ಮನವನ್ನು ಮೀಟಿದ ಬಾಲಕ
Team Udayavani, Jul 7, 2017, 4:05 PM IST
ಮಳೆಗಾಲದ ಮಧ್ಯ ತುಸುವೇ ಬಿಸಿಲು ಕಂಡ ಆಹ್ಲಾದ ಕರವಾದ ಇಳಿಹಗಲಿನಲ್ಲಿ ವೀಣೆಯ ನಾದ ಅಲೆಅಲೆಯಾಗಿ ತೇಲಿಬರುತ್ತಿತ್ತು. ಆರಭಿ ರಾಗದ ನಾದಸೌಖ್ಯದ ಸೆಳೆತಕ್ಕೊಳಗಾಗಿ ಸಭೆಯೊಳಗೆ ಪ್ರವೇಶಿಸಿದಾಗ ನಾವು ನಿರೀಕ್ಷಿಸಿದ್ದು ಹಲವು ವರ್ಷಗಳ ಅನುಭವವುಳ್ಳ ಪ್ರೌಢ ಕಲಾವಿದರನ್ನು; ಆದರೆ ವೇದಿಕೆಯಲ್ಲಿ ಕಂಡದ್ದು ಇನ್ನೂ ಹದಿನಾರು ತುಂಬದ ಬಾಲಕನನ್ನು! ಬೆಂಗಳೂರಿನ ಈ ಕಿಶೋರ ರಮಣ ಬಾಲಚಂದ್ರನ್. ಅಸಾಧಾರಣವೆನ್ನಬಹುದಾದ ಓರ್ವ ಬಾಲ ಪ್ರತಿಭೆ!
ಮಣಿಪಾಲದ “ಕಲಾ ಸ್ಪಂದನ’ ಸಂಸ್ಥೆಯ 22ನೆಯ ವಾರ್ಷಿಕೋತ್ಸವ ವೀಣಾ ವರ್ಷ ವೈಭವದ ಅಂಗವಾಗಿ ಈ ಕಲಾವಿದನ ಕಛೇರಿ ಉಡುಪಿಯ ರಾಜಾಂಗಣದಲ್ಲಿ 2-7-2017ರಂದು ನಡೆಯಿತು.
ರಮಣನದು ಚೂರೂ ಪಿಸಿರಿಲ್ಲದ ಶುದ್ಧವಾದ ನುಡಿಸಾಣಿಕೆ. ಸಾಹಿತ್ಯದ ಉತ್ತಮ ತಿಳಿವಳಿಕೆಯೊಂದಿಗೆ ಕೃತಿಯ ಶಬ್ದರಚನೆಗೆ ಭಂಗ ಬಾರದಂತೆ ವಹಿಸುವ ಕಾಳಜಿ. ಪ್ರತಿಯೊಂದು ಮೀಟಿನಲ್ಲೂ ದೀರ್ಘವಾಗಿ ಅನುರಣಿಸುವ ನಾದೋಲ್ಲಾಸ! ಆರಭಿ ರಾಗದ ಪ್ರಥಮ ಕೃತಿಯಲ್ಲೇ (ಗಣರಾಜೇನ) ರಸಿಕರನ್ನು ಸೆಳೆದಿಟ್ಟುಕೊಂಡ ಈ ವೈಣಿಕ ಬಹುದಾರಿ (ಭೊವಭಾರಮಾ), ಕಾಪಿನಾರಾಯಣ (ಸರಸ ಸಾಮದಾನ), ಮನೋರಂಜನಿ ರಾಗಗಳನ್ನು ತ್ವರಿತಗತಿಯಲ್ಲಿ ಸೊಗಸಾದ ಸಂಗತಿಗಳೊಂದಿಗೆ ನುಡಿಸಿದರು. ಪ್ರತಿಯೊಂದು ಪ್ರಸ್ತುತಿಯಲ್ಲೂ ಆಗಾಗ ವೀಣೆಯೊಂದಿಗೆ ಧ್ವನಿಗೂಡಿಸುತ್ತಿದ್ದ ಕಲಾವಿದರು ಸಾಹಿತ್ಯ ಭಾವವನ್ನು ಅನುಸರಿಸಲು ಶ್ರೋತೃವಿಗೆ ಅನುವು ಮಾಡಿಕೊಟ್ಟರು.
