ಅಕಾಡೆಮಿ ಪ್ರಶಸ್ತಿ ವಿಜೇತ ರಾಜಗೋಪಾಲ ಶೇಟ್
Team Udayavani, Oct 25, 2019, 4:09 AM IST
ಕೆ. ರಾಜಗೋಪಾಲ್ ಶೇಟ್ ಬಹುಮುಖ ಪ್ರತಿಭೆಯ ಕಲಾವಿದರು. ಆದರೆ ಅವರು ಹೆಚ್ಚು ತೊಡಗಿಕೊಂಡದ್ದು ನಾಟಕ ರಂಗದಲ್ಲಿ. ಕಿರುತೆರೆ, ಸಿನೆಮಾ, ಕಿರುಚಿತ್ರ, ಟೆಲಿಫಿಲ್ಮ್ ಇತ್ಯಾದಿ ಕ್ಷೇತ್ರಗಳಲ್ಲೂ ಕೈಯಾಡಿಸಿದ್ದಾರೆ. ನೂರಕ್ಕೂ ಅಧಿಕ ಆಕಾಶವಾಣಿ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಹಿಂದಿಯ ಹಮ್ ತುಮ್ ಪೆ ಮರೆ¤ ಹೈ ಸೇರಿ ಹಲವು ಸಿನೇಮಾಗಳಲ್ಲಿ ನಟಿಸಿದ್ದಾರೆ.
ಕೆ.ವಿ. ಅಕ್ಷರ, ಕೆ.ಜಿ.ನಾರಾಯಣ, ಕೆ.ಜಿ.ಕೃಷ್ಣಮೂರ್ತಿ ಒ.ಆರ್.ನಾಗೇಶ್, ಸುಮನಸಾ ಕೊಡವೂರು ಅವರಿಂದ ಹಿಡಿದು ವಿದ್ದು ಉಚ್ಚಿಲ, ಚೇತನ ನಿನಾಸಂ ಸೇರಿದಂತೆ ಹಲವು ನಿರ್ದೇಶಕರ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭೀಷ್ಮನ ಕೊನೆಯ ದಿನಗಳು, ದಾರಾಶಿಕೊ, ಮುದ್ರಾ ರಾಕ್ಷಸ ಅವರ ನಟಿಸಿರುವ ಕೆಲವು ಪ್ರಮುಖ ನಾಟಕಗಳು. ಹದಿನೆಂಟು ಸಲ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಅಭಿಜಾತ ಕಲಾವಿದ ರಾಜಗೋಪಾಲ ಶೇಟ್.
ರಥಬೀದಿ ಗೆಳೆಯರು ಉಡುಪಿ, ಪೂರ್ಣಪ್ರಜ್ಞ ಕಲಾವಿದರು, ರಂಗ ಅದ್ಯಯನ ಕೇಂದ್ರ ಕುಂದಾಪುರ, ಸುಮನಸಾ ಕೊಡವೂರು, ರಂಗ ಚಿನ್ನಾರಿ ಕಾಸರಗೋಡು, ಅಮೋಘ ಉಡುಪಿ ಸೇರಿ ನಾಡಿನುದ್ದಕ್ಕೂ ಇರುವ ಹಲವು ರಂಗ ಸಂಸ್ಥೆಗಳಿಗೆ ತನ್ನ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ರಾಜಗೋಪಾಲ ಶೇಟ್ ಅವರ ಕಲಾಸೇವೆಗೆ ಅರ್ಹವಾಗಿಯೇ ಈ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ.
ಜಯರಾಮ್ ನೀಲಾವರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.