ಗಣೇಶ ಸೋಮಯಾಜಿಗೆ ಆಳ್ವಾಸ್ ಚಿತ್ರಸಿರಿ ಪ್ರಶಸ್ತಿ
Team Udayavani, Nov 9, 2018, 6:00 AM IST
ಈ ಸಾಲಿನ ಆಳ್ವಾಸ್ ಚಿತ್ರಸಿರಿ ಗೌರವ ಪ್ರಶಸ್ತಿಗೆ ಚಿತ್ರಕಲಾವಿದ ಬಿ.ಗಣೇಶ ಸೋಮಯಾಜಿ ಆಯ್ಕೆಯಾಗಿದ್ದಾರೆ. ನ.13ರಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು.
ಗಣೇಶ ಸೋಮಯಾಜಿಯವರು ಜಿ.ಡಿ.ಆರ್ಟ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಂಗಳೂರಿನ ರೊಜಾರಿಯೋ ಪ್ರೌಢಶಾಲೆಯಲ್ಲಿ ಕಲಾಶಿಕ್ಷಕರಾಗಿ ನಾಲ್ಕು ದಶಕಗಳ ಸೇವೆ ಸಲ್ಲಿಸಿ ನಿವೃತ್ತರಾದರು. ಜಲವರ್ಣ, ತೈಲವರ್ಣಗಳಲ್ಲಿ ಭಾವಚಿತ್ರ, ಸಾದೃಶ್ಯಗಳನ್ನು ರಚಿಸಿರುವರು. ಸ್ಥಳದಲ್ಲಿಯೇ ಚಿತ್ರರಚಿಸುವುದರಲ್ಲಿ ನೈಪುಣ್ಯತೆ ಪ್ರದರ್ಶಿಸಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ವರ್ಣಚಿತ್ರಗಳನ್ನು ರಚಿಸಿದ್ದಾರೆ.
ಸೋಮಯಾಜಿಯವರು ರಚಿಸುವ ಭಾವಚಿತ್ರಗಳಲ್ಲಿ ವ್ಯಕ್ತಿ-ವ್ಯಕ್ತ ಸಮರ್ಪಕವಾಗಿ ಅಭಿವ್ಯಕ್ತಿಗೊಳ್ಳುತ್ತದೆ. ಭಾವನೆಗಳು ರೇಖೆಗಳಲ್ಲಿ ಗುರುತಿಸಲ್ಪಡುತ್ತದೆ. ಇವರು ರಚಿಸುವ ವರ್ಣಚಿತ್ರಗಳಲ್ಲಿ ಜಲವರ್ಣ ಮತ್ತು ತೈಲವರ್ಣ ಬಳಕೆಯ ಕೌಶಲ್ಯ ಅರ್ಥಪೂರ್ಣ ಚಿತ್ರಣ ನೀಡುವುದು. ಜಲವರ್ಣ ಚಿತ್ರರಚನೆಯಲ್ಲಿ ಸಾದೃಶ್ಯ, ನಿಸರ್ಗ ಚಿತ್ರಣಗಳು ಈ ತಾಣವನ್ನು ಎಲ್ಲೋ ನೋಡಿದ್ದೇವೆ ಎಂಬ ಉದ್ಗಾರವೆತ್ತುವಂತಾಗುತ್ತದೆ. ಅವರ ಚಿತ್ರ ಸೃಷ್ಟಿಯ ನೈಜತೆ ಪ್ರತಿಫಲಿಸುತ್ತದೆ. ಬಣ್ಣಗಳ ಸಂಯೋಜನೆ ಮತ್ತು ಘಟಕಗಳು ಸೋಮಯಾಜಿಯವರ ಚಿತ್ರ ಎಂದೇ ಬಣ್ಣಿಸಬಹುದು. ತೈಲವರ್ಣಗಳ ವೈಶಿಷ್ಟ್ಯತೆಯು ಚಿತ್ರವನ್ನು ಮತ್ತೆ ಮತ್ತೆ ವೀಕ್ಷಿಸುವಂತೆ ಆಕರ್ಷಿಸಬಲ್ಲುದು. ನಾಲ್ಕು ದಶಕಗಳ ನಿರಂತರ ಕುಂಚವರ್ಣಗಳ ಒಡನಾಟದ ಅವಿನಾಭಾವ ಸಂಬಂಧ ಗಣೇಶ ಸೋಮಯಾಜಿಯವರ ಸಹಸ್ರಾರು ಚಿತ್ರರಚನೆಯ ಕಲಾ ಶಿಕ್ಷಣವನ್ನು, ಮಾರ್ಗದರ್ಶನ, ಪ್ರೇರಣೆಯನ್ನು ಕಿರಿಯರಿಗೆ ಧಾರೆಯೆರೆದಿದ್ದಾರೆ. ವರ್ಣಚಿತ್ರಕಾರರಾಗಿ ಪ್ರಸಾದ್ ಆರ್ಟ್ ಗ್ಯಾಲರಿ, ಆರ್ಟಿಸ್ಟ್ ಕಂಬೈನ್ ಕಲಾಸಂಸ್ಥೆಗಳ ಸ್ಥಾಪಕ ಸದಸ್ಯರಾಗಿ, ದ.ಕ.ಜಿಲ್ಲೆಯ ಕಲಾಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಸದಸ್ಯರಾಗಿ 24 ವರ್ಷದ ಅವಧಿಯಲ್ಲಿ ಕಿರಿಯರಿಗೆ ಪ್ರೇರಣೆ ನೀಡಿದ್ದಾರೆ.
ಎಸ್.ಎನ್.ಅಮೃತಮಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.