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ಈ ಮಾದರಿ ವ್ಯವಸ್ಥೆಯನ್ನು ನಮ್ಮ ನಗರಗಳಲ್ಲಿ ಅಲವಡಿಸಿಕೊಂಡರೆ ಸ್ವತ್ಛ ಭಾರತ ಅಭಿಯಾನ ಅಡಿಯಲ್ಲಿ ಸ್ವಚ್ಛ ನಗರವಾಗುವುದರೊಂದಿಗೆ ಸ್ಮಾರ್ಟಿ ಸಿಟಿ ಕಲ್ಪನೆಗೆ ಅರ್ಥ ದೊರೆತಂತಾಗುತ್ತದೆ.

ಖರ್ಚು ಕಡಿಮೆ
ಸೌರ ಕಸದ ತೊಟ್ಟಿ ಯನ್ನು ಅಳವಡಿಸಿಕೊಳ್ಳುವುದರಿಂದ ತ್ಯಾಜ್ಯ ನಿರ್ವಹಣೆಯೂ ಸುಲಭವಾಗಲಿದ್ದು, ದೈನಂದಿನ ಕಸ ಸಂಗ್ರಹದ ಬದಲು ವಾರಕ್ಕೊಮ್ಮೆ ಸಂಗ್ರಹ ಮಾಡಬಹುದಾಗಿದೆ. ಜತೆಗೆ ಈ ನಿಯಮವನ್ನು ಪಾಲಿಸುವುದರಿಂದ ಸಂಚಾರ, ಕೆಲಸದ ಸಮಯ, ಇಂಧನ ವೆಚ್ಚ ಮತ್ತು ವಾಹನ ವೆಚ್ಚಗಳನ್ನು ಕಡಿತಗೊಳಿಸಬಹುದು.

-  ಸುಶ್ಮಿತಾ ಜೈನ್‌

ಟಾಪ್ ನ್ಯೂಸ್

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.