ಒಂದು ವಿಶಿಷ್ಟ ಸಂಗೀತ ಸಮಾರಾಧನೆ


Team Udayavani, Dec 22, 2017, 2:06 PM IST

22-39.jpg

ವಸಂತಿ ರಾಮಭಟ್‌ , ವಯಲಿನ್‌ ವಸಂತಿ ಅಕ್ಕ, ಶಾಸ್ತ್ರೀಯ ಸಂಗೀತಪ್ರಿಯರ ವಲಯದಲ್ಲಿ ಸುಪರಿಚಿತವಾದ ಹೆಸರು. ಸಂಗೀತ ಷಡc, ಪಂಚಮಗಳನ್ನೇ ತನ್ನ ಉಸಿರಾಗಿ ಸ್ವೀಕರಿಸಿರುವ ವಸಂತಿ ಅಕ್ಕ 4ನೇ ವಯಸ್ಸಿನಲ್ಲಿಯೇ ಸಪ್ತಸ್ವರಗಳಿಗೆ ಶರಣಾದವರು. ಇದೀಗ 79ರ ಹರೆಯಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲೂ ಅದೇ ಆಸಕ್ತಿ, ಭಕ್ತಿ ಮತ್ತು ಕಾಳಜಿ ಅವರದ್ದು. 

ವಸಂತಿ ಅಕ್ಕ ತಮ್ಮ ಹುಟ್ಟುಹಬ್ಬದಂದು (ನ.29) ಬಹುಕಾಲದ ಕನಸೊಂದನ್ನು ನಮ್ಮೊಂದಿಗೆ ಹಂಚಿಕೊಂಡರು. ಅದು ತಿಂಗಳಿಗೊಂದರಂತೆ ಮುಂಬರುವ 12 ತಿಂಗಳು ಮನೆಯಲ್ಲಿ ಕಚೇರಿಗಳನ್ನು ಪ್ರಾಯೋಜಿಸುವುದು. 

“ರಾಗಧನ’ದೊಂದಿಗೆ ವಸಂತಿ ಅಕ್ಕನದು ಅವಿನಾಭಾವ ಸಂಬಂಧ. ಹಾಗಾಗಿ “ರಾಗಧನ’ದ ಲಾಂಛನ ಪಟದ ಅಡಿಯಲ್ಲಿ ಈ ಕಾರ್ಯಕ್ರಮಗಳು ನಡೆದರೂ ಖರ್ಚುವೆಚ್ಚಗಳನ್ನು ತಾವೇ ಸಂಪೂರ್ಣವಾಗಿ ವಹಿಸಿಕೊಳ್ಳುವುದು ಅವರ ಅಪೇಕ್ಷೆಯಾಗಿದೆ. ಈ ಅಭಿಯಾನದ ಪ್ರಥಮ ಹೆಜ್ಜೆಯಾಗಿ ನ.29ರಂದು ಪುತ್ತೂರಿನ ಸುಚಿತ್ರಾ ಹೊಳ್ಳ ಅವರ ಕಚೇರಿ ನಡೆಯಿತು. “ರಾಗಧನ ಪಲ್ಲವಿ’ ಪ್ರಶಸ್ತಿ ಭಾಜನರಾದ ಸುಚಿತ್ರಾ ಓರ್ವ ಪ್ರಖ್ಯಾತ ಕಲಾವಿದೆ. ಕಚೇರಿಯ ಮೊದಲ ಪ್ರಸ್ತುತಿ ಕಮಾಚ್‌ ರಾಗದ ದರು (ಮಾತೇ) ಶೀತ ಬಾಧಿತ ಧ್ವನಿಪೆಟ್ಟಿಗೆಯ ಅಸಹಕಾರದಿಂದಾಗಿ ತುಸುವೇ ಪೇಲವವಾಯಿತು. ಆದರೆ ಎದೆಗುಂದದೆ ಕಲಾವಿದೆ ಮುಂದೆ ನಾಟ ರಾಗದ (ಶಿವತ್ರಯ) ಅಪೂರ್ವ ಕೃತಿಯನ್ನು ಹಾಡಿದರು. ಅದರಲ್ಲಿ ನೀಡಲಾದ ಪ್ರೌಢವಾದ ಸ್ವರವಿನಿಕೆಗಳೊಂದಿಗೆ ಅವರ ಕಂಠವೂ ಮುಕ್ತವಾಗಿ ತೆರೆದುಕೊಂಡದ್ದು ರಸಿಕರ ಸಂತಸಕ್ಕೆ ಕಾರಣವಾಯಿತು. 

