ಉತ್ತಮ ಪ್ರದರ್ಶನ ಶ್ರೀಕೃಷ್ಣ ಪಾರಿಜಾತ
Team Udayavani, Apr 26, 2019, 5:00 AM IST
ಭಗವಂತನ ಲೀಲೆ ಏನು ಎಂದು ಅರಿಯುವುದು ಕಷ್ಟ, ಯಾವ ಸಮಯದಲ್ಲಿ ಹೇಗೆ, ಏನು ಮಾಡುವನು ಎಂಬುದೇ ನಿಗೂಢ . ಭೂಭಾರವನ್ನು ಇಳಿಸಲು ಅವತಾರ ತಾಳಿದ ದೇವ ಕೃಷ್ಣ ಸಾಮಾನ್ಯ ಮನುಷ್ಯನಿಗೆ ಬರುವ ಸ್ಥಿತಿಯನ್ನು ತಾನೂ ಪಡುವೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತಾನೆ. ಜೀವನವನ್ನು ಒಂದು ನಾಟಕ ರಂಗ ಮಾಡಿ, ಅದರಲ್ಲಿ ಬರುವ ಎಲ್ಲರನ್ನೂ ಪಾತ್ರಧಾರಿಗಳಾಗಿ ಕುಣಿಸುವ ಸೂತ್ರಧಾರಿಯಾಗಿ ಏನೂ ಅರಿಯದಂತೆ ಇರುವವನೇ ಈ ಶ್ರೀಕೃಷ್ಣ.
ನಾರದರು ಶ್ರೀಕೃಷ್ಣನಲ್ಲಿಗೆ ಬಂದು ಸುರಲೋಕದ ಪುಷ್ಪ ಪಾರಿಜಾತವನ್ನು ಶ್ರೀಕೃಷ್ಣನಿಗೆ ಕೊಟ್ಟು ನಿನಗೆ ಅತಿ ಪ್ರಿಯರಾದರವರಿಗೆ ನೀಡೆನ್ನಲು, ಕೃಷ್ಣ ರುಕ್ಮಿಣಿಗೆ ನೀಡುತ್ತಾನೆ.ಇದನ್ನು ತಿಳಿದ ಸತ್ಯಭಾಮೆ ಕೋಪಗೊಂಡು ಅನ್ನ ಆಹಾರ ತ್ಯಜಿಸಲು, ಕೃಷ್ಣ ಅವಳನ್ನು ಸಂತೈಸುತ್ತಾನೆ. ಅದಕ್ಕಾಗಿ ಆತ ಪಡುವ ಕಷ್ಟ, ಅನಂತರ ಅವಳಿಗೆ ಸ್ವರ್ಗ ಲೋಕಕ್ಕೆ ಕರೆದುಕೊಂಡು ಹೋಗುತ್ತೇನೆ, ಪಾರಿಜಾತದ ವೃಕ್ಷವನ್ನೇ ತೋರಿಸುತ್ತೇನೆ ಎಂದು ಅಭಯವನ್ನು ನೀಡಿ ಅವಳನ್ನು ಸಂತೈಸುವುದು ಇತ್ಯಾದಿ.ಇದು ಕೃಷ್ಣ ಆಡಿದ ನಾಟಕವೇ ಸರಿ. ಏಕೆಂದರೆ ಮುಂದೆ ಇವನ ಮಗನಾದ ನರಕಾಸುರನು ತನ್ನ ತಂದೆ ತಾಯಿಯಿಂದ ಮರಣ ಎಂಬ ವರವನ್ನು ಪೂರೈಸಲು ಸತ್ಯಭಾಮೆಯನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗಲು ಮಾಡಿದ ನಾಟಕ. ಇದಿಷ್ಟು ಶ್ರೀಕೃಷ್ಣ ಪಾರಿಜಾತ ಪ್ರಸಂಗದ ಆಶಯ.
