ಭಾಗವತ ಕೆ.ಪಿ. ಹೆಗಡೆಯವರಿಗೆ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ


Team Udayavani, Jan 5, 2018, 2:54 PM IST

05-37.jpg

ಬಡಗುತಿಟ್ಟಿನ ಸಾಂಪ್ರದಾಯಿಕ ಯಕ್ಷಗಾನದ ಶ್ರೇಷ್ಠ ಶೈಲಿಗಳಲ್ಲಿ ಒಂದಾದ ಮಾರ್ವಿ ಶೈಲಿಯ ಪ್ರಾತಿನಿಧಿಕ ಭಾಗವತ ನಾರ್ಣಪ್ಪ ಉಪ್ಪೂರರ ಭಾಗವತಿಕೆ ಶೈಲಿಯ ಪ್ರತಿಪಾದಕ ಕೆ.ಪಿ ಹೆಗಡೆಯವರಿಗೆ ಈ ಸಾಲಿನ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಸಲ್ಲುತ್ತಿದೆ.ಪ್ರಶಸ್ತಿ ಪ್ರದಾನ ಜನವರಿ 18ರಂದು ಕೋಟ ಪಟೇಲರ ಮನೆಯಂಗಣದಲ್ಲಿ ನೆರವೇರಲಿದೆ.ಬಡಗುತಿಟ್ಟಿನ ಹಿರಿಯ ಮೇಳವಾದ ಮಂದಾರ್ತಿ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಅಲ್ಲಿಯೇ ಭಡ್ತಿ ಪಡೆದು ದೀರ್ಘ‌ ಕಾಲ ಮಂದಾರ್ತಿ ಮೇಳವೊಂದರಲ್ಲೇ ಸೇವೆ ಸಲ್ಲಿಸಿದ ಹೆಗಡೆಯವರು ಈ ಮೇಳದಲ್ಲಿಯೇ ನಿವೃತ್ತಿ ಹೊಂದಿದ್ದಾರೆ.ಜಾನುವಾರುಕಟ್ಟೆ ಭಾಗವತರು,ಕುಂಜಾಲು ಶೇಷಗಿರಿ ಕಿಣಿ,ಗೋರ್ಪಾಡಿ ವಿಠಲ ಪಾಟೀಲ್‌,ಹಾರಾಡಿ ಅಣ್ಣಪ್ಪ ಗಾಣಿಗರು,ಮತ್ಯಾಡಿ ನರಸಿಂಹ ಶೆಟ್ಟರ ನಂತರ ಮಂದಾರ್ತಿ ಮೇಳವೊಂದರಲ್ಲೇ ದೀರ್ಘ‌ಕಾಲ ಸೇವೆ ಸಲ್ಲಿಸಿದವರಲ್ಲಿ ಇವರೂ ಒಬ್ಬರು.

