ಸುನಾದ ರಜತ ಕಲರವದಲ್ಲಿ 25 ತಾಸು ನಾದೋಪಾಸನೆ 


Team Udayavani, Jun 1, 2018, 6:00 AM IST

z-9.jpg

ಸುನಾದ ಸಂಗೀತ ಕಲಾಶಾಲೆಯ ಇಪ್ಪತ್ತೈದು ವರ್ಷದ ಸಂಗೀತ ಕಲಾಚರಣೆಯ ಸಂಭ್ರಮ – ಎ. 21 ಬೆಳಗಿನಿಂದ ಎ.22ಬೆಳಗಿನ ತನಕ ಸುನಾದ ವಸತಿಯುತ ಶಾಲೆಯ ಆವರಣದಲ್ಲಿ ನಡೆಯಿತು. ಕಲಾ ಶಾಲೆಯ ಸುಮಾರು 30 ಮಂದಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು ತ್ಯಾಗರಾಜರ “ಪಂಚರತ್ನ’ ಗೋಷ್ಠಿ ಗಾಯನವನ್ನು ಸ್ಮರಣೆಯ ಮೂಲಕವೇ ಪ್ರಸ್ತುತ ಪಡಿಸಿದ್ದು ಮೆಚ್ಚ ತಕ್ಕ ಅಂಶ. ಗೋಷ್ಠಿ ಗಾಯನದ ಬಳಿಕ ಮಂಗಳವಾದ್ಯದ ರೂಪದಲ್ಲಿ ಸ್ಯಾಕೊÕàಫೋನ್‌ ವಾದನವು ನಡೆಯಿತು. ವಿಶಿಷ್ಟ ಗಾಯನ ಪ್ರಕಾರವಾದ ಅವಧಾನ ಪಲ್ಲವಿಯನ್ನು ಏರು ಶೃತಿಯಲ್ಲಿ ಕಾಂಚನ ಸಹೋದರಿಯರಾದ ಎಸ್‌. ಶ್ರೀರಂಜನಿ ಮತ್ತು ಎಸ್‌. ಶ್ರುತಿರಂಜನಿಯವರು ಪ್ರಸ್ತುತಪಡಿಸಿದರು. ಇವರಿಗೆ ಬಿ. ರಘುರಾಂ ವಯಲಿನ್‌ನಲ್ಲಿಯೂ, ಜಿ.ಎಸ್‌. ರಾಮಾನುಜಂ ಮೃದಂಗದಲ್ಲಿಯೂ, ವಿ.ಎಸ್‌. ರಮೇಶ್‌ ಅವರು ಘಟಂನಲ್ಲಿಯೂ ಸಹಕರಿಸಿದರು. ಮುಂದೆ ಮುತ್ತುಸ್ವಾಮಿ ದೀಕ್ಷಿತರ ಮತ್ತು ಕೋಟೇಶ್ವರ ಅಯ್ಯರ್‌ ಅವರ ರಚನೆಗಳನ್ನು ಟಿ.ವಿ. ರಾಮ್‌ಪ್ರಸಾದ್‌, ಚೆನ್ನೈ ಅವರು ವೇಗವಾಹಿನಿ, ದ್ವಿಜಾವಂತಿ, ಸಾಮ ಮೊದಲಾದ ರಾಗಗಳಿಂದ ರಸಿಕರ ಮನಗೆದ್ದರು. ವಿಠಲ ರಾಮಮೂರ್ತಿ ವಯಲಿನ್‌ನಲ್ಲಿಯೂ, ಕಾಂಚನ ಎ. ಈಶ್ವರ ಭಟ್‌ ಅವರು ಮೃದಂಗದಲ್ಲಿಯೂ, ತುಮಕೂರು ವಿ. ಶಶಿಶಂಕರ್‌ ಅವರು ಘಟಂನಲ್ಲಿಯೂ ಸಹಕರಿಸಿದರು.

 ತೃಶ್ಶೂರಿನ ಅನಂತ ಪದ್ಮನಾಭ ವೀಣಾವಾದನ ಝೇಂಕಾರಕ್ಕೆ ಪ್ರಸಿದ್ಧವಾದದ್ದು. ವಿದ್ವತ್‌ಪೂರ್ಣವಾಗಿಯೂ, ರಂಜನೀಯವಾಗಿಯೂ ಆಭೇರಿ ರಾಗದ ನಗುಮೋಮು ಕೃತಿಯನ್ನು ಪ್ರಸ್ತುತಪಡಿಸಿ ಮನಗೆದ್ದರು. ಆನೂರು ಅನಂತಕೃಷ್ಣ ಶರ್ಮ ಮೃದಂಗದಲ್ಲಿ, ಉಡುಪಿ ಶ್ರೀಧರ್‌ ಘಟಂನಲ್ಲಿ ಸಹಕರಿಸಿದರು. ಮಧ್ಯಾಹ್ನ ಜಯಚಾಮರಾಜೇಂದ್ರ ಒಡೆಯರ್‌ ಮತ್ತು ಮೈಸೂರು ವಾಸುದೇವಾಚಾರ್ಯರ ಕೃತಿಗಳ ಗಾಯನವನ್ನು ಮೈಸೂರಿನ ಎನ್‌. ಶ್ರೀನಾಥ್‌ ಪ್ರಸ್ತುತ ಪಡಿಸಿದರು. ಅವರು ಧರ್ಮವತಿ ರಾಗವನ್ನು ಸುಂದರವಾಗಿ ವಿಸ್ತರಿಸಿದರು. ಸಿ.ಎನ್‌. ತ್ಯಾಗರಾಜು ವಯಲಿನ್‌ನಲ್ಲಿ, ವಸಂತಕೃಷ್ಣ ಕಾಂಚನ ಮೃದಂಗದಲ್ಲಿ, ಬಾಲಕೃಷ್ಣ ಹೊಸಮನೆ ಮೋರ್ಸಿಂಗ್‌ನಲ್ಲಿ ಸಹಕಾರ ನೀಡಿದರು.

