ಕಾರ್ಟೂನ್‌ ಕ್ಯಾಂಪ್‌ ವಿದ್ಯಾರ್ಥಿಗಳು ನಕ್ಕು ನಲಿದರು 


Team Udayavani, Jun 30, 2017, 3:35 AM IST

KALA-4.jpg

ಮಕ್ಕಳ ಪ್ರತಿಭಾ ವಿಕಸನದ ಮೊದಲ ಹೆಜ್ಜೆಯೇ ಶಾಲೆ. ಎಲ್ಲ ರೀತಿಯ ಜೀವನ ಕೌಶಲಗಳು ಮತ್ತು ಮೌಲ್ಯಶಿಕ್ಷಣ ಮಕ್ಕಳಿಗೆ ಶಾಲೆಯಲ್ಲಿ ಸಿಗುತ್ತದೆ. ಮಗು ಮನೆಯಲ್ಲಿ ಎಷ್ಟು ಕಲಿತರೂ ಅದು ಏಕಮುಖ ಶಿಕ್ಷಣವಾಗುತ್ತದೆ. ಶಾಲೆಯಲ್ಲಿ ವಿವಿಧ ವ್ಯಕ್ತಿತ್ವದ ಮಕ್ಕಳೊಂದಿಗೆ ಬೆರೆತು ಕಲಿಯುವ ಶಿಕ್ಷಣ ಬಹುಮುಖೀಯಾಗಿ ಪರಿಣಾಮಕಾರಿಯಾಗಿರುತ್ತದೆ. ಪಾಠಗಳೊಂದಿಗೆ ಪಠ್ಯೇತರ ಚಟುವಟಿಕೆಗಳೂ ಸೇರಿ ಶಾಲೆಯಲ್ಲಿ ವಿದ್ಯಾರ್ಥಿ ಪ್ರತಿಭೆ ಅರಳುತ್ತದೆ. 

ಮೆದುಳಿನ ಅರ್ಧಭಾಗದ ವಿಕಸನ ಪಾಠೇತರ ಚಟುವಟಿಕೆ ಯಿಂದ ಆಗುತ್ತದೆ ಎಂದು ಮನೋತಜ್ಞರು ಹೇಳುತ್ತಾರೆ. ಬರೇ ಪಾಠಗಳನ್ನು ಉರು ಹೊಡೆದು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಾತ್ರಕ್ಕೆ ಮಕ್ಕಳು ಪ್ರತಿಭಾಸಂಪನ್ನರೆಂದು ಹೇಳಲಾಗದು. ಲಲಿತಕಲೆ- ಕುಶಲಕಲೆಗಳಲ್ಲಿ ಅವರ ತೊಡಗಿಸಿಕೊಳ್ಳುವಿಕೆ ಎಷ್ಟರ ಮಟ್ಟಿಗಿದೆ ಎನ್ನುವುದೂ ಮುಖ್ಯವಾಗುತ್ತದೆ. ಏಕೆಂದರೆ ಮನುಷ್ಯ ಭಾವಜೀವಿ. ಅವನಲ್ಲಿ ಭಾವನೆಗಳು ಅರಳಿದಾಗ ಅದನ್ನು ಪ್ರಸ್ತುತಪಡಿಸಲು ಇರುವ ಮಾಧ್ಯಮವೆಂದರೆ ಲಲಿತಕಲೆಗಳು. ಇವುಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ನಮ್ಮ ಜೀವನದ ಬೇಸರಗಳನ್ನು ಮರೆತು ಪುನಶ್ಚೇತನಗೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೂ ಶಾಲಾ ಪಾಠಗಳ ಬೇಸರ ಮರೆತು ಪುನಶ್ಚೇತನಗೊಳ್ಳಲು ಮಧ್ಯೆ ಮಧ್ಯೆ ಕಲಾಚಟುವಟಿಕೆಗಳು ಅತ್ಯವಶ್ಯಕ. ಈ ಕ್ರಿಯೆ ಶಾಲೆಗಳಲ್ಲಿ ನಿರಂತರವಾದಾಗ ಮಕ್ಕಳ ಪ್ರತಿಭೆಯ ಅನಾವರಣವಾಗುತ್ತದೆ. ಅದಕ್ಕಾಗಿ ವಿಕಸನ ಶಿಬಿರಗಳು ಶಾಲೆಗಳಲ್ಲಿ ಆಗಾಗ್ಗೆ ನಡೆಯುತ್ತಿದ್ದರೆ ಚೆನ್ನ. ಇದಕ್ಕೆ ಪೂರಕವಾಗಿ ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ  ಒಂದು ದಿನದ ವ್ಯಂಗ್ಯಚಿತ್ರ (ಕಾರ್ಟೂನ್‌) ರಚನಾ ಶಿಬಿರ ನಡೆದು ಮಕ್ಕಳು ಖುಷಿಪಟ್ಟರು. ಅವರಲ್ಲಿ ಸುಪ್ತವಾಗಿರುವ ಪ್ರತಿಭೆಗಳು ಅನಾವರಣಗೊಂಡವು.

