ನಗರ ಸೌಂದರ್ಯ ವೃದ್ಧಿಸುವ ಪ್ಲಾಸ್ಟಿಕ್ 


Team Udayavani, Sep 9, 2018, 12:52 PM IST

9-sepctember-14.jpg

ಪ್ಲಾಸ್ಟಿಕ್‌ ಬಳಕೆ ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟಿದ್ದರೂ ಒಂದಲ್ಲ ಒಂದು ರೂಪದಲ್ಲಿ ಪ್ಲಾಸ್ಟಿಕ್‌ ಮನೆ ಸೇರುತ್ತವೆ. ಮನೆ ಸೇರಿದ್ದು ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ. ಒಟ್ಟಿನಲ್ಲಿ ಪ್ಲಾಸ್ಟಿಕ್‌ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಪ್ಲಾಸ್ಟಿಕ್‌ ಅನ್ನು ನಾವು ನೆಚ್ಚಿಕೊಂಡಿದ್ದೇವೆ.

ಎಲ್ಲೋ ಕೆಲವು ಕಡೆಗಳಲ್ಲಿ ಮಾತ್ರ ಇಂಥ ಪ್ಲಾಸ್ಟಿಕ್‌ ಮರು ಬಳಕೆಯ ಚಿಂತನೆಗಳು ನಡೆಯುತ್ತಿವೆ. ನಗರ ಅಭಿವೃದ್ಧಿ, ಸೌಂದರ್ಯದ ದೃಷ್ಟಿಯಿಂದಲೂ ಪ್ಲಾಸ್ಟಿಕ್‌ ಮರು ಬಳಕೆ ಮಾಡಿದರೆ ಬಹುತೇಕ ತ್ಯಾಜ್ಯ ಸಮಸ್ಯೆ ನಿವಾರಣೆಯಾದಂತೆಯೇ ಸರಿ. ಪ್ಲಾಸ್ಟಿಕ್‌ ಕವರ್‌ ಗಳನ್ನಾದರೆ ಸುಟ್ಟು ಹಾಕಬಹುದು ಅಥವಾ ಮರು ಬಳಕೆ ಮಾಡಬಹುದು. ಆದರೆ ಪ್ಲಾಸ್ಟಿಕ್‌ ಬಾಟಲಿಗಳು ವ್ಯರ್ಥವಾಗಿ ಪರಿಸರ ಸೇರುತ್ತದೆ. ಒಂದು ವರದಿಯಂತೆ ಜಗತ್ತಿನಲ್ಲಿ ವರ್ಷಕ್ಕೆ ಸುಮಾರು 50 ಬಿಲಿಯನ್‌ ಪ್ಲಾಸ್ಟಿಕ್‌ ಬಾಟಲಿಗಳು ಉತ್ಪಾದನೆಯಾಗುತ್ತಿವೆ. ಪ್ಲಾಸ್ಟಿಕ್‌ ಬಾಟಲಿ ಬಳಕೆ ನರವ್ಯೂಹ ಹಾಗೂ ಕ್ಯಾನ್ಸರ್‌ ನಂತ ಆಪಾಯಕಾರಿ ರೋಗಗಳನ್ನು ತಂದೊಡ್ಡುತ್ತಿದ್ದರೂ ಬಳಕೆ ಮಾಡುವುದು ಕಡಿಮೆಯಾಗಿಲ್ಲ.

ಏನು ಮಾಡುವುದು?
ಪ್ಲಾಸ್ಟಿಕ್‌ ಮರು ಬಳಕೆಯತ್ತ ಹಲವು ಚಿಂತನೆಗಳು ನಡೆಯುತ್ತಿದ್ದರೂ ನಗರದ ಅಭಿವೃದ್ಧಿ ಮತ್ತು ಸೌಂದರ್ಯ ವರ್ಧನೆಯಲ್ಲಿ ಇದರ ಬಳಕೆ ಬಹಳ ಕಡಿಮೆ. ಉತ್ಪಾದಿಸಿದ ಮತ್ತು ಬಳಕೆ ಮಾಡಿದ ಪ್ಲಾಸ್ಟಿಕ್‌ ಅನ್ನು ಪರಿಸರ ಸ್ನೇಹಿಗೊಳಿಸಿದರೆ ಇದರ ಸಾಕಷ್ಟು ಪ್ರಯೋಜನ ಎಲ್ಲರಿಗೂ ಸಿಗುವುದು.