ಕಮಾಚ್ ರಾಗದ (ಶ್ರೀಪತಿ ನಿನ್ನು) ಹೃದಯಸ್ಪರ್ಶಿಯಾದ ಆಲಾಪನೆ, ಕೃತಿ ಮತ್ತು ಸ್ವರಕಲ್ಪನೆಗಳು ಕೃತಕ ಅಬ್ಬರಗಳಿಲ್ಲದೆ ಸರಳ ಸುಂದರವಾಗಿ ಮೂಡಿಬಂದವು. ಅನಂತರ ಗಾಂಭೀರ್ಯ ಮತ್ತು ಮಾಧುರ್ಯದ ಸಮೀಕರಣ ಎಂಬಂತೆ ಹಿತವಾದ ಶಂಕರಾಭರಣ ಆಲಾಪನೆ. ಎರಡು ಸ್ಥಾಯಿಗಳಲ್ಲಿ ಪರ್ಯಾಯವಾಗಿ ಸಂಚಾರಗಳನ್ನು ನುಡಿಸುತ್ತ ರಾಗವೈವಿಧ್ಯ ತೋರಿದ ಕಲಾವಿದರು ಪೋಗದಿರೆಲೋ ಪ್ರಸ್ತುತಿಯಲ್ಲಿ (ಮಿಶ್ರ ಛಾಪು ತಾಳ) ಪ್ರಬುದ್ಧವಾದ ಕಲ್ಪನಾಸ್ವರಗಳು ಮತ್ತು ಸುದೀರ್ಘವಾದ ಮುಕ್ತಾಯಗಳನ್ನು ಸುಲಲಿತವಾಗಿ ನೀಡಿದರು. ಸಾಮಾನ್ಯವಾಗಿ ವಾದ್ಯ ಕಛೇರಿಗಳ ವೇದಿಕೆಯ ಪಕ್ಕದಲ್ಲಿ ಅಥವಾ ಎದುರುಗಡೆ ಕಾಣಲು ಸಿಗುವ ತಾಳ ಸಹಕಾರದವರು ಈ ಕಛೇರಿಯಲ್ಲಿ ಇರಲಿಲ್ಲವೆನ್ನುವುದು ಗಮನಾರ್ಹ!
ತೋಡಿಯ ಸುಶ್ರಾವ್ಯವಾದ ಆಲಾಪನೆಯ ಅನಂತರ ನುಡಿಸಲಾದ ಚುಟುಕಾದ “ಚಿಟ್ಟೆ ತಾನಂ’, ಶ್ರೀ ಕೃಷ್ಣಂ ಭಜ ವಿಳಂಬ ಕಾಲ ಕೃತಿಗೆ ನೀಡಲಾದ ಖಚಿತವಾದ ಸ್ವರವಿನಿಕೆಗಳು, ಪ್ರತಿಯೊಂದು ಆವರ್ತದಲ್ಲೂ ಕುರೈಪ್ಪುಗಳಲ್ಲೂ ಮೊಹರಾಗಳಲ್ಲೂ ವ್ಯಕ್ತವಾದ ಅವರ ಲಯಪ್ರಮಾಣದ ದೃಢತೆ! ಗುಣಗ್ರಾಹಿ ಶ್ರೋತೃಗಳ ಮುಕ್ತ ಪ್ರಶಂಸೆಯನ್ನು ಪಡೆದವು. ಈ ಪ್ರಸ್ತುತಿಯಲ್ಲಿ ನುಡಿಸಲಾದ ರಾಗಮಾಲಿಕಾ ಸ್ವರವಿನಿಕೆಗಳು (ವಲಚ, ರಸಾಳಿ, ಸುರಟಿ) ಹೃದ್ಯವಾಗಿದ್ದವು.
ದೇಶ್ (ಕುಲ ಕುಲವೆಂದು), ಬೆಹಾಗ್ (ಕಂಡು ಧನ್ಯ), ಯಮನ್ (ಕೃಷ್ಣಾ ನೀ ಬೇಗನೆ) ಲಘು ಪ್ರಸ್ತುತಿಗಳು, ಉನ್ನತ ಮಟ್ಟದ ನಾದ ಸಂಸ್ಕಾರದೊಂದಿಗೆ ಅತ್ಯಂತ ಮನೋಜ್ಞವಾಗಿ ಮೂಡಿಬಂದು ರಸಿಕರನ್ನು ಪರವಶಗೊಳಿಸಿದವು.
ವೈಣಿಕರ ಇಂಗಿತವರಿತು ಮೃದುವಾಗಿ ಮೃದಂಗ ನುಡಿಸಿದ ನಿಕ್ಷಿತ್ ಪುತ್ತೂರು ಮತ್ತು ಘಟದಲ್ಲಿ ಸಹಕರಿಸಿದ ಕೊಟ್ಟಯಂ ಉನ್ನಿಕೃಷ್ಣನ್ ಮುಂದೆ ತನಿ ಆವರ್ತನದಲ್ಲಿ ಅತ್ಯುತ್ತಮವಾದ ಲಯಗಾರಿಕೆ ತೋರಿ ಸಭೆಯನ್ನು ರಂಜಿಸಿದರು.
ಈ ಕಛೇರಿ ಅಂತೆಯೇ ಆ ದಿನಪೂರ್ತಿ ನಡೆದ, ವೀಣೆಗೆ ಸಂಬಂಧಿಸಿದಂತಹ ಇತರ ಎಲ್ಲ ಕಾರ್ಯಕ್ರಮಗಳನ್ನೂ ಡಾ| ಪಳ್ಳತ್ತಡ್ಕ ಕೇಶ ಭಟ್ ಮೆಮೋರಿಯಲ್ ಟ್ರಸ್ಟ್ (ರಿ.) ಮಣಿಪಾಲ ಆಯೋಜಿಸಿತ್ತು.
ಸರೋಜಾ ಆರ್. ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.