ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಗಜಕರ್ಣ
Team Udayavani, Jun 8, 2018, 6:00 AM IST
ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್, ತೆಕ್ಕಟ್ಟೆ, ಗೀತಾನಂದ ಫೌಂಡೇಶನ್ ಕೋಟ, ರಂಗ ಸಂಪದ ಕೋಟ, ಯಶಸ್ವಿ ಕಲಾವೃಂದ (ರಿ.)ಕೊಮೆ, ಇವರ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ನಡೆದ “ರಂಗ ರಂಗು-2018′ ರಂಗ ತರಬೇತಿ ಶಿಬಿರದಲ್ಲಿ 18ದಿನಗಳ ತರಬೇತಿ ಹೊಂದಿದವರ ಜೂನಿಯರ್ ವಿಭಾಗದ ನಾಟಕ ಪ್ರದರ್ಶನ ಗಮನ ಸೆಳೆಯುವಂತಿತ್ತು. ಬಿಳಿಗೆರೆ ಕೃಷ್ಣಮೂರ್ತಿಯವರ ಕೃತಿ , ರಂಗಕರ್ಮಿ ರೋಹಿತ್ ಎಸ್. ಬೆ„ಕಾಡಿ ಬಳಗದವರ ತರಬೇತಿಯಲ್ಲಿ ಸಿದ್ಧಗೊಂಡ ಅದ್ಭುತವಾದ ನೆರಳು ಬೆಳಕಿನ ಸಂಯೋಜನೆಯ ಕಲಾತ್ಮಕ ನಾಟಕ “ಗಜಕರ್ಣ’ಯಶಸ್ವಿಯಾಗಿ ಮೂಡಿಬಂದಿದೆ.
ವೇಗದ ಬದುಕಿನಲ್ಲಿ ಮಾನವ ತನ್ನ ಸ್ವಾರ್ಥ ಚಿಂತನೆಯಿಂದ ಪ್ರಕೃತಿಯನ್ನೇ ನಾಶ ಮಾಡಿ ಕಾಂಕ್ರಿಟ್ ಕಾನನವನ್ನು ನಿರ್ಮಿಸಿ ಪ್ರಕೃತಿಯ ಮೂಲ ಸ್ವರೂಪಕ್ಕೆ ಧಕ್ಕೆ ತಂದಿದ್ದಾನೆ. ಪ್ರಕೃತಿ ಮನುಷ್ಯನೊಬ್ಬನ ಸ್ವತ್ತಲ್ಲ , ಬದಲಾಗಿ ಎಂಬತ್ತು ಕೋಟಿ ಜೀವರಾಶಿಗಳಿಗೆ ಸೇರಿದ್ದು, ಪ್ರಸ್ತುತ ಆಧುನಿಕತೆಯ ಭರಾಟೆಯಲ್ಲಿ ಸಿಲುಕಿ ನಿಸರ್ಗದಲ್ಲಿನ ಗಾಳಿ, ನೀರು ಎಲ್ಲ ಕಲುಷಿತಗೊಳ್ಳುತ್ತಿದ್ದು ಪ್ರಕೃತಿ ಕೂಗು, ಕೊರಗು ಹೇಗಿರಬಹುದು ? ಈ ಪ್ರಶ್ನೆಯೊಂದಿಗೆ ರೂಪುಗೊಂಡ ನಾಟಕ ಗಜಕರ್ಣ. ಇಡೀ ನಾಟಕ ಕೇಂದ್ರ ಬಿಂದುವಾದ ಅಗಲ ಕಿವಿಯ ಅರಿವುಗಾರನಾಗಿ ಈ ಪ್ರಕೃತಿಯ ವಿರುದ್ಧ ಅಟ್ಟಹಾಸ ಮೆರೆಯುತ್ತಿರುವ ಈ ಮನುಕುಲಕ್ಕೆ ಕಟ್ಟ ಕಡೆಯ ಸಂದೇಶ ನೀಡಿ, ಸಮಾಜಕ್ಕೆ ಅರಿವು ಮೂಡಿಸುವ ಆಶಯದೊಂದಿಗೆ ಅಭಿವ್ಯಕ್ತಿಗೊಂಡಿದೆ.