ವಸಂತಿ ರಾಗವನ್ನು ವಿಸ್ತರಿಸಿ ದೇವರನಾಮವನ್ನು (ನಾರಾಯಣ ಎನ್ನಿರೋ) ಕಚೇರಿಯ ಚೌಕಟ್ಟಿನಲ್ಲಿ ಹಾಡಿದ ಗಾಯಕಿ ಅನಂತರ ಚಕ್ರವಾಕ (ಜನಾರ್ದನ ಸಮ) ಕೃತಿಗಾಗಿ ಒಂದು ಒಳ್ಳೆಯ ಆಹಿರ್‌ ಭೈರವ್‌ನ ಛಾಯೆಯೂ ಮೂಡದಂತಹ ಶುದ್ಧವಾದ ಆಲಾಪನೆಯನ್ನು ನೀಡಿದರು. ಚೂರು ಉದ್ಭವವಾಯಿತೇನೋ ಎನಿಸಿದ ನೆರವಲ್‌ ನಂತರ ಮೂಡಿಬಂದ ಸ್ವರ ಕಲ್ಪನೆಗಳು ಮತ್ತು ಮುಕ್ತಾಯಗಳ ಗಟ್ಟಿತನ ಕಲಾವಿದೆಯ ಪ್ರಬುದ್ಧತೆಯನ್ನು ಸಾರಿದವು. 

ಅಮೃತ ವರ್ಷಿಣಿಯ ಸುಶ್ರಾವ್ಯವಾದ ರಾಗ ವಿಸ್ತಾರ, ಅನಂತರ ವಿಶೇಷವೆನಿಸಿದ “ತಾನಂ’ ಮುಂದೆ “ಸುಧಾಮಯಿ’ ಕೃತಿಯ ಚರಣ “ಸರಸಿಜಾಕ್ಷಿ’ ಎಂಬಲ್ಲಿ ನೆರವಲ್‌ , ಮೂರು ಬೇರೆ ಬೇರೆ ಎಡುಪ್ಪುಗಳಿಗೆ ಹೊಂದಿಸಲಾದ ಸ್ವರ ಕಲ್ಪನೆಗಳು,ಕರೈಪ್ಪುಗಳು, ಮೊಹರಾಗಳು ಮುಗಿಯುತ್ತಿದ್ದಂತೆ ಮೃದಂಗದಲ್ಲಿ ಉಡುಪಿ ಶ್ರೀಧರ್‌ ಅವರಿಂದ ನಡೆ ವೈವಿಧ್ಯದ ಒಂದು ಭರ್ಜರಿಯಾದ ತನಿ ಆವರ್ತನವಾಯಿತು.ಷಣ್ಮುಖಪ್ರಿಯ,ಜಂಜೂಟ ರಾಗಗಳ ಲಘು ಪ್ರಸ್ತುತಿಗಳ ಅನಂತರ ರೇವತಿ ರಾಗದ ತಿಲ್ಲಾನದೊಂದಿಗೆ ಕಚೇರಿ ಯಶಸ್ವಿಯಾಗಿ ಕೊನೆಗೊಂಡಿತು. ಚುರುಕಾದ ಅತಿಥೇಯಳಾಗಿ ಓಡಾಡಿ, ಆ ಕೂಡಲೇ ನುರಿತ ವಿದುಷಿಯಾಗಿ ವಯಲಿನ್‌ನಲ್ಲಿ ಸಹವಾದಕಿಯಾಗಿಯೂ ಯಾವುದೇ ಲೋಪವಿಲ್ಲದೆ ಮಿಂಚಿದ ವಸಂತಿ    ರಾಮಭಟ್‌ ಅಭಿನಂದನಾರ್ಹರು. 

ಈ ಕಚೇರಿಯ ಒಟ್ಟಂದವನ್ನು ಸರಳವಾಗಿ ವರ್ಣಿಸಿದ ಪ್ರತಿಭಾ ಸಾಮಗ ಅವರ ನಲು°ಡಿಗಳು ಸಮಸ್ತ ರಸಿಕರ ಮನದ ಮಾತುಗಳಾಗಿದ್ದು ಕರತಾಡನವನ್ನು ಪಡೆದವು. ವಸಂತಿ ರಾಮಭಟ್‌ ಅವರ ಮನೆ ದೇವಿಕೃಪಾದಲ್ಲಿಯೇ ಕಚೇರಿ ನಡೆಯಿತು. 

ಸರೋಜಾ ಆರ್‌. ಆಚಾರ್ಯ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.