ಸಂಭ್ರಮಿಸಿದ ಸುವರ್ಣ ಮಧು ಸರಣಿ


Team Udayavani, Sep 1, 2017, 1:30 PM IST

01-KALA-1.jpg

ಕದ್ರಿಯ ರಾಜಾಂಗಣದಲ್ಲಿ ನಡೆದ ಸರಯೂ ಸಪ್ತಾಹದಲ್ಲಿ ಒಂದು ದಿನದ ಮಹಿಳಾ ತಾಳಮದ್ದಳೆ ಸಂಭ್ರಮವೂ ಸೇರಿ 8 ದಿನಗಳ ಅಭೂತಪೂರ್ವ ಕಾರ್ಯಕ್ರಮ ಯಕ್ಷ ಕಲಾರಸಿಕರ ಹೃದಯವನ್ನು ತಟ್ಟಿತು. ವಿಶೇಷವಾಗಿ ಅಂಧಕಲಾವಿದ ಸಮ್ಮಾನ, ಅರಳು ಪ್ರತಿಭೆಗಳ ಸಮ್ಮಾನ, ಸಾಧಕ ಸಮ್ಮಾನಗಳ ಜತೆಜತೆಗೆ “ಮಧುಛಾಯಾ’ ಕೃತಿ ಬಿಡುಗಡೆ ಹಾಗೂ ಮಧುಸೂದನ ಅಲೆವೂರಾಯರ ಸಮ್ಮಾನ ಇವೆಲ್ಲವೂ ಕಾರ್ಯಕ್ರಮಕ್ಕೆ ಮೆರುಗು ನೀಡಿದುವು. “ಶ್ರೀದೇವಿ ಮಹಾತ್ಮೆಯನ್ನು ಮೂರಾಗಿ ವಿಂಗಡಿಸಿ ಸರಯೂ ಮಕ್ಕಳೇ ಪ್ರದರ್ಶಿಸಿದ್ದು ಹೈಲೈಟ್‌.

ಆರಂಭದ ದಿನ ಮೇಧಿನಿ ನಿರ್ಮಾಣ, ಮಾಲಿನಿ ವಿವಾಹ ಸರಯೂ ಸದಸ್ಯ-ಸದಸ್ಯೆಯರೇ ನಡೆಸಿಕೊಟ್ಟರೆ ಹಿಮ್ಮೇಳದಲ್ಲಿ ಸತೀಶ್‌ ಶೆಟ್ಟಿ ಬೋಂದೆಲ್‌, ಶ್ರೀಶ ರಾವ್‌ ಮತ್ತು ಅಕ್ಷಯ್‌ ವಿಟ್ಲ ಸಹಕರಿಸಿದರು. ದ್ವಿತೀಯ ದಿನ ಪ್ರಸಾದ ಬಲಿಪ, ಪದ್ಯಾಣ ಶಂಕರನಾರಾಯಣ ಭಟ್‌, ಚೈತನ್ಯ ಕೃಷ್ಣ ಪದ್ಯಾಣರ ಹಿಮ್ಮೇಳದಲ್ಲಿ “ಸಣ್ತೀಪರೀಕ್ಷೆ’ ಎಂಬ ಯಕ್ಷಗಾನ ಸುಂದರವಾಗಿ ಮೂಡಿಬಂತು. ರವಿ ಅಲೆವೂರಾಯರು ಕೃಷ್ಣನಾದರೆ, ರುಕ್ಮಿಣಿಯಾಗಿ ರಾಮಚಂದ್ರ ಸಾಲ್ಯಾನ್‌, ಹಾಸ್ಯದಲ್ಲಿ ಪೂರ್ಣೇಶ ಆಚಾರ್ಯ, ಸುಭದ್ರೆಯಾಗಿ ಸಂಜಯ ಕುಮಾರ್‌ ಗೋಣಿಬೀಡು, ಅರ್ಜುನನಾಗಿ ಸುಬ್ರಾಯ ಹೊಳ್ಳರು ರಂಜಿಸಿದರು. ಉಳಿದ ಪಾತ್ರಗಳಲ್ಲಿ ಸಬ್ಬಣಕೋಡಿ ರಾಮ ಭಟ್‌, ರವಿ ಭಟ್‌ ನೆಲ್ಯಾಡಿ ಇದ್ದರು. ಕಥೆ ಉತ್ತಮವಾಗಿ ಮೂಡಿಬಂತು. 

