ಅಪರೂಪದ ತ್ರಿವಳಿ ಸಂಗಮ
Team Udayavani, Mar 17, 2017, 3:50 AM IST
ಕಟೀಲು ಮೇಳದ ಪ್ರಮುಖ ಭಾಗವತ ಪಟ್ಲ ಸತೀಶ ಶೆಟ್ಟಿ, ಬಡಗಿನ ಸಾಲಿಗ್ರಾಮ ಮೇಳದ ಭಾಗವತ ರಾಘವೇಂದ್ರ ಮಯ್ಯ ಮತ್ತು ಪೆರ್ಡೂರು ಮೇಳದ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಈ ಮೂವರು ಒಂದೇ ವೇದಿಕೆಯಲ್ಲಿ ಗಾನ ರಸಧಾರೆ ಹರಿಸಿದ ಗಾನವೈಭವ ಇತ್ತೀಚೆಗೆ ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ಹೊಟೇಲ್ ಉದ್ಯಮಿ ರಾಘವೇಂದ್ರ ಹೆಬ್ಟಾರ್ ಅವರ ಪುತ್ರ ಶಶಿಧರನ ಬ್ರಹ್ಮೋಪದೇಶ ಪ್ರಯುಕ್ತ ನಡೆಯಿತು.
ಈ ತ್ರಿವಳಿ ಸಂಗಮ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಆಯ್ದ ಪ್ರಸಂಗಗಳ ಅತ್ಯುತ್ತಮ ಪದ್ಯಗಳ ಗಾನ- ನಿನಾದ ಸವಿದು ಪುಳಕಿತರಾದರು. ದೇವತಾ ಪ್ರಾರ್ಥನೆಯಿಂದ ಆರಂಭಗೊಂಡು ಶೃಂಗಾರ, ಹಾಸ್ಯ, ವೀರ, ಕರುಣ ಮುಂತಾದ ರಸಗಳ ಪದಗಳು ಮೂವರು ಭಾಗವತರ ಕಂಚಿನ ಕಂಠದಿಂದ ಅದ್ಭುತವಾಗಿ ಮೂಡಿಬಂದವು. ಕೆಲವೊಂದು ಪದ್ಯಗಳನ್ನು ಮೂವರು ದ್ವಂದ್ವವಾಗಿ ಹಾಡಿ ಪ್ರೇಕ್ಷಕರ ಮನರಂಜಿಸಿದರು.
ಈ ಕಾರ್ಯಕ್ರಮದಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ, ಪದ್ಮನಾಭ ಉಪಾಧ್ಯ, ಪರಮೇಶ್ವರ ಭಂಡಾರಿ ಕರ್ಕಿ, ಕೋಟ ಶಿವಾನಂದ, ಸುನಿಲ್ ಭಂಡಾರಿ, ಶ್ರೀನಿವಾಸ್ ಪ್ರಭು ಉತ್ತಮವಾಗಿ ಚೆಂಡೆ-ಮದ್ದಲೆ ಹಿಮ್ಮೇಳದ ಝೆಂಕಾರ ಹರಿಸಿದರು. ವಾದಿರಾಜ ಕಲ್ಲೂರಾಯರ ನಿರೂಪಣೆ ಕಾರ್ಯಕ್ರಮಕ್ಕೆ ಮೆರಗು ನೀಡಿತು.
ರಾಜೇಶ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.