ಪೇಟೆ ವೆಂಕಟ್ರಮಣ ದೇವಸ್ಥಾನದ ಎದುರಿನ ರಂಗಸ್ಥಳದಲ್ಲಿ ಈ ಯಕ್ಷಗಾನವನ್ನು ಸುಬ್ರಹ್ಮಣ್ಯ ಧಾರೇಶ್ವರ ಅವರ ನಿರ್ದೇಶನದಲ್ಲಿ ಸೊಗಸಾಗಿ ಪ್ರಸ್ತುತ ಪಡಿಸಿದವರು ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಮಂಡಳಿಯವರು. ಶ್ರೀಕೃಷ್ಣನ ಪಾತ್ರದಲ್ಲಿ ಸಾಲಿಗ್ರಾಮ ಮೇಳದ ಪ್ರಸನ್ನ ಶೆಟ್ಟಿಗಾರ್ ಪ್ರಸಂಗವು ಎಲ್ಲಿಯೂ ಹಿಂದೆ ಬೀಳದಂತೆ ಅಚ್ಚುಕಟ್ಟಾಗಿ ನಿರೂಪಿಸಿದರು. ಸತ್ಯಭಾಮೆಯಾಗಿ ಹವ್ಯಾಸಿ ಕಲಾವಿದ ಶಮಂತ ಕೋಟರವರದ್ದು ಪ್ರಬುದ್ಧ ಅಭಿನಯ. ಮಕರಂದನಾಗಿ ಹಾಸ್ಯಗಾರ ಶ್ರೀಧರ ಭಟ್ ಕಾಸರ್‌ಕೋಡ್ ಅವರು ಹಾಗೂ ಸಖೀಯಾಗಿ ನಾಗರಾಜ ದೇವಿಮಕ್ಕಿ ಅವರು ಸೂಕ್ತವಾದ ಸಮಯ ಪ್ರಜ್ಞೆಯ ಹಾಸ್ಯದಿಂದ ನಗೆಗಡಲಲ್ಲಿ ತೇಲಿಸಿದರು. ನಾರದರಾಗಿ ಹೆಮ್ಮಾಡಿ ರಾಮಚಂದ್ರ ಭಟ್, ದೇವೇಂದ್ರನಾಗಿ ಉದಯ ನಾಯ್ಕ, ದೇವೇಂದ್ರನ ಬಲದವರಾಗಿ ಪ್ರಶಾಂತ ಆಚಾರ್ಯ ಉತ್ತಮ ರೀತಿಯಲ್ಲಿ ನಿರ್ವಹಿಸಿದರು.
ಧಾರೇಶ್ವರರ ಭಾಗವತಿಕೆ ಇಡೀ ಪ್ರದರ್ಶನದ ಹೈಲೈಟ್. “ಸಿಟ್ಟುಮಾಡಲು ಬೇಡ ಸುಗುಣ ಸಂಪನೆ’° ಹಾಗೂ “ಮಾನಿನಿಮಣಿಯೆ ಬಾರೆ’ ಪದ್ಯಗಳಂತೂ ಮತ್ತೆ ಮತ್ತೆ ಕೇಳಬೇಕೆಂಬ ಭಾವ ಸ್ಪುರಿಸಿತು. ಮದ್ದಲೆಯಲ್ಲಿ ಗಜಾನನ ಭಂಡಾರಿ ಬೋಳ್ಗೆರೆ ಹಾಗೂ ಚಂಡೆಯಲ್ಲಿ ಕೃಷ್ಣಾನಂದ ಶೆಣೈ ಉತ್ತಮ ಸಾಥ್ ನೀಡಿದರು. ಪ್ರಸಂಗ ಪ್ರಾರಂಭಕ್ಕೆ ಮೊದಲು ಸಭಾಲಕ್ಷಣಕ್ಕೆ ನಾಲ್ಕು ಜನ ಹೆಣ್ಣುಮಕ್ಕಳ ಬಾಲಗೋಪಾಲರು ಹಾಗೂ ಐದು ಜನ ಹೆಣ್ಣುಮಕ್ಕಳ ಪೀಠಿಕೆ ಸ್ತ್ರೀವೇಷವನ್ನು ಸ್ವತಃ ವಿಠಲ ಕಾಮತರೇ ಮಾರ್ಗದರ್ಶನ ನೀಡಿ, ಭಾಗವತಿಕೆ ಮಾಡಿದರು.
ರಾಘವೇಂದ್ರ ಉಡುಪ ವಿ. ನೇರಳಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.