ಕಾಂಚನ ಗರಡಿಯಲ್ಲಿಯೇ ಪಳಗಿರುವ ಲತಾ ತಂತ್ರಿ ಮತ್ತು ಪ್ರಭಾ ರಮೇಶ್‌ ಅವರು ತಮ್ಮ ಪ್ರಸ್ತುತಿಯಲ್ಲಿ ಲತಾಂಗಿ ಮತ್ತು ಶಂಕರಾಭರಣ ರಾಗವನ್ನು ಉನ್ನತ ಮಟ್ಟದಲ್ಲಿ ಪ್ರಸ್ತುತ ಪಡಿಸಿದರು. ಬಿ. ರಘುರಾಮ್‌ ವಯಲಿನ್‌ನಲ್ಲಿ, ಜಿ.ಎಸ್‌. ರಾಮಾನುಜಂ ಮೃದಂಗದಲ್ಲಿ, ವಿ.ಎಸ್‌. ರಮೇಶ್‌ ಮೋರ್ಸಿಂಗ್‌ನಲ್ಲಿ ಸಹಕಾರ ನೀಡಿದರು. ಆ ಬಳಿಕ ಮೈಸೂರು ಸಹೋದರರೆಂದೇ ಖ್ಯಾತರಾದ ನಾಗರಾಜ್‌ ಮತ್ತು ಮಂಜುನಾಥ್‌ ಅವರ ದ್ವಂದ್ವ ಪಿಟೀಲು ವಾದನದಲ್ಲಿ ಇಡೀ ಕಛೇರಿಗೆ ಕಲಶಪ್ರಾಯವೆನ್ನುವಂತೆ ಮಧ್ಯಮಾವತಿ ರಾಗವು ವಿಜೃಂಭಿಸಿತು. ಸಹೋದರರು ತಮ್ಮ ಅಪೂರ್ವ ಬೆರಳುಗಾರಿಕೆ ಮತ್ತು ಉಜ್ವಲ ವಾದನ ಶೈಲಿಯಿಂದ ಶ್ರೋತೃಗಳ ಮೆಚ್ಚುಗೆ ಪಡೆದರು. ಅರ್ಜುನ್‌ಕುಮಾರ್‌ ಹಾಗೂ ತುಮಕೂರು ಬಿ. ರವಿಶಂಕರ್‌ ಅವರು ಮೃದಂಗ ವಾದನದಲ್ಲಿ ಸಹಕಾರ ನೀಡಿದರು.

ಏಕಮಾತ್ರ ಹಿಂದೂಸ್ಥಾನೀ ಗಾಯನವನ್ನು ನಡೆಸಿಕೊಟ್ಟವರು ಪಂಡಿತ್‌ ರವಿಕಿರಣ್‌ ಮಣಿಪಾಲ. ಗಂಭೀರವಾದ ಚಲನ್‌ಗಳ ಮೂಲಕ ಬೈಜುವಂತಿ ರಾಗದಲ್ಲಿ ಬಡಾಖ್ಯಾಲ್‌ಗಾಗಿ ಕ್ರಮಬದ್ಧ ಬಡತ್‌ನ್ನು ಒದಗಿಸಿದರು. ಅಷ್ಟೇ ಅಪ್ಯಾಯಮಾನವಾಗಿ ಮಾಲ್‌ಕೌಂಸ್‌ ಕೂಡಾ ಪ್ರಸ್ತುತಗೊಂಡಿತು. ಸಹ ಗಾಯನದಲ್ಲಿ ರವಿಕಿರಣ್‌ರ ಶಿಷ್ಯ ಚೈತನ್ಯ ಸಹಕರಿಸಿದರು. ನಿತ್ಯಾನಂದ ಭಟ್‌ ಹಾರ್ಮೋನಿಯಂನಲ್ಲಿ, ಶಶಿಕಿರಣ್‌ ತಬ್ಲಾದಲ್ಲಿ ಸಹಕಾರ ನೀಡಿದರು.