ಸಂಪನ್ಮೂಲ ವ್ಯಕ್ತಿಯಾಗಿ ಕಲಾವಿದ ಉಡುಪಿಯ ಜೀವನ್‌ ಶೆಟ್ಟಿ ಆಗಮಿಸಿ ವ್ಯಂಗ್ಯಚಿತ್ರ ಕಲೆಯನ್ನು ವೈಶಿಷ್ಟ್ಯಪೂರ್ಣವಾಗಿ ಕಲಿಸಿಕೊಟ್ಟರು. ವ್ಯಂಗ್ಯ ಚಿತ್ರ ರಚನೆಯ ಆರಂಭಿಕ ಹಂತಗಳು, ಬಳಸುವ ಚಿಹ್ನೆಗಳು, ವಿಕಸಿಸಿ ಬಿಡಿಸುವ ಭಾಗಗಳು, ನವರಸ ಭಾವಗಳನ್ನು ರೂಪಿಸುವ ನಕ್ಷೆಗಳನ್ನು ಚಿತ್ರಿಸಿ ತೋರಿಸಿದರು. ವಿದ್ಯಾರ್ಥಿಗಳಿಂದ ಮಾಡಿಸಿದರು. ಒಂದು ವಿಷಯವನ್ನು ಕೊಟ್ಟು ಅದರ ಬಗ್ಗೆ ವಿದ್ಯಾರ್ಥಿಗಳೇ ವ್ಯಂಗ್ಯಚಿತ್ರ ಬರೆಯುವಂತೆ ಪ್ರೇರೇಪಿಸಿದರು. ಕಿರು ವ್ಯಂಗ್ಯಚಿತ್ರ ಸ್ಪರ್ಧೆಯನ್ನೂ ನಡೆಸಿ ಬಹುಮಾನ ನೀಡಿದರು. ಶಿಬಿರದಲ್ಲಿ ಭಾಗವಹಿಸಿದ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತು ವೈಶಿಷ್ಟ್ಯಪೂರ್ಣ ವ್ಯಂಗ್ಯಚಿತ್ರಗಳನ್ನು ಚಿತ್ರಿಸಿದರು. ಒಬ್ಬರಿಗೊಬ್ಬರು ಚಿತ್ರ ತೋರಿಸಿ ಖುಷಿಪಟ್ಟರು. ನಕ್ಕು ನಲಿದರು. ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಬಿ. ಹಾಗೂ ಶಿಕ್ಷಕರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಚಿತ್ರಕಲಾ ಶಿಕ್ಷಕರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾಟೂìನ್‌ ಶಿಬಿರ ವಿದ್ಯಾರ್ಥಿ ಪ್ರತಿಭಾ ವಿಕಸನಕ್ಕೆ ಪೂರಕವಾಯಿತು.

ಉಪಾಧ್ಯಾಯ ಮೂಡುಬೆಳ್ಳೆ

ಟಾಪ್ ನ್ಯೂಸ್

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.