ಬಡಾ ಬಡಗುತಿಟ್ಟು ಯಕ್ಷಗಾನ ರಂಗಕ್ಕೆ ಮೇರು ಕಲಾವಿದರನ್ನು ನೀಡಿದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪ ಗುಳಗೋಡು ಎಂಬಲ್ಲಿ ಪರಮೇಶ್ವರ ಹೆಗಡೆ-ತುಂಗಭದ್ರ ಅಮ್ಮನವರ ಪುತ್ರನಾಗಿ ಜನಿಸಿದ ಕೃಷ್ಣ ಪರಮೇಶ್ವರ ಹೆಗಡೆಯವರು ಆ ಕಾಲದಲ್ಲಿ ಎಸ್‌.ಎಸ್‌.ಎಲ್‌.ಸಿ ವರೆಗೆ ಓದು ಮುಗಿಸಿದವರು.ಅವರ ಮನೆತನವೇ ಯಕ್ಷಗಾನದ ಮನೆತನ. ಚಿಕ್ಕಪ್ಪ ಮತ್ತು ಸಹೋದರ ಮಾವ ಸ್ವತಹ ಕಲಾವಿದರು.ಆರ್ಥಿಕ ಅಡಚಣೆಯಿಂದ ಓದು ನಿಲ್ಲಿಸಿದ ಹೆಗಡೆಯವರಿಗೆ ಸಂಗೀತದಲ್ಲಿ ಆಸಕ್ತಿ ಮೂಡಿತು.1978ರಲ್ಲಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಭಾಗವತಿಕೆ ತರಬೇತಿ ಪಡೆದರು.ದುರ್ಗಪ್ಪ ಗುಡಿಗಾರ ಮತ್ತು ಶಂಕರ ಭಾಗವತರ ಮದ್ದಳೆಗಾರಿಕೆ ಇವರ ತಾಳಲಯವನ್ನು ಗಟ್ಟಿಗೊಳಿಸಿತು.ಸಹಪಾಠಿಗಳಾಗಿ ಸುಬ್ರಹ್ಮಣ್ಯ ಧಾರೇಶ್ವರ ,ಆರ್‌.ಪಿ.ಹೆಗಡೆಯವರಂತಹ ಭಾಗವತರಿದ್ದರು.ಅಲ್ಲಿನ ತರಬೇತಿಯ ನಂತರ ಮಂದಾರ್ತಿ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಅಲ್ಲಿಯೇ ಒತ್ತು ಭಾಗವತರಾಗಿ ಭಡ್ತಿ ಪಡೆದರು.ಬಳಿಕ ಮೂಲ್ಕಿ, ಪೆರ್ಡೂರು,ಕುಮಟಾ, ಸಾಲಿಗ್ರಾಮ ಮೇಳಗಳಲ್ಲಿ ಸೇವೆ ಸಲ್ಲಿಸಿದ ಅವರ ಭಾಗವತಿಕೆ ಬದುಕಿನ ಸುವರ್ಣಯುಗ ಶಿರಸಿ ಮಾರಿಕಾಂಬ ಮೇಳದಲ್ಲಿ. ಘಟಾನುಘಟಿ ಕಲಾವಿದರಿದ್ದ ಈ ಮೇಳದಲ್ಲಿ ಸದಾಶಿವ ಅಮೀನ್‌,ಹೆರಂಜಾಲು ಗೋಪಾಲ ಗಾಣಿಗ ಮತ್ತು ಹೆಗಡೆಯವರ ಭಾಗವತಿಕೆ,ಶಂಕರ ಭಾಗವತರ ಮದ್ದಳೆ, ಹಳ್ಳಾಡಿ ರಾಕೇಶ ಮಲ್ಯರ ಚೆಂಡೆಯೊಂದಿಗೆ ಗಜಗಟ್ಟಿ ಹಿಮ್ಮೇಳವೆನಿಸಿತು.ಮುಮ್ಮೇಳದಲ್ಲೂ ಚಿಟ್ಟಾಣಿ,ಗೋಡೆ,ತೆಕ್ಕಟ್ಟೆ ಆನಂದ ಮಾಸ್ತರ್‌, ಕುಂಜಾಲು ರಾಮಕೃಷ್ಣ, ಎಂ.ಎ.ನಾಯ್ಕ, ಕೊಕ್ಕಡ ಈಶ್ವರ ಭಟ್‌, ತೋಟಿಮನೆ ಗಣಪತಿ ಹೆಗಡೆ,ಹೊಸಂಗಡಿ ಜಯರಾಮ ಗಾಣಿಗ,ಉಪ್ಪುಂದ ನಾಗೇಂದ್ರ ಮುಂತಾದ ಕಲಾವಿದರಿದ್ದು,ಅಂದು ಪ್ರದರ್ಶಿಸುತಿದ್ದ ಶ್ವೇತ ಪಂಚಕ, ಭಾಗ್ಯಭಾರತಿ ಮುಂತಾದ ಪ್ರಸಂಗಗಳು ಆ ಕಾಲದಲ್ಲಿ ಅತ್ಯಂತ ಯಶಸ್ವಿಯಾಗಿತ್ತು.ಪೆರ್ಡೂರು ಮೇಳದೊಂದಿಗೆ ವಿವಿಧೆಡೆ ಜೋಡಾಟಗಳೂ ನಡೆದದ್ದಿದೆ. 90ರ ದಶಕದಲ್ಲಿ ಮತ್ತೆ ಮಂದಾರ್ತಿ ಮೇಳ ಸೇರಿದ ಅವರು ನಿವೃತ್ತಿಯವರೆಗೂ ಅಲ್ಲಿಯೇ ಸೇವೆ ಸಲ್ಲಿಸುತಿದ್ದರು. ಕಮಲಶಿಲೆ ಮೇಳದಲ್ಲೂ ತಿರುಗಾಟ ಮಾಡಿದ್ದಾರೆ.