ಬಳ್ಳಾರಿ ಎಂ. ರಾಘವೇಂದ್ರ ತಮ್ಮ ಚಿಕ್ಕಪ್ಪ ಶೇಷಗಿರಿ ಆಚಾರ್‌ ಅವರ ಕೃತಿಗಳನ್ನು ಪ್ರಸ್ತುತ ಪಡಿಸಿದರು. ಅವರ ಪ್ರಸ್ತುತಿಯಲ್ಲಿ ಅಪರೂಪ ಗಾಂಗೇಯ ಭೂಷಿಣಿ, ದಿವ್ಯಮಣಿ ಹ್ಲಾದಿನಿ ರಾಗಗಳು ಕಳೆಗಟ್ಟಿದವು. ವೇಣುಗೋಪಾಲ್‌ ಶಾನುಭಾಗ್‌ ವಯಲಿನ್‌ನಲ್ಲಿ, ತುಮಕೂರು ಬಿ. ರವಿಶಂಕರ್‌ ಮೃದಂಗದಲ್ಲಿ, ತುಮಕೂರು ಬಿ. ಶಶಿಶಂಕರ್‌ ಘಟಂನಲ್ಲಿ ಉತ್ತಮ ಸಹಕಾರ ನೀಡಿದರು.

ಪ್ರಾತಃಕಾಲದಲ್ಲಿ ವೇಣುವಾದನವನ್ನು ಪ್ರಸ್ತುತಪಡಿಸಿದ ಮೈಸೂರು ಚಂದನ್‌ ಕುಮಾರ್‌ ವಿಶಿಷ್ಟ ಬೆರಳುಗಾರಿಕೆ ಮತ್ತು ಆಕರ್ಷಕ ತುತ್ತುರಾಕಾರದಿಂದ ಮೆಚ್ಚುಗೆ ಗಳಿಸಿದರು. ಶಹನ, ದ್ವಿಜಾವಂತಿ ಮುಂತಾದ ರಾಗಗಳ ರಚನೆಗಳನ್ನು ವಿದ್ವತ್‌ಪೂರ್ಣ ವಾದನ ಶೈಲಿಯಲ್ಲಿ ಪ್ರಸ್ತುತ ಪಡಿಸಿದರು. ವಯಲಿನ್‌ನಲ್ಲಿ ಸಿ.ಎನ್‌. ತ್ಯಾಗರಾಜು, ಮೃದಂಗದಲ್ಲಿ ಅರ್ಜುನ್‌ ಕುಮಾರ್‌ ಮತ್ತು ತ್ರಿಚ್ಚಿ ಕೆ. ಆರ್‌. ಕುಮಾರ್‌ ಘಟಂನಲ್ಲಿ ಸಹಕಾರ ನೀಡಿದರು.

 ಮೈಸೂರಿನ ಎನ್‌.ಆರ್‌. ಪ್ರಶಾಂತ್‌ ಗಾಯನ ಕಾರ್ಯಕ್ರಮವನ್ನು ತ್ಯಾಗರಾಜ ಕೃತಿಗಳ ಗಾಯನಕ್ಕೆ ಮೀಸಲಿಟ್ಟು ವಿದ್ವತ್‌ ಮತ್ತು ರಕ್ತಿ ಹೇಗೆ ಜೊತೆ-ಜೊತೆಯಾಗಿ ಹೋಗಬಲ್ಲುದು ಅನ್ನುವುದಕ್ಕೆ ಮಾದರಿಯಾದ ಒಂದು ಕಛೇರಿಯನ್ನು ನಡೆಸಿಕೊಟ್ಟರು. ಇವರ ಕಛೇರಿಯಲ್ಲಿ ಪ್ರಕಟಗೊಂಡ ರೀತಿಗೌಳ, ಮೋಹನ, ನಾಟಕುರುಂಜಿ ಮೊದಲಾದ ರಾಗಗಳು ಸಾಹಿತ್ಯ ಶುದ್ಧತೆ ಮತ್ತು ಉತ್ತಮ ಅಲಂಕಾರಗಳಿಂದ ಗಮನ ಸೆಳೆದವು. ವಿಠಲ ರಾಮಮೂರ್ತಿ ವಯಲಿನ್‌ನಲ್ಲಿ, ಆನೂರು ಅನಂತಕೃಷ್ಣ ಶರ್ಮ ಮೃದಂಗದಲ್ಲಿ, ಜಿ.ಎಸ್‌. ರಾಮಾನುಜಂ ಘಟಂನಲ್ಲಿ, ವಿ.ಎಸ್‌. ರಮೇಶ್‌ ಮೋರ್ಸಿಂಗ್‌ನಲ್ಲಿ ಸಹಕಾರ ನೀಡಿದರು. ಈ ನಡುವೆ ಸುನಾದ ಸಂಗೀತ ಶಾಲೆಯ ಬೇರೆ – ಬೇರೆ ಶಾಖೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಿರು ಸಂಗೀತ ಕಛೇರಿಗಳನ್ನು ನೀಡಿದರು.

 ಉಮಾಶಂಕರಿ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.