ಸ್ವಚ್ಛ ಭಾರತಕ್ಕೊಂದು ಕಲಾ ಶಿಬಿರ
Team Udayavani, Feb 9, 2018, 8:15 AM IST
ಮಂಗಳೂರಿನ ರಾಮಕೃಷ್ಣ ಮಠ ಸ್ವಚ್ಛ ಭಾರತ್ ಕಾರ್ಯಕ್ರಮಕ್ಕೆ ಪೂರಕವಾಗಿ ಸ್ವತ್ಛ ಮನಸು ಎಂಬ ಪರಿಕಲ್ಪನೆಯಲ್ಲಿ ದ.ಕ. ಜಿಲ್ಲೆಯ ಕೆಲವು ಶಾಲೆಗಳಲ್ಲಿ ಚಿತ್ರ ಬಿಡಿಸುವುದರ ಮೂಲಕ ಮನಸು ಸ್ವತ್ಛವಾಗುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಾವಿರಾರು ಮಕ್ಕಳ ಚಿತ್ರಗಳು ಬಂದಿದ್ದರೂ 230 ಬಾಲ ಕಲಾವಿದರನ್ನು ಆಯ್ಕೆಮಾಡಿ ಅವರಿಗೆ ಸೃಜನ ಸ್ವತ್ಛತಾ ಕಲಾಮೇಳ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಠದ ಏಕಗಮ್ಯಾನಂದ ಮಹಾರಾಜ್‌ರವರ ನೇತೃತ್ವದಲ್ಲಿ ಹಾಗೂ ಶಿಕ್ಷಕಿ ಲಲಿತಾ ಕಲ್ಕೂರ ಮತ್ತು ರಂಜನ್ ಬೆರ್ಲಪ್ಪಾಡಿಯವರ ನಾಯಕತ್ವದಲ್ಲಿ ಈ ಕಲಾಮೇಳ ನಡೆಯಿತು. 16 ಸಂಪನ್ಮೂಲ ವ್ಯಕ್ತಿಗಳು ಕಲೆಯ ವಿವಿಧ ಪ್ರಕಾರಗಳಲ್ಲಿ ತರಬೇತಿ ನೀಡಿದ್ದು ಆಯ್ಕೆಮಾಡಿದ ವಿದ್ಯಾರ್ಥಿಗಳಾಗಿದ್ದ ಕಾರಣ ಕಲಾಭಿವ್ಯಕ್ತಿ ರೂಪದ ಫಲಿತಾಂಶ ಉತ್ತಮವಾಗಿತ್ತು. ಚಿತ್ರಕಲೆಯ ಜಲವರ್ಣ, ಚಾರ್ಕೊಲ್, ಕೊಲಾಜ್, ವರ್ಲಿ, ಕಾವಿ, ಪೇಪರ್ ಕ್ರಾಫ್ಟ್, ಆವೆಮಣ್ಣಿನ ಕಲಾಕೃತಿ, ಭಾವಚಿತ್ರ ರಚನೆ, ಗಾಳಿಪಟ, ಮಡಿಕೆ ಚಿತ್ತಾರ, ರೇಖಾಚಿತ್ರ, ಮುಖವಾಡ, ಗ್ರೀಟಿಂಗ್ಸ್, ವ್ಯಂಗ್ಯಚಿತ್ರ, ಕ್ಯಾರಿಕೇಚರ್ ಮುಂತಾದ ಪ್ರಕಾರಗಳನ್ನು ಆಯಾ ವಿಷಯಗಳಲ್ಲಿ ಪರಿಣತರಾದ ಸಂಪನ್ಮೂಲ ಕಲಾವಿದರು ಪ್ರಾತ್ಯಕ್ಷಿತೆ ನೀಡುವ ಮೂಲಕ ತರಬೇತಿ ನೀಡಲಾಗಿತ್ತು.
ಹಿರಿಯ ಕಲಾವಿದರಾದ ಗಣೇಶ್ ಸೋಮಾಯಾಜಿ ಮತ್ತು ಪೆರ್ಮುದೆ ಮೋಹನ್ ಕುಮಾರ್‌ರವರು ಜಲವರ್ಣ ಚಿತ್ರರಚಿಸುವ ತರಬೇತಿ ನೀಡಿದ್ದು, ಕಲಾವಿದ ದಯಾನಂದ್‌ರವರು ಕರಿ ಬಣ್ಣದಿಂದ ಸುಂದರ ನಿಸರ್ಗ ದೃಶ್ಯ ಚಿತ್ರಗಳನ್ನು ರಚಿಸಬಹುದೆಂದು ಮಾಹಿತಿ ನೀಡಿದರು. ನಗುವಿನ ಸಿಂಚನವಿರುವ ವ್ಯಂಗ್ಯ ಚಿತ್ರಗಳನ್ನು ಜಾನ್ ಚಂದನ್‌ರವರು ಚಿತ್ರಿಸಿ ಮಕ್ಕಳಿಂದ ಚಿತ್ರರಚನೆ ಮಾಡಿಸಿದರು. ಸಪ್ನಾ ನೊರೋನ್ಹರವರು ವರ್ಲಿ ಚಿತ್ರ ರಚಿಸಿದರೆ ವೀಣಾ ಶ್ರೀನಿವಾಸ್ ಕಾವಿ ಚಿತ್ರಕಲೆಯನ್ನು ಮಾಡಿಸಿರುವರು. ಸುಧೀರ್ ಕಾವೂರು ಮುಖವಾಡ ರಚನೆ, ತಾರಾನಾಥ್ ಕೈರಂಗಳರವರು ಪೇಪರ್ ಕೊಲಾಜ್, ಸುಂದರ್ ತೋಡಾರ್ ಪೇಪರ್ ಕ್ರಾಫ್ಟ್, ಶಾಲಿನಿಯವರು ಮಣ್ಣಿನ ಮಡಿಕೆ ಚಿತ್ತಾರ, ವೆಂಕಿ ಪಲಿಮಾರ್ ಆವೆಮಣ್ಣಿನ ಕಲಾಕೃತಿ, ಸತೀಶ್‌ರಾವ್ ಗಾಳಿಪಟ ರಚನೆ, ಭವನ್ ಭಾವಚಿತ್ರ (ಕ್ಯಾರಿಕೇಚರ್), ನೇಹಾರಾವ್ ಗ್ರೀಟಿಂಗ್ಸ್ ಕಾರ್ಡು ತಯಾರಿ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಿದರು. ಮನೆಯಲ್ಲಿ ತ್ಯಾಜ್ಯಗಳೆಂದು ಎಸೆಯುವ ವಸ್ತುಗಳಿಂದಲೇ ಸುಂದರ ಕಲಾಕೃತಿಗಳನ್ನು ರಚಿಸಬಹುದೆಂಬ ಸಂದೇಶದೊಂದಿಗೆ ಸ್ವತ್ಛತಾ ಮನಸು ಎಂಬ ಶಿಬಿರದ ಪರಿಕಲ್ಪನೆಗೆ ಪೂರಕವಾಗಿ ವಿದ್ಯಾರ್ಥಿಗಳಲ್ಲಿ ಕಲೆಯೊಂದಿಗೆ ಸ್ವತ್ಛತಾ ಜಾಗೃತಿ ಮೂಡಿಬಂದದ್ದು ವಿಶೇಷವಾಗಿತ್ತು.
ದಿನೇಶ್ ಹೊಳ್ಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.