ಗಾಂಧೀಜಿಗೆ ನೂರೈವತ್ತರ ಕುಂಚನಮನ


Team Udayavani, Oct 25, 2019, 4:54 AM IST

q-39

ಗಾಂಧಿಯನ್ನು ಕೆಲವೇ ಗೆರೆಗಳಲ್ಲಿ ಬೋಳು ತಲೆ, ವೃತ್ತಾಕಾರದ ಕನ್ನಡಕ, ಮೀಸೆಗುತ್ಛ, ನಗುಮುಖ, ಕೃಷಶರೀರ, ಕಚ್ಚ, ಕೈಯ್ಯಲ್ಲೊಂದು ಕೋಲು ಚಿತ್ರಿಸಿ ಅವರ ಸರಳ ವ್ಯಕ್ತಿತ್ವವನ್ನು ಸುಲಭವಾಗಿ ತೋರಿಸುತ್ತಾರೆ. ಈ ಬಾರಿ ಗಾಂಧೀಜಿಯವರ ನೂರೈವತ್ತನೇ ಹುಟ್ಟುಹಬ್ಬ ಆಚರಣೆ. ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ಅದನ್ನು ಕಲಾತ್ಮಕವಾಗಿ ಚಿಂತನೆ ನಡೆಸಿ ಕಾರ್ಯರೂಪಕ್ಕಿಳಿಸಿದವರು ಕಲಾವಿದ ಲಿಯಕತ್‌ ಅಲಿ. ಇವರೊಂದಿಗೆ ಉಡುಪಿಯ ಜಯಂಟ್ಸ್‌ ಗ್ರೂಫ್ ಕೈಜೋಡಿಸಿ ಗಾಂಧೀಜಿಗೆ ನೂರೈವತ್ತರ ಕುಂಚನಮನ ಕಾರ್ಯಕ್ರಮವನ್ನು ಗಾಂಧೀ ಜಯಂತಿಯಂದು ನಡೆಸಿದರು. ಮಕ್ಕಳಿಗೆ ಜಿಲ್ಲಾಮಟ್ಟದ ಚಿತ್ರಕಲಾಸ್ಪರ್ಧೆ ಹಾಗೂ ಪರಿಣತ ಚಿತ್ರಕಾರರಿಂದ ಗಾಂಧೀ ಜೀವನದ ಕಲಾಕೃತಿ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನವನ್ನು ಉಡುಪಿಯ ಇನಾಯತ್‌ ಆರ್ಟ್‌ಗ್ಯಾಲರಿಯಲ್ಲಿ ನಡೆಸಿ ಮನಗೆದ್ದರು.

ಸುಮಾರು 400 ಮಕ್ಕಳು ಈ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಗಾಂಧಿತಾತನ ಜೀವನಕಥೆ, ಅವರ ಚಿಂತನೆಯ ಸ್ವರೂಪಗಳನ್ನು ಸೃಜನಾತ್ಮಕವಾಗಿ ಚಿತ್ರಿಸಿದರು. ತಮಗಿಷ್ಟವಾದ ಬಣ್ಣಗಳನ್ನು ನೀಡಿದರು. ಮಕ್ಕಳ ಚಿತ್ರಗಳಲ್ಲಿ ಗಾಂಧೀಜಿ ಮೂರ್ತವಾಗಿರುವಂತೆ ಕೆಲವು ಚಿಕ್ಕಮಕ್ಕಳ ಚಿತ್ರಗಳಲ್ಲಿ ಅಮೂರ್ತವಾಗಿಯೂ ಗೋಚರಿಸಿದರು. ಅದೇನಿದ್ದರೂ ಮಕ್ಕಳು ಚಿತ್ರ ಹೇಗೆ ಬರೆದರೂ ಚೆಂದ. ಅವರ ಕಲ್ಪನೆ ಮುಗ್ಧಸ್ವರೂಪ ಅನಿರ್ವಚನೀಯ ಆನಂದ ನೀಡುತ್ತದೆ.