ನಾನೇ ಅರಿವುಗಾರನಾಗಿ ಬರುತ್ತೇನೆ ಎಂದು ಬರುವ ಮಕ್ಕಳ ಪ್ರೀತಿಯ ಗಣೇಶನ ನೆರವಿನಿಂದ ಪ್ರಕೃತಿ ಮೂಲ ನದಿ, ಕಾಡು, ಬೆಟ್ಟ , ಆಕಾಶ ಮುಂತಾದವುಗಳ ಕೊರಗನ್ನು ಎಳೆಯ ಮನಸ್ಸಿನಿಂದ ಹಿರಿಯ ಮನಸ್ಸುಗಳಿಗೆ ಈ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದಿಂದಾಗಿ ಆಗಬಹುದಾದ ಅನಾಹುತಗಳ ಬಗೆಗೆ ವಿಭಿನ್ನವಾಗಿ ಎಚ್ಚರಿಸುವ ದೃಶ್ಯಗಳು ಇಡೀ ನಾಟಕದ ಜೀವಾಳವಾಗಿದೆ.
ನಾಟಕದಲ್ಲಿ ಕೇಡಾಪುರ ಇಂದಿನ ಆಧುನಿಕ ಸಿಟಿಯಾಗಿದೆ. ಈ ಕೇಡಾಪುರದಿಂದ ಪುರಾತನ ರಾಜನ ಕಾಲಕ್ಕೆ ಹೋಗುವ ಗಜಕರ್ಣ ಇಲ್ಲಿನ ವಾಸ್ತವ ಸ್ಥಿತಿಯನ್ನು ಹೇಳುತ್ತಾನೆ. ಕೇಡಾಪುರದಲ್ಲಿ ಮಕ್ಕಳು ಮೊದಲಿಗೆ ಕಿವಿಗಳನ್ನು ಎಳೆದು ಅಮಾನವೀಯವಾಗಿ ಆಟವಾಡಿದರೆ , ದೊಡ್ಡವರು ಇವನ ಕಿವಿಗಳಿಗೆ ಪ್ರಕೃತಿಯ ಮಾತು ಕೇಳಿಸಿಕೊಳ್ಳುವ ಮಾಂತ್ರಿಕ ಶಕ್ತಿ ಇದೆ ಎಂದು ಅರಿತು ಪ್ರಕೃತಿಯ ಗುಟ್ಟನ್ನು ತಿಳಿಯಲು ಗಜಕರ್ಣನನ್ನು ಪೀಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗಜಕರ್ಣ ಊರುಬಿಟ್ಟು ಹೊರಟು ಕಾಡುದಾರಿಯಲ್ಲಿ ಎದುರಾಗುವ ಪ್ರಕೃತಿಯ ಮಕ್ಕಳು , ಪ್ರಕೃತಿ ನಾಶದ ಬಗ್ಗೆ ಆಗುವ ವಿಕೋಪಗಳ ಬಗ್ಗೆ ಎಚ್ಚರಿಸುವ ದೃಶ್ಯಗಳು ಹಾಗೂ ತೆರೆಯ ಹಿಂದೆ ತೇಲಿ ಬರುವ ಪರಿಸರ ಗೀತೆ ಪ್ರೇಕ್ಷಕನನ್ನು ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊಯ್ಯುತ್ತದೆ.ಅಗಲ ಕಿವಿಯ ಅರಿವುಗಾರನಾದ ಗಜಕರ್ಣನ ಮಾತಿಗೆ ಪ್ರೇರೇಪಿತರಾದ ಮಕ್ಕಳು ದೊಡ್ಡವರ ಮಾತು ಕೇಳದಾದರೂ, ಈ ಭುವಿಯೊಳಗಿನ ಚಿನ್ನ ತೋರಿಸುವಂತೆ ಪೀಡಿಸುತ್ತಾರೆ ನಂತರ ಅನ್ಯ ಮಾರ್ಗವಿಲ್ಲದೆ ಅಗಲ ಕಿವಿಯ ಅರಿವುಗಾರ ಗಜಕರ್ಣ ನಿಧಿ ಇರುವ ಜಾಗವನ್ನು ತೋರಿಸಿದಾಗ ಜನರೆಲ್ಲ ಚಿನ್ನ ಅಗೆಯುತ್ತಿದ್ದಾಗ ರಾಜಭಟರು ಗಜಕರ್ಣನನ್ನು ಸೆರೆಹಿಡಿದು ರಾಜರ ಬಳಿಗೆ ಕರೆದಾಗ ಈ ಕತೆಯನ್ನು ರಾಜನ ಬಳಿ ಹೇಳುತ್ತಾನೆ.
ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.