ಮೊದಲ ಪರ್ಯಾಯಕ್ಕೆ 2 ಲಕ್ಷ ರೂಪಾಯಿ ಸಾಲ!

Team Udayavani, Dec 30, 2019, 6:06 AM IST

modala-parya

1950ರ ದಶಕದಲ್ಲಿ ಶ್ರೀಕೃಷ್ಣ ಮಠ – ಅಷ್ಟಮಠಗಳ ಸ್ಥಿತಿ ಹೇಗಿತ್ತು ಎನ್ನುವುದನ್ನು ಪೇಜಾವರ ಶ್ರೀಗಳ ಮಾತಿನಲ್ಲಿ ಅರಿಯಬಹುದು. ಶ್ರೀಪಾದರ ಮೊದಲ ಪರ್ಯಾಯದ ಅವಧಿ 1952-53. ಅದಕ್ಕೂ ಹಿಂದಿನ ವರ್ಷಗಳಲ್ಲಿ ರೇಶನ್‌ ಇತ್ತು. ಅಂದರೆ ಊಟಕ್ಕೆ ಬೇಕಾದ ಅಕ್ಕಿಯ ಸರಬರಾಜು- ವಿತರಣೆಗೂ ನಿಯಂತ್ರಣವಿತ್ತು. ಆಹಾರ ಧಾನ್ಯದ ಪೂರೈಕೆ ಇರಲಿಲ್ಲ.

ಶ್ರೀಗಳ ಮೊದಲ ಪರ್ಯಾಯದ ಅವಧಿಯಲ್ಲಿ ಆ ನಿರ್ಬಂಧ ಹೋಯಿತು. ಆಗ ಈಗಿನಂತೆ ಹೊರಗಿನ ಯಾತ್ರಿಕರು ಬರುತ್ತಿರಲಿಲ್ಲ. ಬಂದವರಿಗೆ ಊಟ ಒದಗಿಸುವುದೇ ಆ ಕಾಲದಲ್ಲಿ ಮಠಕ್ಕೆ ಬಹಳ ದೊಡ್ಡ ಖರ್ಚು. ಊಟಕ್ಕೆ ಬರುವವರಿಗೂ ಹಾಗೆಯೇ, ಒಂದು ಹೊತ್ತಿನ ಊಟ ಮಠದಲ್ಲಿ ಆದರೆ ಉಳಿತಾಯ.

ಆದರೆ ಮಠದ ಆಡಳಿತದ ದೃಷ್ಟಿಯಿಂದ ಇದೊಂದು ಕೇವಲ ಖರ್ಚಿನ ಬಾಬ್ತು ಎಂದಿತ್ತು. ಆಗ ಪರ್ಯಾಯ ಪೀಠವೇರುವ ಮಠದ ಯೋಜನೆಗಳೆಂದರೆ ಕಟ್ಟಡಗಳನ್ನು ಕಟ್ಟುವುದು ಇರಲಿಲ್ಲ. ಯಾತ್ರಿಕರು, ಭಕ್ತರಿಗೆ ಅನ್ನಪ್ರಸಾದ ನೀಡುವುದೇ ದೊಡ್ಡ ಯೋಜನೆ.

ಪ್ರಥಮ ಪರ್ಯಾಯ ಕಾಲದಲ್ಲಿ ಪೇಜಾವರ ಶ್ರೀಗಳು ಆಗುಂಬೆಯಿಂದ ಕಷ್ಟಪಟ್ಟು ಅಕ್ಕಿ ತರಿಸಬೇಕಾಯಿತು. ಪೀಠದಿಂದ ನಿರ್ಗಮಿಸುವಾಗ ಶ್ರೀಮಠಕ್ಕೆ 2 ಲಕ್ಷ ರೂ. ಗಳಷ್ಟು ಸಾಲವಾಯಿತು. ಇದು ಆ ಕಾಲದಲ್ಲಿ ದೊಡ್ಡ ಮೊತ್ತದ ಸಾಲ. ಆಗ ಮಠಗಳ ಮೇಲೆ ಸರಕಾರದ್ದೂ ನಿಯಂತ್ರಣವಿತ್ತು.

ಈಗ ಯಾತ್ರಿಕರು, ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಕೆಲವು ಬಾರಿ 25 ಸಾವಿರ ಜನರು ಊಟ ಮಾಡುವುದಿದೆ. ಈಗ ಸಾಲ ಇಲ್ಲ. ಬಂದ ಹಣ ಅಲ್ಲಿಂದಲ್ಲಿಗೆ ಸರಿಯಾಗುತ್ತದೆ. ಸಾಲ ಮಾಡಬೇಕಾದ ಪರಿಸ್ಥಿತಿ ಇಲ್ಲ. ಶ್ರೀಕೃಷ್ಣ ಮಠಕ್ಕೆ ಬಂದ ಹಣದಿಂದಲೇ ಮೂಲ ಸೌಕರ್ಯ, ಅಭಿವೃದ್ಧಿಗಳನ್ನು ಮಾಡಬಹುದಾಗಿದೆ.

ಇದೇ ವೇಳೆಗೆ ಆಗಿನ ಆಸ್ತಿಪಾಸ್ತಿ ಈಗ ಯಾವುದೂ ಇಲ್ಲ. ಆಗ ಒಂದೊಂದು ಮಠಕ್ಕೆ ಮೂರ್‍ನಾಲ್ಕು ಸಾವಿರ ಅಕ್ಕಿ ಮುಡಿ ಬರುವಷ್ಟು ಆಸ್ತಿಗಳಿದ್ದವು. ಈಗ ಇವು ಯಾವುದೂ ಇಲ್ಲ. ಆಗ ಅಕ್ಕಿಯ ಸಾಮರ್ಥ್ಯವಿದ್ದರೂ ಅದಕ್ಕೆ ಪೂರಕವಾಗಿ ಬೇಕಾದ ಹಣಕಾಸು ಸಾಮರ್ಥ್ಯವಿರಲಿಲ್ಲ.

ಆಗ ಪೇಜಾವರ ಮಠಕ್ಕೆ 3,000 ಅಕ್ಕಿ ಮುಡಿ ಬರುತ್ತಿತ್ತು. ಆಗ ಸೇವೆ ಈಗಿನಂತೆ ಬರುತ್ತಿರಲಿಲ್ಲ. 3,000 ಅಕ್ಕಿ ಮುಡಿಯಿಂದ ಪೇಜಾವರ ಮಠದ ಖರ್ಚು ನಡೆಯುತ್ತಿತ್ತೇ ವಿನಾ ಶ್ರೀಕೃಷ್ಣಮಠದ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಸಾಲ ಮಾಡಬೇಕಾಗುತ್ತಿತ್ತು ಎಂದು ಶ್ರೀಗಳು ಹೇಳುತ್ತಿದ್ದರು.

ಟಾಪ್ ನ್ಯೂಸ್

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ve-46

ರಾಜಕಾರಣ- ಭ್ರಷ್ಟಾಚಾರ- ಸ್ವರ್ಗ- ಪರಿಸರ- ಪುಣ್ಯ…

ve-44

ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನ

ve-47

ರಾಮ-ವಿಠಲ, ಶ್ರೀಕೃಷ್ಣ, ರಾಮಲಲ್ಲಾ…

bg-68

ಪೇಜಾವರ ಶ್ರೀ ಬದುಕಿನ ಸಾರ

kolar-tdy-1

ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಶ್ರೀ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.