ಹವ್ಯಾಸಿ ಭಾಗವತರ ಯಕ್ಷಗಾಯನ  


Team Udayavani, Apr 6, 2018, 6:00 AM IST

2.jpg

ಪುರಭವನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನವರು ಆಯೋಜಿಸಿದ ಹವ್ಯಾಸಿ ಕಲಾವಿದರ ಸಮಾವೇಶದಲ್ಲಿ ಯಕ್ಷಗಾಯನ ಕಾರ್ಯಕ್ರಮ ಸುಶ್ರಾವ್ಯವಾಗಿತ್ತು.ಪಂಚವಟಿ, ಅತಿಕಾಯ ಮೋಕ್ಷ, ಸೌಗಂಧಿಕಾ ಪುಷ್ಪ, ಇಂದ್ರಜಿತು ಕಾಳಗ, ಗದಾಯುದ್ಧ, ವಾಲಿವಧೆ, ಕುಮಾರ ವಿಜಯ, ಕೃಷ್ಣ ಸಂಧಾನ, ಸುಭದ್ರಾ ಕಲ್ಯಾಣ, ಶರಸೇತು ಬಂಧನ ಮೊದಲಾದ ಪ್ರಸಂಗಗಳಿಂದ ಆಯ್ದುಕೊಂಡ ಪದ್ಯಗಳನ್ನು ಪರಂಪರೆಯ ಶೈಲಿಯಲ್ಲಿ ಹಾಡುವ ಕ್ರಮವನ್ನು ಹವ್ಯಾಸಿ ಭಾಗವತರಾದ ಸುಬ್ರಾಯ ಸಂಪಾಜೆ ಮತ್ತು ಮಹೇಶ ಕನ್ಯಾಡಿ ಪ್ರಸ್ತುತಪಡಿಸಿದರು. ಅರ್ಥಧಾರಿ ಹರೀಶ ಬೊಳಂತಿಮೊಗರು ಪದ್ಯಗಳ ಸಂದರ್ಭವನ್ನು ಉಲ್ಲೇಖೀಸಿ ಯಕ್ಷಗಾಯನವನ್ನು ನಿರೂಪಿಸಿದರು.”ಕಾಮಿನೀ ಮಣಿ ಕೇಳ್‌’, “ನೋಡಿ ನಿರ್ಮಲ ಜಲ ಸಮೀಪದಿ’ ಪೀಠಿಕೆಯ ಹಾಡುಗಳನ್ನು ಸಂಪಾಜೆ ಮತ್ತು ಕನ್ಯಾಡಿ ಹಾಡಿದರು. “ಚಿಂತಿಸದಿರು ಜಾಣೆ’ “ಕೇಳು ಧರ್ಮಜ ಮಾತಾ’ ಪದ್ಯಗಳು ಸನ್ನಿವೇಶವನ್ನು ಬಿಂಬಿಸಿದ್ದು ಔಚಿತ್ಯಪ್ರದವಾಗಿತ್ತು. ಗೋಪಾಲ ಭುಜಬಲೋದ್ಧರನೆ, ಎಲವೋ ಸೂತನ ಮಗನೇ ಏರು ಪದ್ಯವನ್ನು ಮಹೇಶರುಹಾಡಿದರು. “ಚಂದದಿಂದ ಬಂದಳಬ್ದಲೋಚನೆ’, “ಯಾರಿವಳು ಅಮಮ ಬಲು ವೈಯಾರಿ’ ಸ್ತ್ರೀಪಾತ್ರದ ಹಾಡುಗಳನ್ನು ಸಂಪಾಜೆ ಮತ್ತು ಕನ್ಯಾಡಿ ಹಾಡಿದ್ದು ವಂದನಾರ್ಹ. ಸುರುಟಿ ರಾಗ ಏಕತಾಳ, ನವರೋಜಿ ರಾಗ ಏಕತಾಳ, ಬೇಹಾನ್‌ ರಾಗ ಏಕತಾಳ ಮುಂತಾದ ರಾಗಗಳನ್ನು ಇಬ್ಬರೂ ಹಾಡಿದ್ದು ಉಲ್ಲೇಖಾರ್ಹವಾಗಿದೆ. “ಆವ ನಾರಿಯ ಮೇಲೆ ಮನವಾಯ್ತು’ ಹಾಡನ್ನು ಅಷ್ಟತಾಳ, ಏಕತಾಳ, ಝಂಪೆ ತಾಳಗಳಲ್ಲಿ ಸಂಪಾಜೆ, ಮಹೇಶರು ಶೈಲಿಯನ್ನು ಕಾಯ್ದುಕೊಂಡು ಹಾಡಿದ್ದು ಗಮನಾರ್ಹ. ಶಿತಿಕಂಠ ಭಟ್‌ ಮತ್ತು ಜಗನ್ನಿವಾಸ ರಾವ್‌ ಅವರ ಮದ್ದಳೆ-ಚೆಂಡೆ ವಾದನದಲ್ಲಿ ಸಹಕರಿಸಿದರು.ಹವ್ಯಾಸಿ ಕಲಾವಿದರನ್ನು ಬೆಂಬಲಿಸುವ ಪಟ್ಲ ಸತೀಶ ಶೆಟ್ಟರ ಪ್ರೋತ್ಸಾಹ ಅಭಿನಂದನಾರ್ಹ. 

ಅನೂಷಾ ಹೊನ್ನೇಕೂಲು 

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.