ಕಲಾಸಂಗಮವಾದ ಚಿತ್ರಸಿರಿ
Team Udayavani, Dec 21, 2018, 6:10 AM IST
ಮೂಡಬಿದಿರೆಯ ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ನಡೆದ ಈ ಬಾರಿಯ ಚಿತ್ರಸಿರಿಯಲ್ಲಿ ಹಲವಾರು ಸಮಕಾಲೀನ ಕಲಾಕೃತಿಗಳು ರಚನೆಯಾದುವು.ಜನರು ಬದಲಾವಣೆ ಮತ್ತು ಬೆಳವಣಿಗೆಗಳನ್ನು ಬಯಸುತ್ತಾರೆ. ಯಾವಾಗಲೂ ಒಂದೇ ಪ್ರದೇಶದ ಕಲಾ ರಚನೆಯನ್ನು ನೋಡಿ ಬೇಸತ್ತಿರುವ ಜನರ ಮನಸ್ಸಿಗೆ ಬೇರೆ ಬೇರೆ ಪ್ರದೇಶದ ಕಲಾವಿದರ ಕಲಾ ರಚನೆಗಳನ್ನು ನೋಡಬೇಕೆಂಬ ಆಸೆ ಇರುತ್ತದೆ. ಆದರೆ ಅಂತಹ ಕಲಾ ಶಿಬಿರಗಳನ್ನು ವ್ಯವಸ್ಥಿತವಾಗಿ ನಡೆಸಿ ಕಲಾಪ್ರದರ್ಶನವನ್ನು ಜನರಿಗಾಗಿ ತೆರೆದಿಡುವುದೆಂದರೆ ಸುಲಭದ ಕೆಲಸವಲ್ಲ. ಡಾ| ಮೋಹನ್ ಆಳ್ವಾರಂತಹ ಕಲಾಪ್ರೇಮಿಗಳಿಗೆ ಮಾತ್ರ ಇದು ಸಾಧ್ಯ.
ಈ ಬಾರಿಯ ಚಿತ್ರಸಿರಿ ಸಮಕಾಲೀನ ಕಲಾ ಶಿಬಿರದಲ್ಲಿ 25 ಮಂದಿ ರಾಜ್ಯಮಟ್ಟದ ಚಿತ್ರಕಲಾವಿದರು ಹಾಗೂ 28 ವ್ಯಂಗ್ಯಚಿತ್ರ ಕಲಾವಿದರು ಭಾಗವಹಿಸಿದ್ದು ನೂರಕ್ಕೂ ಹೆಚ್ಚು ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಿದರು. ಆ ಕಲಾಕೃತಿಗಳನ್ನು ವೀಕ್ಷಣೆಗಾಗಿ ಅಚ್ಚುಕಟ್ಟಾಗಿ ಜೋಡಿಸಿಡಲಾಗಿತ್ತು. ಕಲಾವಿದರಾದ ಗಣಪತಿ ಹೆಗಡೆ, ಉಮೇಶ್ ವಿ.ಎಂ., ಭವನ್ ಪಿ.ಜಿ., ಹೆಚ್. ಸುಪ್ರೀತ್, ಸತೀಶ್ಚಂದ್ರ ಎಸ್.ಎಸ್., ಆಕಾಶ್ ಎಸ್. ಅಳ್ಳಿ., ಯೋಗೀಶ್ ಸಿ. ಮಾತಡ್, ಶೀಲವಂತ್, ಡಾ. ಅಶೋಕ್ ಎಸ್. ಶಟಕಾರ, ಬಿ.ವಿ.ಕಾಮಾಜಿ, ಗಣೇಶ್ ಪಿ. ದೊಡಮನಿ, ಸಂಜೀವ ಕುಲಕರ್ಣಿ, ದಿಲೀಪ್ ಡಿ.ಆರ್., ರೇಣುಕಾ ಕೇಸರಮಡು, ಕುಮಾರ್ ಕೆ.ಜಿ. ,ಮಂಜುನಾಥ್ ಹೆಚ್.ಪಿ., ದೇವರಾಜ್, ಅಬ್ದುಲ್ಲತೀಫ್ ಸಿ., ಅಶ್ವಿನಿ ಎನ್.ಕೆ., ಮಂಜುನಾಥ್ ಬಿ. ಬಡಿಗೇರ್, ಮಂಜುನಾಥ್ ಕೆ.ಭಂಡಾರೆ, ಮಾಲೆ¤àಶ್ ಎಂ. ಗರಡಿಮನೆ, ಕೆ.ವಿ.ಕಾಳೆ, ಡಾ.ಸಂತೋಷ್ ಕುಮಾರ್ ಕುಲಕರ್ಣಿ, ಮಂಜುನಾಥ್ ಬಿ ಸೊರಟೂರು ಮುಂತಾದವರು ಕ್ಯಾನ್ವಾಸ್ ಮೇಲೆ ತಮ್ಮ ಕೌಶಲವನ್ನು ತುಂಬಿಸಿದರು. ಜನಪದೀಯ ಆಚರಣೆಗಳು, ಪ್ರಚಲಿತ ಸಮಸ್ಯೆಗಳನ್ನು ವಿಷಯವಾಗಿಟ್ಟುಕೊಂಡು ಅದಕ್ಕೆ ಸೃಜನಶೀಲತೆಯ ಸ್ಪರ್ಶಕೊಟ್ಟು ಸಾಂಪ್ರದಾಯಿಕ ಹಾಗೂ ನವ್ಯ ಕೃತಿಗಳನ್ನು ಚಿತ್ರಿಸಿದರು. ಸಾದೃಶ್ಯತೆಯನ್ನು ಮಾತ್ರ ಚಿತ್ರಿಸುವುದು ಕಲಾವಿದನ ಕೆಲಸವಲ್ಲ. ಇಂದ್ರಿಯಗೋಚರ ವಿಷಯವನ್ನು ಸಮಕಾಲೀನತೆಯೊಂದಿಗೆ ಮಂಥನ ಮಾಡಿ ಕ್ಯಾನ್ವಾಸ್ ಮೇಲೆ ರೂಪಿಸುವುದು ಕಲಾವಿದನ ಮುಖ್ಯ ಕೆಲಸವಾಗುತ್ತದೆ ಎಂಬ ಅಂಶ ಕಲಾಕೃತಿಗಳನ್ನು ವೀಕ್ಷಿಸಿದಾಗ ನಮಗೆ ಅರಿವಾಗುತ್ತದೆ. ಕೊನೆಯಲ್ಲಿ ಗಣೇಶ ಸೋಮಯಾಜಿ ಅವರಿಗೆ ಚಿತ್ರಸಿರಿ ಪ್ರಶಸ್ತಿ, ಕೆ.ಆರ್.ಸ್ವಾಮಿಯವರಿಗೆ ವ್ಯಂಗ್ಯಸಿರಿ ಪ್ರಶಸ್ತಿ ಹಾಗೂ ಎಸ್. ತಿಪ್ಪೇಸ್ವಾಮಿಯವರಿಗೆ ಛಾಯಾಚಿತ್ರಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
– ಉಪಾಧ್ಯಾಯ ಮೂಡುಬೆಳ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.