ನಾದ ಸುಧೆ ಹರಿಸಿದ ಅಮೃತಾ ಗಾನ
Team Udayavani, Mar 9, 2018, 8:15 AM IST
ಸಂಗೀತ ಪರಿಷತ್ ಮಂಗಳೂರು ಫೆ. 3ರಂದು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಚೆನ್ನೈಯ ಕಲಾವಿದೆ ಕು| ಅಮೃತಾ ಮುರಳಿಯವರ ಕರ್ನಾಟಕ ಶಾಸ್ತ್ರೀಯ ಗಾಯನ ಕಛೇರಿಯನ್ನು ಆಯೋಜಿಸಿತ್ತು.
ನಾಟರಾಗದ ನಾರಾಯಣ ತೀರ್ಥರ ಕೃತಿ ಜಯ ಜಯ ರಮಾನಾಥದೊಂದಿಗೆ ಕಛೇರಿ ಆರಂಭವಾಯಿತು. ಅನಂತರ ಸಂತ ತ್ಯಾಗರಾಜರ ಮಯಾಮಾಳವ ಗೌಳದ ವಿದುಲಕು ಹಾಗು ರೀತಿಗೌಳದ ಆಲಾಪನೆಯೊಂದಿಗೆ ಶ್ಯಾಮಾ ಶಾಸ್ತ್ರಿಗಳ ನಿನುವಿನಾ ಅಂಬಾ ಕೃತಿಯನ್ನು ಮನೋಜ್ಞವಾಗಿ ಪ್ರಸ್ತುತ ಪಡಿಸಲಾಯಿತು.ಅನಂತರ ಕನ್ನಡರಾಗದ ರಾಗಾಲಾಪನೆಯೊಂದಿಗೆ ಮುತ್ತುಸ್ವಾಮಿ ದೀಕ್ಷಿತರ ಶ್ರೀ ಮಾತೃಭೂತಮ್ ಹಾಗು ಖರಹರಪ್ರಿಯರಾಗದಲ್ಲಿ ಶ್ರೀ ಪುರಂದರದಾಸರ ಮುರಹರ ನಗಧರ ಹಾಡಲಾಯಿತು. ತೋಡೀರಾಗದ ವಿಸ್ತಾರ ಆಲಾಪನೆಯೊಂದಿಗೆ ಸಂತ ತ್ಯಾಗರಾಜರ ಕೊಲುವ ಮರೆಗದ ನೆರವಲ್ ಹಾಗೂ ಸ್ವರ ವಿನ್ಯಾಸದೊಂದಿಗೆ ಮೂಡಿಬಂತು. ರಾಗಂ-ತಾನಂ-ಪಲ್ಲವಿಗೆ ಕಮಾಚ್ ರಾಗವನ್ನು ಆಯ್ದುಕೊಂಡ ಗಾಯಕಿ ತಮ್ಮ ಗುರು ಆರ್.ಕೆ. ಶ್ರೀರಾಮ್ ಕುಮಾರ್ ಅವರ ಪಲ್ಲವಿ “ವರದಾ ವರ ವೆಂಕಟದಾಸ’ವನ್ನು ಪ್ರಸ್ತುತ ಪಡಿಸಿದರು. ರಾಗಮಾಲಿಕೆಯಲ್ಲಿ ವಲಚಿ, ಭಾಗೇಶ್ರೀ, ರೇವತಿ ಹಾಗು ಸಿಂಧುಭೈರವಿ ರಾಗಗಳು ಶಿಷ್ಯೆ ಮತ್ತು ಗುರುಗಳ ಗಾಯನ-ವಾದನದಲ್ಲಿ ಇಂಪಾಗಿ ಮೂಡಿ ಬಂತು. ಕೊನೆಯಲ್ಲಿ ಮಾಂಡ್ ರಾಗದ ದೇವಕೀನಂದನ ಹಾಗೂ ಯಮುನ ಕಲ್ಯಾಣಿಯಲ್ಲಿ ಮರಾಠಿ ಅಭಂಗ್ನ್ನು ಪ್ರಸ್ತುತ ಪಡಿಸಲಾಯಿತು. ಕುರುಂಜಿಯ ಮಂಗಳದೊಂದಿಗೆ ಕಛೇರಿ ಪರಿಸಮಾಪ್ತಿಯಾಯಿತು.
ಉತ್ತಮ ಪಿಟೀಲು ವಾದಕಿಯೂ ಆಗಿರುವ ಅಮೃತಾ ಮುರಳಿಯವರ ಕಂಠ ಹಾಗೂ ಶ್ರೀರಾಮ್ ಕುಮಾರ್ ಅವರ ಪಿಟೀಲುವಾದನ, ಕೆ. ಅರುಣ್ ಪ್ರಕಾಶ್ ಅವರ ಮೃದಂಗಲಯ ಯುವ ಶ್ರೋತೃಗಳನ್ನು ರಂಜಿಸಿದವು. ಸ್ಥಳೀಯ ಪ್ರತಿಭೆಗಳಾದ ಕು| ಶ್ರೇಯಾ ಕೊಳತ್ತಾಯ ಮತ್ತು ಕು| ಆತ್ರೇಯಿ ಕೃಷ್ಣಾ ತಂಬುರದಲ್ಲಿ ಶೃತಿ ಸೇರಿಸಿದರು.
ಇದಕ್ಕೂ ಮೊದಲು ಮಂಗಳೂರಿನ ಖ್ಯಾತ ವೇಣುವಾದಕ ರಾಜೇಶ್ ಬಾಗ್ಲೋಡಿಯವರ ಪುತ್ರಿ ಕು| ಸಂಜನಾ ರಾವ್ ಬಾಗ್ಲೋಡಿಯವರ ಕೊಳಲುವಾದನ ನಡೆಯಿತು. ಪಿಟೀಲಿನಲ್ಲಿ ಕು| ಧನಶ್ರೀ ಶಬರಾಯ, ಮೃದಂಗದಲ್ಲಿ ಸುಮುಖ ಕಾರಂತ್ ಜೊತೆಗಿದ್ದರು.
ಬೇಲೂರು ಶ್ರೀಧರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.