ಕನ್ನಡದ ಉಳಿವಿಗಾಗಿ ನಡೆದ ಅಭಿಯಾನ
Team Udayavani, Jun 15, 2018, 6:00 AM IST
ಭೌಗೋಳಿಕವಾಗಿ ಅನ್ಯಭಾಷಾ ಸ್ವಾಮಿತ್ವಕ್ಕೊಳಗಾಗಿರುವ ಕಾಸರಗೋಡಿನ ಕನ್ನಡ ಭಾಷೆ ತನ್ನ ಅಸ್ಮಿತೆಯನ್ನುಳಿಸಿಕೊಳ್ಳಲು ಹೆಣಗಾಡುತ್ತಿದೆ. ಕಾಸರಗೋಡಿನ ಕನ್ನಡ ಧ್ವನಿ ಕ್ಷೀಣಿಸುತ್ತಿದೆಯೇ ಎಂಬ ಆತಂಕವಿದೆ. ಈ ಮಧ್ಯೆ ಅದನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ಹಲವು ಸಂಸ್ಥೆಗಳು ತಮ್ಮದೇ ಆದ ದೇಣಿಗೆಗಳನ್ನು ನೀಡುತ್ತಿವೆ. ಅವುಗಳಲ್ಲಿ ಕನ್ನಡ ಸಂಸ್ಕೃತಿಯನ್ನೇ ಉಸಿರಾಗಿಸಿಕೊಂಡ “ರಂಗ ಚಿನ್ನಾರಿ’ ಕಾಸರಗೋಡು ಹಮ್ಮಿಕೊಂಡ ನೆನೆ… ನೆನೆ… ಕನ್ನಡ ಗಾನವೆಂಬ ವಿನೂತನ ಕಾರ್ಯಕ್ರಮ ಅಪೇಕ್ಷಣಿಯವಾದುದು.
ಕಾಸರಗೋಡು ಚಿನ್ನಾರವರ ನೇತೃತ್ವದ “ರಂಗ ಚಿನ್ನಾರಿ’ ಸಂಸ್ಥೆಯು ಸಂಸ್ಕೃತಿಯ ಬೇರುಗಳಿರುವುದು ಹಳ್ಳಿಗಳಲ್ಲಿ ಎಂಬ ಕಲ್ಪನೆಯೊಂದಿಗೆ “ಹಳ್ಳಿಯೆಡೆಗೆ…’ ಎಂಬ ವಿನೂತನ ಅಭಿಯಾನವನ್ನು ಕೈಗೊಂಡಿತು. ಏಳು ಹಳ್ಳಿಗಳಲ್ಲಿ ಪ್ರಸಿದ್ಧ ಗಾಯಕರ ಮೂಲಕ ಕನ್ನಡ ಗೀತೆಗಳ ಝೇಂಕಾರವನ್ನು ಪ್ರತಿಧ್ವನಿಸಿ ಕನ್ನಡ ಸಾಂಸ್ಕೃತಿಕ ವಲಯವನ್ನು ನಿರ್ಮಿಸುವ ಕಾರ್ಯವನ್ನು ಮಾಡಿತು. ಮೇ ತಿಂಗಳ 13ರಿಂದ 19ರ ತನಕ ಉಪ್ಪಳ, ಬದಿಯಡ್ಕ ಕೊಂಡೆವೂರು, ಮುಳ್ಳೇರಿಯಾ, ಏತಡ್ಕ, ಕಾಟುಕುಕ್ಕೆ ಹಾಗೂ ಮೀಯಪದವಿನಲ್ಲಿ ಈ ಅಭಿಯಾನ ನಡೆಯಿತು.ಕೆ.ಎಸ್. ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗ, ದ. ರಾ. ಬೇಂದ್ರೆ, ಸುಬ್ರಾಯ ಚೊಕ್ಕಾಡಿ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ ಮುಂತಾದ ಕವಿಗಳ ಸಾಹಿತ್ಯಕ್ಕೆ ರವೀಂದ್ರ ಪ್ರಭು, ಸೀಮಾ ರಾಯ್ಕರ್, ಕಿಶೋರ್ ಪೆರ್ಲ ಮೊದಲಾದವರು ತಮ್ಮ ಶಾರೀರ ಮಾಧುರ್ಯದಿಂದ ಜೀವ ತುಂಬಿದರು. ಸಿ. ಅಶ್ವತ್ಥ್ರವರು ಹಾಡಿ ಪ್ರಸಿದ್ಧಿ ತಂದ ಹಾಡುಗಳನ್ನು ಈ ಗಾಯಕರು ಚ್ಯುತಿಯಿಲ್ಲದೆ ಹಾಡಿ ಮನಗೆದ್ದರು. ಪ್ರತಿ ಕಾರ್ಯಕ್ರಮ ಆ ಪ್ರದೇಶದ ಸ್ಥಳ ದೇವರ ಸ್ತುತಿಯೊಂದಿಗೆ ಆರಂಭಗೊಂಡು ದೀಪವು ನಿನ್ನದೇ… ಯಾವ ಮೋಹನ ಮುರಳಿ ಕರೆಯಿತೋ… ಒಳಿತು ಮಾಡೋ ಮನುಜ… ಒಂದಿರುಳು ಕನಸಿನಲ್ಲಿ… ಕುರುಬರೊ ನಾವು ಕುರುಬರೊ… ಮುಂತಾದ ಭಾವನಾತ್ಮಕ ಹಾಡುಗಳು ಸಹೃದಯರಿಗೆ ಮುದ ನೀಡಿತು. ಪಕ್ಕಾ ವಾದ್ಯದಲ್ಲಿ ಅಭಿಜಿತ್ ಶೆಣೈ , ತಬ್ಲಾದಲ್ಲಿ ಪುರುಷೋತ್ತಮ ಕೊಪ್ಪಲ, ಕೀಬೋರ್ಡ್ ಹಾಗೂ ರಿದಂ ಪ್ಯಾಡ್ ವಾದಕರಾಗಿ ರಾಜೇಶ್ ಭಾಗವತ್ ಸಾಥಿಯನ್ನಿತ್ತರು.
ರಾಜಾರಾಮ ರಾವ್ ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Mumbai: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!
CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ
Kollywood: ಲೇಡಿ ಸೂಪರ್ ಸ್ಟಾರ್ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್ ದಾಖಲು
Sagara: ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.