ಮಕ್ಕಳಲ್ಲಿ ನಗುವರಳಿಸಿದ ಕಾರ್ಟೂನ್ ರಚನೆ
Team Udayavani, Jul 13, 2018, 6:00 AM IST
ಪಾಠೇತರ ಚಟುವಟಿಕೆಯಿಂದ ಮಕ್ಕಳ ಮೆದುಳಿನ ಅರ್ಧಭಾಗದ ವಿಕಸನ ಆಗುತ್ತದೆ ಎಂದು ಮನೋತಜ್ಞರು ಹೇಳುತ್ತಾರೆ. ಮಕ್ಕಳ ಪ್ರತಿಭೆಗೆ ಲಲಿತ ಕಲೆಗಳಲ್ಲಿ ಅವರ ತೊಡಗಿಸಿಕೊಳ್ಳುವಿಕೆ ಎಷ್ಟರ ಮಟ್ಟಿಗಿದೆ ಎನ್ನುವುದೂ ಅಳತೆಗೋಲಾಗುತ್ತದೆ. ವಿದ್ಯಾರ್ಥಿಗಳಿಗೂ ಶಾಲಾ ಪಾಠಗಳ ಬೇಸರ ಮರೆತು ಪುನಚ್ಚೇತನಗೊಳ್ಳಲು ಮಧ್ಯೆ ಮಧ್ಯೆ ಕಲಾಚಟುವಟಿಕೆಗಳು, ಕ್ರೀಡೆಗಳು ಅತ್ಯವಶ್ಯಕ. ಅದಕ್ಕಾಗಿಯೇ ಪಾಠಗಳ ಮಧ್ಯೆ ಚಿತ್ರಕಲೆ, ಸಂಗೀತ, ಕ್ರಾಫ್ಟ್, ನಾಟಕಾಭಿನಯ, ನಾಟ್ಯ, ತೋಟಗಾರಿಕೆ ಅವಧಿಗಳನ್ನು ಅಳವಡಿಸುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ವಾರ ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಒಂದು ದಿನದ ವ್ಯಂಗ್ಯಚಿತ್ರ (ಕಾರ್ಟೂನ್) ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.
ವ್ಯಂಗ್ಯಚಿತ್ರ ಕಲಾವಿದ ಜೀವನ್ ಶೆಟ್ಟಿ ವೈಶಿಷ್ಟ್ಯಪೂರ್ಣವಾಗಿ ವ್ಯಂಗ್ಯಚಿತ್ರಕಲೆಯನ್ನು ಕಲಿಸಿಕೊಟ್ಟರು. ವ್ಯಂಗ್ಯ ಚಿತ್ರ ರಚನೆಯ ಆರಂಭಿಕ ಹಂತಗಳು, ಬಳಸುವ ಚಿಹ್ನೆಗಳು, ವಿಕಸಿಸಿ ಬಿಡಿಸುವ ಭಾಗಗಳು, ಚಿತ್ರದೊಳಗೆ ನವರಸ ಭಾವಗಳನ್ನು ರೂಪಿಸುವ ರೀತಿಗಳನ್ನು ಚಿತ್ರಿಸಿ ತೋರಿಸಿದರು. ವಿದ್ಯಾರ್ಥಿಗಳಿಂದಲೂ ವ್ಯಂಗ್ಯಚಿತ್ರಗಳನ್ನು ಮಾಡಿಸಿದರು. ಒಂದು ವ್ಯಂಗ್ಯಚಿತ್ರವನ್ನು ಕೊಟ್ಟು ಅದರ ಮುಂದಿನ ಭಾಗವನ್ನು ವಿದ್ಯಾರ್ಥಿಗಳೇ ಬರೆಯುವಂತೆ ಪ್ರೇರೇಪಿಸಿ ಉತ್ತಮ ಪ್ರಸ್ತುತಿಗೆ ಬಹುಮಾನ ನೀಡಿದರು. ಭಾಗವಹಿಸಿದ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತು ವೈಶಿಷ್ಟ್ಯಪೂರ್ಣ ವ್ಯಂಗ್ಯಚಿತ್ರಗಳನ್ನು ಚಿತ್ರಿಸಿದರು. ಒಬ್ಬರಿಗೊಬ್ಬರು ತಮ್ಮ ಚಿತ್ರ ತೋರಿಸಿ ಖುಷಿಪಟ್ಟರು, ನಕ್ಕು ನಲಿದರು.
ಉಪಾಧ್ಯಾಯ ಮೂಡುಬೆಳ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.