ಮೈತ್ರೇಯಿ ಗುರುಕುಲ ವಿದ್ಯಾರ್ಥಿನಿಯರ ಪ್ರತಿಭಾ ದರ್ಶನ
Team Udayavani, Jan 3, 2020, 1:01 AM IST
ವಿಟ್ಲಪಟ್ನೂರು ಗ್ರಾಮದ ಮೂರು ಕಜೆ ಮೈತ್ರೇಯಿ ಗುರುಕುಲದ ವಿ ದ್ಯಾರ್ಥಿನಿಯರು ಪತಂಜಲಿ ಯೋಗ ಪೀಠದ ಬಾಬಾ ರಾಮ್ ದೇವ್ ಉಪಸ್ಥಿತಿಯಲ್ಲಿ ವಿಶಿಷ್ಟವಾದ ಪ್ರತಿಭಾ ದರ್ಶನ ನೀಡಿ ವ್ಯಾಪಕ ಶ್ಲಾಘನೆಗೆ ಪಾತ್ರರಾದರು.
ಮಾತೃಶಕ್ತಿಯನ್ನು ಬಿಂಬಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಸಂಸ್ಕೃತ ಭಾಷೆಯಲ್ಲೇ ಸಂಭಾಷಣೆ ನಡೆಸಿದರು. ಮೈತ್ರೇಯಿ-ಯಾಜ್ಞ ವಲ್ಕé ಕಾತ್ಯಾಯಿನಿ ಅವರ ಮೂಲಕ ಜ್ಞಾನವೆ ನಿಜವಾದ ಸಂಪತ್ತು ಎಂಬ ಸಂದೇಶವನ್ನು ನೀಡಲಾಯಿತು. ಜೀಜಾಬಾಯಿ ಮುಖೇನ ರಾಷ್ಟ್ರಭಕ್ತಿಯನ್ನು ಸಾರಲಾಯಿತು. ವಿಶ್ವಸಾರಥಿ ವಿವೇಕಾನಂದರು ವಿಶ್ವವನ್ನೇ ಬೆರಗಾಗಿಸಿದ ದೃಶ್ಯವನ್ನು ಪ್ರದರ್ಶಿಸಲಾಯಿತು.
ಸತ್ಯವನ್ನೇ ನುಡಿಯುವ ಸಂದೇಶವನ್ನು ಸತ್ಯಕಾಮನಿಂದ ರವಾನಿಸಲಾಯಿತು. ಸೀತೆಯ ಜತೆ ಇದ್ದ ಲವ – ಕುಶರು ಅರಣ್ಯದಲ್ಲಿ ಆಟವನ್ನು ಆಡುತ್ತ ಮರವನ್ನು ಕಡಿಯಲು ಹೊರಟಾಗ ಸೀತೆ ಅದು ಸಲ್ಲದು ಎಂದು ಆಕ್ಷೇಪಿಸಿ, ಮರವನ್ನು ಉಳಿಸುವ ಪಾಠವನ್ನು ಬೋಧಿಸಲಾಯಿತು. ಯೋಗ,ನೃತ್ಯದಿಂದ ದೇಹ ಸುದೃಢವಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಯಿತು. ಕೊನೆಗೆ ತಾಯಿ ಸ್ತುತಿಯ ಮೂಲಕ ಇಚ್ಛಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿಯ ಸಮನ್ವಯತೆಯ ಭಾವವನ್ನು ಪ್ರದರ್ಶಿಸುವ ನೃತ್ಯ ಆಕರ್ಷಣೀಯವಾಗಿ ಮೂಡಿಬಂತು.
ವಿಶೇಷವೆಂದರೆ ಇಷ್ಟೊಂದು ಮಹಾನ್ ವ್ಯಕ್ತಿತ್ವಗಳನ್ನು ಅನಾಯಾಸವಾಗಿ ವಿದ್ಯಾರ್ಥಿನಿಯರು ಪರಿಚಯಿಸಿದರು ಹಾಗೂ ಕೇವಲ ಅರ್ಧ ಗಂಟೆಯಲ್ಲಿ ತುಣುಕು ತುಣುಕಾಗಿ ವಿವಿಧ ದೃಶ್ಯಗಳನ್ನು ಪ್ರದರ್ಶಿಸ ಲಾಯಿತು. ಪ್ರೇಕ್ಷಕರು ನೋಡುತ್ತಿದ್ದಂತೆ ವಿವಿಧ ಸಂದೇಶಗಳು, ಶ್ರೇಷ್ಠರ ನುಡಿಗಳು, ಸಮಕಾಲೀನ ಕಾಲಕ್ಕೆ ಅವಶ್ಯವಿರುವ ಸೂತ್ರಗಳು ಅವರಿಗೆ ಅರಿವಿಲ್ಲದೆಯೇ ಮನಸ್ಸಿನೊಳಗೆ ಹೊಕ್ಕುಬಿಟ್ಟವು.
ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಬೇಕಾಗಿಲ್ಲ. ಆದರೆ ಅವರು ಎಲ್ಲಾ ಕ್ಷೇತ್ರಗಳಲ್ಲೂ ತಾವು ಪ್ರತಿಭಾವಂತರು ಎಂಬುದನ್ನು ಸಭೆಗೆ ತೋರಿಸಿಕೊಟ್ಟರು. ಒಂದೇ ಕಂಠದಲ್ಲಿ ವೇದ ಪಠನ, ವೇದ ಘೋಷವು ಪ್ರಕಟವಾಯಿತು. ನಿರರ್ಗಳವಾಗಿ ಸಂಸ್ಕೃತದಲ್ಲೇ ಮಾತನಾಡಿದ ಅವರು ಯಾವುದೇ ಅಳುಕಿಲ್ಲದೇ ದಿಟ್ಟವಾಗಿ ನಟಿಸಿದರು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿನಿಯರಿದ್ದಾರೆ. ಅವರೆಲ್ಲರೂ ಏಕಮನಸ್ಸಿನಿಂದ ಏಕ ಕಂಠದಿಂದ ಭಾಷೆಗಳ ತೊಡಕಿಲ್ಲದೇ ಭಾಗವಹಿಸಿದರು. ಆ ಅವಧಿಯಲ್ಲಿ ಸಂಪೂರ್ಣ ತನ್ಮಯರಾಗಿ ಪಾಲ್ಗೊಂಡು ತಾವೇ ಆಸ್ವಾದಿಸಿದರು. ಪ್ರೇಕ್ಷಕರಿಗೆ ಇದು ಸಾಂಸ್ಕೃತಿಕ ಕಾರ್ಯಕ್ರಮವಾಗದೇ ಗುರುಕುಲ ವಿದ್ಯಾರ್ಥಿನಿಯರ ನೈಜ ಪ್ರತಿಭಾ ದರ್ಶನವಾಯಿತು.
ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
ನನ್ನ ಮಗಳ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದರೆ 21 ಲಕ್ಷ ಬಹುಮಾನ: ಬಿಗ್ ಬಾಸ್‌ಗೆ ಸವಾಲು
Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.