ಅಷ್ಟೇ ಅಲ್ಲ ಸಿಸಾಕೆಟ್‌ ಪ್ರಾಂತ್ಯದ ಕಾಂಬೋಡಿಯಾ ಗಡಿಯಲ್ಲಿ ಪ್ಲಾಸ್ಟಿಕ್‌ ಬಾಟಲಿಗಳಿಂದ ನಿರ್ಮಾಣಗೊಂಡಿರುವ ಬಾಟಲಿ ಟೆಂಪಲ್‌ ಜಗದ್ವಿಖ್ಯಾತವಾಗಿದೆ. ಸಾಕಷ್ಟು ಪ್ರವಾಸಿಗರನ್ನೂ ಆಕರ್ಷಿಸುತ್ತಿವೆ. ಇನ್ನು ಕೆಲವು ದೇಶಗಳಲ್ಲಿ ಪ್ಲಾಸ್ಟಿಕ್‌ ಬಾಟಲಿಗಳಿಂದ ಸಾರ್ವಜನಿಕ ಉದ್ಯಾನವನ, ರೋಡ್‌ ಡಿವೈಡರ್‌ ಗಳನ್ನು ಆಕರ್ಷಕಗೊಳಿಸಲು ಬಳಸಲಾಗುತ್ತಿದೆ.

ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಬಾಟಲಿಗಳ ಬಳಕೆ ಕಡಿಮೆಯೇನಿಲ್ಲ. ಸ್ವಚ್ಛಗೊಳಿಸಿದ ಇಂತಹ ಪ್ಲಾಸ್ಟಿಕ್‌ ಬಾಟಲಿಗಳನ್ನು ಆಡಳಿತದ ವತಿಯಿಂದ ಸಂಗ್ರಹಿಸಿ ಅದನ್ನು ನಗರ ಸೌಂದರ್ಯ ವೃದ್ಧಿಗಾಗಿ ಬಳಸಿಕೊಳ್ಳಬಹುದು. ಆಕರ್ಷಕ ಗೋಪುರ ನಿರ್ಮಾಣಕ್ಕೂ ಉಪಯೋಗಿಸಬಹುದು.

ರಸ್ತೆಯ ಡಿವೈಡರ್‌ ನಲ್ಲಿ ಹೂಗಿಡಗಳನ್ನು ನೆಡಲು, ಉದ್ಯಾನ ವನಗಳನ್ನು ಸುಂದರಗೊಳಿಸಲು ಮರು ಬಳಕೆ ಮಾಡಬಹುದು. ಇದು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದು ಮಾತ್ರವಲ್ಲ ಇದರಿಂದ ತ್ಯಾಜ್ಯವೊಂದನ್ನು ಸಂಪೂರ್ಣ ಮರು ಬಳಕೆ ಮಾಡಿದಂತಾಗುವುದು.

ನೈಜೀರಿಯಾ ಮಾದರಿ
ಆಫ್ರಿಕಾ ಖಂಡದ ನೈಜೀರಿಯಾ ದೇಶದಲ್ಲಿ ಉತ್ಪಾದನೆಯಾಗುತ್ತಿದ್ದ ಪ್ಲಾಸ್ಟಿಕ್‌ ಬಾಟಲಿಗಳನ್ನು ಪರಿಸರ ಸ್ನೇಹಿಯನ್ನಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಪ್ಲಾಸ್ಟಿಕ್‌ಗಳನ್ನು ಮನೆ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದಾರೆ. ಏನಿಲ್ಲವಾದರೂ ಸುಮಾರು 3 ಮಿಲಿಯನ್‌ ಪ್ಲಾಸ್ಟಿಕ್‌ ಬಾಟಲಿಗಳಿಂದ ಮನೆಯ ಟೆರೇಸ್‌, ಪ್ರತ್ಯೇಕ ಕೊಠಡಿ, ಒಳಾಂಗಣವನ್ನು ಆಕರ್ಷಣೀಯಗೊಳಿಸಲು ಬಳಕೆ ಮಾಡಲಾಗುತ್ತಿದೆ. ಸುಮಾರು 17 ಮಿಲಿಯನ್‌ ಮನೆಗಳ ನಿರ್ಮಾಣಕ್ಕೆ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿಕೊಳ್ಳಲಾಗಿದೆ. ಈ ಪ್ಲಾಸ್ಟಿಕ್‌ ಬಾಟಲಿಯಿಂದ ನಿರ್ಮಾಣ ಮಾಡಿದ ಮನೆಗಳು ಪ್ರಾಣಿ ಹಾಗೂ ಮಾನವ ತ್ಯಾಜ್ಯದಿಂದ ಬಿಡುಗಡೆಯಾಗುವ ಮಿಥೇನ್‌, ಸೌರ ಶಕ್ತಿಯನ್ನೂ ನಿಯಂತ್ರಿಸುವುದರಿಂದಾಗಿ ಈ ಮನೆಗಳು ಕಾರ್ಬನ್‌ ಮುಕ್ತ ಮನೆಗಳಾಗುತ್ತವೆ. ಈ ಮಾದರಿಯ ಮನೆಗಳ ನಮ್ಮ ಮಂಗಳೂರಿಗೂ ಬಂದರೆ ಉತ್ತಮವಲ್ಲವೇ? 

ಶಿವ ಸ್ಥಾವರಮಠ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.