ಗ್ಯಾಲರಿಯ ಒಳಗಡೆ ಪ್ರದರ್ಶಿತವಾಗಿದ್ದ ಗಾಂಧೀಜಿಯವರ ಅಂದು-ಇಂದು ಕಾರ್ಟೂನ್‌ ಕಲಾಕೃತಿಗಳು ಗಮನಾರ್ಹವಾಗಿದ್ದವು. ಗಾಂಧೀಜಿ ಚರಕ ಸುತ್ತುವುದು, ಆಂದೋಳನ ನಡೆಸುವುದು, ಸ್ವತ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇತ್ಯಾದಿ ಹಾವಭಾವಗಳು ನವುರಾದ ರೇಖೆಗಳಲ್ಲಿ ಮಾರ್ಮಿಕವಾಗಿ ಮೂಡಿದ್ದವು. ಕಲಾವಿದರಾದ ರಮೇಶ್‌ ರಾವ್‌, ಮಯ್ಯ, ಡಾ| ಕಿರಣ್‌, ರಾಘವೇಂದ್ರ ಕೆ. ಅಮೀನ್‌, ಜೀವನ್‌ ಶೆಟ್ಟಿ, ಜಯವಂತ್‌, ಶ್ರೀನಾಥ್‌, ತ್ರಿವರ್ಣ, ಪ್ರಸಾದ್‌, ಗಣೇಶ್‌ ಮಂದಾರ, ಅದೀಬಾ ಅಲಿ, ಹರೀಶ್‌, ಗಣೇಶ್‌ ಕುಕ್ಕೆಹಳ್ಳಿ ಮತ್ತು ಲಿಯಾಕತ್‌ ಅಲಿಯವರ ಚಿತ್ರಗಳು ಅಲ್ಲಿ ರಾರಾಜಿಸುತ್ತಿದ್ದವು. ಒಟ್ಟಿನಲ್ಲಿ ಗಾಂಧೀಜಿಗೆ ನೂರೈವತ್ತರ ಕುಂಚನಮನ ಕಲಾಪ್ರದರ್ಶನ ಮತ್ತು ಸ್ಪರ್ಧೆ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಲ್ಲಿ ಸಫ‌ಲವಾಯಿತು.

ಉಪಾಧ್ಯಾಯ ಮೂಡುಬೆಳ್ಳೆ

ಟಾಪ್ ನ್ಯೂಸ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Koppala: ಆದಷ್ಟು ಬೇಗ ಆರ್ಥಿಕ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

vaibhavi shandilya

Vaibhavi Shandilya: ಮಾರ್ಟಿನ್‌ ಪ್ರೀತಿ ಪಾತ್ರಳು ನಾನು…; ವೈಭವಿ ಕಣ್ತುಂಬ ನಿರೀಕ್ಷೆ

Delhi: ಬೃಹತ್ ಡ್ರಗ್ಸ್ ಜಾಲ-17 ವರ್ಷ ಬ್ರಿಟನ್‌ ನಲ್ಲಿದ್ದ ವ್ಯಕ್ತಿ ಪಂಜಾಬ್‌ ನಲ್ಲಿ ಬಂಧನ!

Delhi: ಬೃಹತ್ ಡ್ರಗ್ಸ್ ಜಾಲ-17 ವರ್ಷ ಬ್ರಿಟನ್‌ ನಲ್ಲಿದ್ದ ವ್ಯಕ್ತಿ ಪಂಜಾಬ್‌ ನಲ್ಲಿ ಬಂಧನ!

FIR: ಚನ್ನಪಟ್ಟಣ ಉಪಚುನಾವಣೆ ಖರ್ಚಿಗೆ ‘ಎಚ್‌ ಡಿಕೆ’ 50 ಕೋಟಿ ರೂ ಬೇಡಿಕೆ; ಉದ್ಯಮಿ ದೂರು

FIR: ಚನ್ನಪಟ್ಟಣ ಉಪಚುನಾವಣೆ ಖರ್ಚಿಗೆ ‘ಎಚ್‌ ಡಿಕೆ’ 50 ಕೋಟಿ ರೂ ಬೇಡಿಕೆ; ಉದ್ಯಮಿ ದೂರು

2-bng

Anekal: ನಗರದಲ್ಲಿ ಮತ್ತೆ ಮೂವರು ಪಾಕ್‌ ಪ್ರಜೆಗಳ ಬಂಧನ

1-munirathna

DNA Test: ಮುನಿರತ್ನಗೆ ಡಿಎನ್‌ಎ ಟೆಸ್ಟ್‌: ಎಸ್‌ಐಟಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Patiala: ಐತಿಹಾಸಿಕ ದೇಗುಲಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಶ್ರೀ ಕಾಳಿ ದೇವಿ ದೇಗುಲ

Patiala: ಐತಿಹಾಸಿಕ ದೇಗುಲಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಶ್ರೀ ಕಾಳಿ ದೇವಿ ದೇಗುಲ

Navaratri: ಶರನ್ನವರಾತ್ರಿ ಮತ್ತು ಶ್ರೀ ಚಕ್ರಾರಾಧನೆ

Navaratri: ಶರನ್ನವರಾತ್ರಿ ಮತ್ತು ಶ್ರೀ ಚಕ್ರಾರಾಧನೆ

Manipal Hospital has set a new Guinness World Record by performing 3,319 CPRs in just 24 hours!

24 ಗಂಟೆಗಳಲ್ಲಿ 3,319 ಸಿಪಿಆರ್; ಗಿನ್ನೆಸ್ ವಿಶ್ವ ದಾಖಲೆ ಬರೆದ ಮಣಿಪಾಲ್‌ ಆಸ್ಪತ್ರೆ

5

Anandapura ಗ್ರಾಮ ಪಂಚಾಯತ್ ಗಳ ಸೇವೆ ಸಂಪೂರ್ಣ ಬಂದ್

4(1)

Thekkatte: ನವರಾತ್ರಿಗೆ ಮತ್ತೆ ಹೊಸತು ಬರುತಿದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.