ಅವರ ಭಾಗವತಿಕೆಯಲ್ಲಿ ಗುರು ನಾರ್ಣಪ್ಪ ಉಪ್ಪೂರರ ಛಾಪು,ದಸ್ತುಗಳನ್ನು ಬಾಯಿ ತಾಳದ ಮೂಲಕ ಹಾಡುವ ಚಾಕಚಕ್ಯತೆ,ಅಪೂರ್ವ ರಂಗತಂತ್ರ,ಏರು ಶ್ರುತಿಯಲ್ಲಿ ಹಾಡಬಲ್ಲ ಕಂಠ,ರಾಗ ತಾಳ ಮತ್ತು ಲಯಗಳಲ್ಲಿ ಅಪೂರ್ವವಾದ ಹಿಡಿತವನ್ನು ಗಮನಿಸಬಹುದು. ರಾಮಾಂಜನೇಯ,ಚೂಡಾಮಣಿ,ಭಸ್ಮಾಸುರ ಮೋಹಿನಿ ಮುಂತಾದ ಪ್ರಸಂಗಗಳ ಪದ್ಯಗಳನ್ನು ಉಪ್ಪೂರರ ಶೈಲಿಯಲ್ಲಿಯೇ ಹಾಡಿ ಜನಮನ ರಂಜಿಸಿದ್ದರು. ಸ್ವತಹ ಅಂದಿನ ಪ್ರಸಿದ್ಧ ಭಾಗವತ ಕಾಳಿಂಗ ನಾವಡರೇ ಇಂತಹ ಪ್ರಸಂಗಗಳಿಗೆ ಕೆ.ಪಿ ಹೆಗಡೆಯವರೇ ಸಮರ್ಥರು ಎಂದು ಸಂಘಟಕರಿಗೆ ಹೇಳುತ್ತಿದ್ದರು.ರಾಮಾಂಜನೇಯದ ಸೀತೆಯ ಪದ್ಯ “ಏನಿದೇನು ಗುಟ್ಟು ಮಹನೀಯ’ ಮತ್ತು ಅಂಗದ ಸಂಧಾನದ “ಏನಪ್ಪ ರಾವಣೇಂದ್ರ ನೀನಾಜಾನಕಿಯನ್ನು ಕಾಣದಂತೆ ಕದ್ದು ತರಬಹುದೇನಯ್ಯ’ ಹಿಮ್ಮೇಳಾಸಕ್ತರನ್ನು ರಂಜಿಸಿದ ಪದ್ಯಗಳು. ಹಂಗಾರಕಟ್ಟೆ ಕೇಂದ್ರದ ಗುರುವಾಗಿ ಅನೇಕ ಶಿಷ್ಯರನ್ನು ತಯಾರು ಮಾಡಿದ ಹಿರಿಮೆ ಹೆಗಡೆಯವರದ್ದು. ಇವರ ಶಿಷ್ಯರಲ್ಲಿ ಕಿಗ್ಗ ಹಿರಿಯಣ್ಣ ಆಚಾರ್‌, ಉದಯ ಹೊಸಾಳ,ಬೆಳ್ವೆ ಗಣೇಶ ಶೆಟ್ಟಿ, ಪರಮೇಶ್ವರ್‌ನಾಯ್ಕ,ಸೂರಾಲು ರವಿಕುಮಾರರು ಪ್ರಮುಖರು.ಸುದೀರ್ಘ‌ಕಾಲ ಬಯಲಾಟ ಮೇಳಗಳಲ್ಲಿ ಸಂಪ್ರದಾಯದ ಭಾಗವತರಾಗಿ ಪ್ರಸಿದ್ಧಿಯ ಗೋಜಿಗೆ ಹೋಗದೆ ಸಿದ್ಧಿಯ ನೆಲೆಯಲ್ಲಿ ಗುರುತಿಸಲ್ಪಟ್ಟ ಇವರಿಗೆ ಸಂಪ್ರದಾಯ ಬದ್ಧವಾಗಿ ಮಕ್ಕಳ ಮೇಳ ಮುನ್ನೆಡೆಸಿದ ಕಾರ್ಕಡ ಉಡುಪ ಪ್ರಶಸ್ತಿ ಯೋಗ್ಯವಾಗಿಯೇ ಸಂದಿದೆ.

ಪ್ರೊ| ಎಸ್‌. ವಿ. ಉದಯ ಕುಮಾರ ಶೆಟ್ಟಿ 

ಟಾಪ್ ನ್ಯೂಸ್

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Rey Mysterio Sr

Rey Mysterio Sr: ಖ್ಯಾತ ರೆಸ್ಲರ್‌ ರೇ ಮಿಸ್ಟೀರಿಯೊ ಸೀನಿಯರ್‌ ಇನ್ನಿಲ್ಲ

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ

PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Rey Mysterio Sr

Rey Mysterio Sr: ಖ್ಯಾತ ರೆಸ್ಲರ್‌ ರೇ ಮಿಸ್ಟೀರಿಯೊ ಸೀನಿಯರ್‌ ಇನ್ನಿಲ್ಲ

Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!

Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!

Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ

Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.