ಅರುವದವರಿಗೆ ಬೋಳಾರ ಪ್ರಶಸ್ತಿ

Team Udayavani, Dec 1, 2017, 2:13 PM IST

01-43.jpg

ಯಕ್ಷಗಾನದ ದಂತಕಥೆಗಳೆನಿಸಿದ ಅಳಿಕೆ, ಬೋಳಾರ ಮತ್ತು ಶೇಣಿಯವರು ಜನಿಸಿ ವರ್ಷ ನೂರಾಯಿತು. ಆದರೆ ಶತಮಾನೋತ್ಸವದ ಆಸುಪಾಸಿನಲ್ಲಿರುವ ಸಂದರ್ಭ; ಹೇಳಿಕೊಳ್ಳುವಂತಹ ಕಾರ್ಯ ಕಲಾಪಗಳೇನೂ ನಡೆದ ಹಾಗಿಲ್ಲ. ಎ. ಸಿ. ಭಂಡಾರಿ ಅವರ ನೇತೃತ್ವದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಈ ಮೂವರು ಕಲಾವಿದರ ಶತಮಾನದ ನೆನಪುಗಳಿಗಾಗಿ ಕಾರ್ಯಕ್ರಮ ರೂಪಿಸುವ ಬಗ್ಗೆ ಚಿಂತನೆ ನಡೆಸಿದೆ. ಇತ್ತೀಚೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಹಾರಾಡಿ ರಾಮ ಗಾಣಿಗ ಮತ್ತು ಅಳಿಕೆ ರಾಮಯ್ಯ ರೈಯವರ ಶತಕದ ಸ್ಮತಿಯೊಂದಿಗೆ ಕಿರು ಹೊತ್ತಗೆಗಳೆರಡನ್ನು ಹೊರತಂದಿರುವುದು ಗಮನಾರ್ಹ.

ಸಾಧನಶೀಲ ಕಲಾವಿದರು ಗತಿಸಿದ ಬಳಿಕ ಅವರನ್ನು ಸ್ಮರಿಸುವ ಕಾರ್ಯಕ್ರಮಗಳು ನಡೆಯಬೇಕೆಂಬುದು ಸಹಜವೇ. ಆದರೆ ಎಲ್ಲ ಕಲಾವಿದ ರಿಗೂ ಆ ಭಾಗ್ಯವಿಲ್ಲ. ಸಾರ್ವಜನಿಕವಾಗಿ ಅಲ್ಲದಿದ್ದರೂ ಕನಿಷ್ಠ ಕುಟುಂಬಿಕ ರಾದರೂ ಆಗಿ ಹೋದ ಹಿರಿಯ ಸಾಧಕರ ಹೆಸರಿನಲ್ಲಿ ಗಮನಾರ್ಹ ಕಾರ್ಯವನ್ನೇನಾದರೂ ಕೈಗೆತ್ತಿಕೊಂಡರೆ ಅದು ಶ್ಲಾಘÂವೆನಿಸುತ್ತದೆ. ಈ ನಿಟ್ಟಿನಲ್ಲಿ ಅಳಿಕೆ ಮತ್ತು ಬೋಳಾರರ ನೆನಪಿನಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸಹಾಯ ನಿಧಿ ವಿತರಣೆ ಮತ್ತು ಪ್ರಶಸ್ತಿ ಪ್ರದಾನ ಉಲ್ಲೇಖನೀಯ.

ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್‌ ಮೂಲಕ ಅವರ ಮಕ್ಕಳು ಕೊಡ ಮಾಡುವ “ಅಳಿಕೆ ಸಹಾಯನಿಧಿ’ಯನ್ನು ಈ ಬಾರಿ ಹಿರಿಯ ಕಲಾವಿದರಾದ ಕೆ. ಎಚ್‌. ದಾಸಪ್ಪ ರೈ ಮತ್ತು ಬಾಯಾರು ಆನಂದ ಪುರುಷರಿಗೆ ಗೃಹಸಮ್ಮಾನ ದೊಂದಿಗೆ ನೀಡಲಾಗಿದೆ. ಅದರಂತೆ ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ವತಿಯಿಂದ ಬೋಳಾರ ಕರುಣಾಕರ ಶೆಟ್ಟಿ ಅವರ ನೇತೃತ್ವದಲ್ಲಿ ನೀಡಲಾಗುತ್ತಿರುವ “ಬೋಳಾರ ಪ್ರಶಸ್ತಿ’ಗೆ ಈ ಬಾರಿ ಬೋಳಾರರ ಒಡನಾಡಿ ಕಲಾವಿದ, ಅರುವ ಕೊರಗಪ್ಪ ಶೆಟ್ಟಿ ಆಯ್ಕೆಯಾಗಿದ್ದಾರೆ.

ಅರುವ ಕೊರಗಪ್ಪ ಶೆಟ್ಟಿಯವರು ಬೋಳಾರದವರೊಂದಿಗೆ ಸಹಕಲಾವಿದನಾಗಿ ತಿರುಗಾಟ ಮಾಡಿದ ದೀರ್ಘ‌ ಅನುಭವ ಹೊಂದಿರು ವವರು. ಡಿಸೆಂಬರ್‌ 3, 2017ರಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದಲ್ಲಿ ಬೋಳಾರ ನಾರಾಯಣ ಶೆಟ್ಟರ ಸಂಸ್ಮರಣಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡು ವರು. ಶ್ರೀ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟವೂ ಏರ್ಪಾಡಾಗಿದೆ.

ಭಾಸ್ಕರ ರೈ ಕುಕ್ಕುವಳ್ಳಿ

ಟಾಪ್ ನ್ಯೂಸ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.