ಕಾಂಚನದಲ್ಲಿ ವೈವಿಧ್ಯಮಯ ಕಾಂಚನೋತ್ಸವ 


Team Udayavani, Jan 26, 2018, 3:16 PM IST

26-52.jpg

ಪುತ್ತೂರಿನ ಬಜತ್ತೂರು ಗ್ರಾಮ ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್‌ ಅಕಾಡೆಮಿ ಟ್ರಸ್ಟ್‌ ಜ. 27 ಮತ್ತು 28ರಂದು ಕಾಂಚನದ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ತ್ಯಾಗರಾಜ, ಪುರಂದರದಾಸರ ಆರಾಧನಾ ಮಹೋತ್ಸವ ಮತ್ತು ಸಂಗೀತ ರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ, ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂ ಅವರ ಪುಣ್ಯ ದಿನಾಚರಣೆಯನ್ನು ಆಯೋಜಿಸಿದೆ. ಇದು 64ನೆಯ ಕಾಂಚನೋತ್ಸವ ಆಗಿದೆ. 

ವಿವಿಧ ಕಾರ್ಯಕ್ರಮ
ಇದೇ ಸಂದರ್ಭ ಚಿತ್ರಕಲಾ ನಿಪುಣ, ಗಾಯಕ, ವೈಣಿಕಿ, ಶಿಲ್ಪಿ, ಸಂಗೀತ ವಿದ್ವಾನ್‌ ರಾ.ಸೀತಾರಾಂ (ಮೈಸೂರು) ಶತಮಾನೋತ್ಸವ, ಇವರ ಚಿತ್ರಕಲಾ ಪ್ರದರ್ಶನ ಜರುಗಲಿದೆ. ಜ. 27 ಸಂಜೆ 6ಕ್ಕೆ ಇವರ ಜೀವನ ಸಾಧನೆಗಳ ಸಾಕ್ಷ್ಯಚಿತ್ರವನ್ನು ಆಯೋಜಿಸಲಾಗಿದೆ. 

ಜ. 27 ಬೆಳಗ್ಗೆ 9ಕ್ಕೆ ದಿವ್ಯನಾಮ ಸಂಕೀರ್ತನೆ “ಊಂಛ ವೃತ್ತಿ’ (ಸಂಪ್ರದಾಯದಂತೆ ಹಾಡುಗಳನ್ನು ಹಾಡುತ್ತ ಮನೆಗಳಿಗೆ ಹೋದಾಗ ಜನರು ಕೊಟ್ಟ ಭಿಕ್ಷೆಯಿಂದ ಅತಿಥಿ ಸತ್ಕಾರ ನಡೆಸುವುದು), 10ಕ್ಕೆ ಪಿಳ್ಳಾರಿ ಗೀತೆಗಳು, ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, 11.30ರಿಂದ ಉಪ್ಪಿನಂಗಡಿ ಗಾನಭಾರತೀ ಸಂಗೀತ ಶಾಲೆ, ಪುತ್ತೂರು ಕಾಂಚನ ಸುಬ್ಬರತ್ನಂ ಸಂಗೀತ ಶಾಲೆ, ಸುಬ್ರಹ್ಮಣ್ಯದ ಸರಸ್ವತೀ ಸಂಗೀತ ಶಾಲೆ, ಕಾಂಚನ ಲಕ್ಷ್ಮೀ ನಾರಾಯಣ ಮ್ಯೂಸಿಕ್‌ ಅಕಾಡೆಮಿ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ 6ಕ್ಕೆ ತ್ಯಾಗರಾಜರ ಚರಿತೆ ಸಂಗೀತ ನಾಟಕ ನಡೆಯಲಿದೆ.

 ಜ. 28 ಬೆಳಗ್ಗೆ 10ಕ್ಕೆ ಎ.ಸಿ.ಶ್ರೀನಿವಾಸ, ಎ.ಸಿ. ರಾಜಶೇಖರ್‌ ಅವರ ದ್ವಂದ್ವ ನಾಗಸ್ವರ ವಾದನ ಮತ್ತು ಬಿ.ಆರ್‌.ಶ್ರೀನಿವಾಸ್‌, ಡಿ.ರಾಮಸುಬ್ಬಯ್ಯ ಅವರ ದ್ವಂದ್ವ ತವಿಲ್‌ವಾದನ, 12ಕ್ಕೆ ಅತಿಥಿ ಕಲಾವಿದರು, ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ ಕಛೇರಿ, ಸಂಜೆ 6ಕ್ಕೆ ಟಿ.ಎಂ.ಕೃಷ್ಣ ಅವರ ಹಾಡುಗಾರಿಕೆ ನಡೆಯಲಿದೆ. ತ್ರಿಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 

ಅಪರೂಪದ ಕಲಾವಿದೆಯರು
ರೋಹಿಣಿ ಸುಬ್ಬರತ್ನಂ ಅವರ ಪುತ್ರಿಯರಾದ ಕಾಂಚನ ಶ್ರೀರಂಜನಿ, ಕಾಂಚನ ಶ್ರುತಿರಂಜನಿ, ಕಾಂಚನ ಸುಮನಸ ರಂಜನಿಯವರು ಸ್ವತಃ ಸಂಗೀತಜ್ಞರಾಗಿ, ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಶ್ರೀರಂಜನಿ, ಶ್ರುತಿರಂಜನಿಯವರು ಅಪರೂಪದ ಕ್ಲಿಷ್ಟಕರ ದೇಸೀ ತಾಳಗಳಾದ ಸಿಂಹನಂದನ ಮತ್ತು ಶರಭನಂದನದಲ್ಲಿ ಅವಧಾನ ತಾಳಗಳನ್ನು ಸಂಯೋಜಿಸಿ ಪಲ್ಲವಿಗಳನ್ನು ಹಾಡುವುದರಲ್ಲಿ ನಿಷ್ಣಾತರು. ಕಾಂಚನದಲ್ಲಿ 1953ರಲ್ಲಿ ಆರಂಭವಾದ ಸಂಗೀತ ಶಾಲೆಯಲ್ಲೀಗ ಮೀನಾಕ್ಷಿ ಗಣೇಶ ರಾವ್‌ ಅವರು ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಕಾಂಚನ ಸಂಗೀತ ಕುಟುಂಬದ ದಿಗ್ಗಜರು: ಕಾಂಚನ ಆನಂದಲಕ್ಷ್ಮೀ ಅಮ್ಮಾಳ್‌ , ಕಾಂಚನ ವೆಂಕಟಸುಬ್ರಹ್ಮಣ್ಯಂ, ಕಾಂಚನ ವಿ. ಸುಬ್ಬರತ್ನಂ 

ಟಾಪ್ ನ್ಯೂಸ್

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.