ಮನಗೆದ್ದ ಮಹಿಳೆಯರ ಭೀಷ್ಮ ವಿಜಯ
Team Udayavani, Sep 13, 2019, 5:00 AM IST
ಕಾರ್ಕಳ ಸಾಹಿತ್ಯ ಸಂಘದ ಸದಸ್ಯರು ನಡೆಸಿಕೊಟ್ಟ ರಸಾನಂದಕರ ತಾಳಮದ್ದಳೆ ಭೀಷ್ಮ ವಿಜಯ ರಸಪೂರ್ಣವಾಗಿ ಮೂಡಿಬಂತು.
ಆರಂಭದಲ್ಲಿ ಭೀಷ್ಮ ಹಾಗೂ ಅಂಬೆ ನಡುವಿನ ಸಂಭಾಷಣೆ ಅರ್ಥಗರ್ಭಿತವಾಗಿತ್ತು. ಭೀಷ್ಮನಾಗಿ ಜ್ಯೋತಿ ಶೆಟ್ಟಿ ಅವರು ಆರಂಭದಿಂದ ಅತ್ಯಂತವರೆಗೂ ನಿರ್ಗಳವಾದ ವಾಗ್ಜರಿಯಿಂದ ಮನಗೆದ್ದರು. ಅಂಬೆಯಾಗಿ ವೃಂದಾ ಶೆಟ್ಟಿಯವರು ತಮ್ಮ ತೂಕದ ಮಾತುಗಳಿಂದ ರಂಜಿಸಿದರು. ವೃದ್ಧ ಪುರೋಹಿತರಾಗಿ ಜಯಶ್ರೀ ಶೆಟ್ಟಿಯವರು ಹಾಸ್ಯಮಿಶ್ರಿತ ಮಾತುಗಳಿಂದ ಸೀಮಿತ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡರು. ಅನಂತರ ಸಾಲ್ವನ ಪ್ರವೇಶದೊಂದಿಗೆ ಪ್ರಸಂಗಕ್ಕೆ ವಿಶೇಷ ಕಳೆ ಬಂತು. ಸಾಲ್ವನಾಗಿ ವನಿತಾ ಹೆಗ್ಡೆ ಅವರು ಗಾಂಭೀರ್ಯಯುಕ್ತ ಮಾತುಗಳಿಂದ ಮಿಂಚಿದರು. ಅನಂತರ ಪರಶುರಾಮ ಹಾಗೂ ಭೀಷ್ಮರೊಳಗಿನ ಸಂಭಾಷಣೆ ಯುದ್ಧದ ಹಂತಕ್ಕೆ ತಲುಪಿ ಕೊನೆಗೂ ಭೀಷ್ಮನ ಪ್ರತಿಜ್ಞೆ ನೆರವೇರುತ್ತದೆ.ಪರಶುರಾಮನಾಗಿ ಶಾಲಿನಿ ಆಳ್ವರ ಮಾತುಗಳು ಮನೋಜ್ಞವಾಗಿದ್ದವು. ಇದು ಭೀಷ್ಮ ವಿಜಯ ಎಂದು ಗುರುಗಳಾದ ಪರಶುರಾಮನಿಂದ ಹೇಳಲ್ಪಡುತ್ತದೆ. ಸುಮಾರು 3 ಗಂಟೆಗಳ ಈ ಪ್ರಸಂಗದಲ್ಲಿ ಭಾಗವತಿಕೆಯಲ್ಲಿ ಭವ್ಯಶ್ರೀ ಮಂಡೆಕೋಲು ಅವರ ಏರಿಳಿತಗಳಿಂದ ಕೂಡಿದ ಅಪೂರ್ವವಾದ ಕಂಠಸಿರಿ ನಿರಂತರ ಚಪ್ಪಾಳೆಗೆ ಪಾತ್ರವಾಯಿತು.
ಮದ್ದಳೆಯಲ್ಲಿ ರವಿರಾಜ್ ಜೈನ್, ಚಂಡೆಯಲ್ಲಿ ದೇವಾನಂದ ಭಟ್, ಚಕ್ರತಾಳದಲ್ಲಿ ದ್ವಿಜೇತ್ ಭಟ್ ಸಾಥ್ ನೀಡಿದರು. ರಾಮ ಭಟ್ ತಾಳಮದ್ದಳೆಯ ನಿರ್ದೇಶಕರಾಗಿದ್ದರು.
ಕೆ.ಕೆ. ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.