ಮನ ತಣಿಸಿದ ಸಂಗೀತ ಕಛೇರಿ
Team Udayavani, Jul 20, 2018, 6:00 AM IST
ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದಿದ್ದ ಚೆನ್ನೈಯ ಯುವ ಗಾಯಕಿ ಕುಮಾರಿ ಸಹನಾ ಸಾಮ್ರಾಜ್ ಜೂ.25 ಸಂಗೀತ ಕಛೇರಿ ನೀಡಿದರು. ಸಭಾಂಗಣ ಪೂರ್ತಿ ತುಂಬಿದ್ದ ಸಂಗೀತ ರಸಿಕರ ಮನದಂತರಾಳದ ಬಯಕೆಯನ್ನು ಮೊದಲೇ ಅರಿತಂತೆ ಪ್ರಸ್ತುತಗೊಂಡ ಸಂಗೀತ ಸಭಿಕರಿಂದ ದೊರೆತ ಕರತಾಡನದ ಪ್ರಶಂಸೆ ಕಛೇರಿಯ ಯಶಸ್ಸನ್ನು ಪ್ರತಿಬಿಂಬಿಸುತ್ತಿತ್ತು.
ಸ್ವಾತಿ ತಿರುನಾಳರ ಮಾಯಾಮಾಳವಗೌಳ ರಾಗ-ರೂಪಕ ತಾಳದ ತುಳಸೀದಳ ಕೃತಿಯಿಂದ ಪ್ರಾರಂಭವಾದ ಕಛೇರಿ ಕೃತಿ ದೇವರನಾಮಗಳನ್ನು ಒಂದರ ಹಿಂದೊಂದರಂತೆ ಪೋಣಿಸುವ ಮೂಲಕ ಎಲ್ಲ ವರ್ಗದ ಶ್ರೋತೃಗಳಿಗೂ ಸಂತಸ ನೀಡಿತು. ಕೇದಾರಗೌಳ-ಮಿಶ್ರಛಾಪು ತಾಳದ ತನುವು ನಿನ್ನದು, ವಸಂತ ರಾಗ-ರೂಪಕ ತಾಳದ ಸೀತಮ್ಮ ಮಾಯಮ್ಮ ಶ್ಯಾಮ ಶಾಸ್ತ್ರಿಗಳ, ವರಾಳಿ- ಆದಿತಾಳದ ಮಾಮವ ಮೀನಾಕ್ಷಿ, ರಾಗಮಾಲಿಕೆ-ಆದಿತಾಳದ ಬಾರೋ ಕೃಷ್ಣಯ್ಯ, ಕಲ್ಯಾಣ ವಸಂತ-ಆದಿ ತಾಳದ ಇನ್ನು ದಯೆ ಬಾರದೆ, ರೇವತಿ-ಆದಿ ತಾಳದ ಶಂಭೋ ಶಿವ ಶಂಭೋ , ಬೇಹಾಗ್-ಆದಿತಾಳದಲ್ಲಿನ ಸಾರಮೈನ ಜಾವಳಿ, ಕಾಪಿ-ಆದಿತಾಳದ ಜಗದೋದ್ಧಾರನ, ನಾದನಾಮಕ್ರಿಯ-ಆದಿತಾಳದ ದಾಸನ ಮಾಡಿಕೋ, ತಿಲ್ಲಾನ, ಭಾಗ್ಯದ ಲಕ್ಷ್ಮಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಗಮಕ-ಬಿರ್ಕಾಗಳಿಗೆ ಪಳಗಿಸಿಕೊಂಡ ಉತ್ತಮ ಶಾರೀರ, ರಾಗ-ಸಾಹಿತ್ಯ ಭಾವಗಳನ್ನು ಪುಷ್ಠಿàಕರಿಸಿ ಶ್ರೋತೃಗಳಿಂದ ಭಲೇ ಅನ್ನಿಸಿಕೊಳ್ಳುವ ಕಲಾವಿದೆಯ ಸಾಮರ್ಥ್ಯ ಶ್ಲಾಘನೀಯ. ವಯಲಿನ್‌ನಲ್ಲಿ ವಿಶ್ವಜಿತ್ ಮತ್ತೂರು ಮತ್ತು ಮೃದಂಗದಲ್ಲಿ ನಿಕ್ಷಿತ್ ಟಿ. ಪುತ್ತೂರು ಸಹಕಸಿದರು.
ಈ ಸಂದರ್ಭದಲ್ಲಿ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭದಿಂದ ಅಂತ್ಯದ ತನಕ ಕಛೇರಿಯನ್ನು ಆಲಿಸಿ ಕೊನೆಗೆ ಕಲಾವಿದರೆಲ್ಲರನ್ನೂ ಸನ್ಮಾನಿಸಿದರು.
ಪಿ. ನಿತ್ಯಾನಂದ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.