“ದಕ್ಷಾಧ್ವರ’ದಲ್ಲಿ ಗೋಪಾಲಕೃಷ್ಣ ಮಯ್ಯ, ದೇವೀಪ್ರಸಾದ್‌ ಕಟೀಲು, ದೇವಾನಂದ ಭಟ್‌, ಬೆಳುವಾಯಿ ಹಿಮ್ಮೇಳದವರಾದರೆ ಜಯಾನಂದ ಸಂಪಾಜೆ ದೇವೇಂದ್ರ, ಸುಣ್ಣಂಬಳ ವಿಶ್ವೇಶ್ವರ ಭಟ್‌ ಈಶ್ವರನಾಗಿ, ಮಿಜಾರು ತಿಮ್ಮಪ್ಪನವರು ವಿದೂಷಕ ನಾಗಿ, ಜಯಪ್ರಕಾಶ್‌ ಹೆಬ್ಟಾರ್‌ ವೀರಭದ್ರನಾಗಿ ಕಥೆಯ ಯಶಸ್ಸಿಗೆ ಕಾರಣರಾದರು. ನಾಲ್ಕನೇ ದಿನ ಅಂಧಕಲಾವಿದ ಗುರುರಾಜ್‌ ಅವರಿಗೆ ಸಮ್ಮಾನದೊಂದಿಗೆ ಸರಯೂ ಮಕ್ಕಳಿಂದ “ಮಹಿಷ ವಧೆ’ ನಡೆಯಿತು. ಕು| ಕಾವ್ಯಶ್ರೀ, ಶ್ರೀಪತಿ ನಾಯಕ್‌, ಸುಬ್ರಹ್ಮಣ್ಯ ಚಿತ್ರಾಪುರ ಅವರ ಹಿಮ್ಮೇಳವಿತ್ತು. ಐದನೇ ದಿನ ಪುಂಡಿಕಾç ಗೋಪಾಲಕೃಷ್ಣ ಭಟ್‌, ಭಾಸ್ಕರ ಭಟ್‌ ಕಟೀಲು, ಲೋಕೇಶ್‌ ಕಟೀಲ್‌ ಅವರ ಹಿಮ್ಮೇಳದೊಂದಿಗೆ “ಕೀಚಕವಧೆ’ ನಡೆಯಿತು. ವಿಜಯಲಕ್ಷ್ಮೀ ಧರ್ಮರಾಯನಾದರೆ, ಭೀಮನಾಗಿ ಕಿಶೋರ್‌ ಕೊಮ್ಮೆ, ಅರ್ಜುನನಾಗಿ ವೆಂಕಟೇಶ ಭಟ್‌ ಕೆ.ಎಂ., ನಕುಲ ಸಹದೇವನಾಗಿ ಹರಿಚರಣ್‌ ಮತ್ತು ಮಧುಸೂದನರು ಭಾಗವಹಿಸಿದರು. ಕೀಚಕನಾಗಿ ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಸಖನಾಗಿ ಮಹೇಶ ಮಣಿಯಾಣಿ ಭಾಗವಹಿಸಿದರು. ವಲಲಭೀಮನಾಗಿ ಡಾ| ಸತ್ಯಮೂರ್ತಿ ಪಾತಾಳರು ತಮ್ಮ ಪ್ರತಿಭೆಯನ್ನು ತೋರಿದರು. ಉಪಕೀಚಕರಾಗಿ ಸ್ವಸ್ತಿಶ್ರೀ, ಶರಶ್ಚಂದ್ರ, ಶ್ರೀಕಾಂತ್‌ರವರು ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ನೀಡಿದರು.

ಶನಿವಾರ ಮಧ್ಯಾಹ್ನ ಹರಿನಾರಾಯಣದಾಸ ಆಸ್ರಣ್ಣ, ಡಾ| ಎಂ. ಪ್ರಭಾಕರ ಜೋಷಿ, ಕದ್ರಿ ನವನೀತ ಶೆಟ್ಟಿಯವರ ಕೂಡುವಿಕೆಯಿಂದ  “ಕರ್ಣಾರ್ಜುನ’ ತಾಳಮದ್ದಳೆ ನಡೆಯಿತು. ಪ್ರಶಾಂತ್‌ ರೈ, ಕಲ್ಮಡ್ಕ ಶಂಕರ ಭಟ್‌, ರೋಹಿತ್‌ ಉಚ್ಚಿಲರು ಹಿಮ್ಮೇಳದಲ್ಲಿ ಸಹಕರಿಸಿದರು. ಸಾಯಂಕಾಲ ಸೀತಾರಾಂ ಕುಮಾರ್‌ರ ನೇತೃತ್ವದಲ್ಲಿ “ಪದ್ಮಾವತಿ ಪರಿಣಯ’ ಬಯಲಾಟ ನಡೆಯಿತು. ಚಿನ್ಮಯ ಭಟ್‌ ಮತ್ತು ಗಿರೀಶ ರೈ ಕಕ್ಕೆಪದವು ಭಾಗವತರಾದರೆ, ಪದ್ಯಾಣ ಶಂಕರನಾರಾಯಣ ಭಟ್‌ ಮತ್ತು ಮುರಾರಿ ಕಡಂಬಳಿತ್ತಾಯರು ಹಿಮ್ಮೇಳವನ್ನು ಚೆನ್ನಾಗಿಯೇ ಒದಗಿಸಿದರು.

ಲಕ್ಷ್ಮಣ ಕುಮಾರ್‌ ಮರಕಡ ದೇವೇಂದ್ರನಾಗಿ ಮಿಂಚಿದರು. ಹಿತೇನ್‌, ಹರಿಚರಣ್‌, ಸುಜಯ ಕೋಟ್ಯಾನ್‌ ಮತ್ತು ವಿನೀತ್‌ ರೈ ಅವರು ದಿಕಾ³ಲಕ ರಾದರು. ಗಣಾಧಿರಾಜ ತಂತ್ರಿ ವೃಷಭಾಸುರನಾದರೆ ಉಮೇಶ ಕುಪ್ಪೆಪದವು ವರಾಹ ಸ್ವಾಮಿಯಾದರು. ಸಂಜೀವ, ಶಂಕರ್‌, ಶಿವಪ್ರಸಾದ್‌ ಮತ್ತು ಸುಜನ್‌ ಕೋಟ್ಯಾನ್‌ರು ಎಡ-ಬಲಗಳಾದರು. ಬೇಡ ಶ್ರೀನಿವಾಸನಾಗಿ ಶಶಿಧರ ಕುಲಾಲ್‌, ಸಖನಾಗಿ ಸೀತಾರಾಂ ಕುಮಾರ್‌ ಕಟೀಲ್‌ ಕಾಣಿಸಿ ಪ್ರೇಕ್ಷಕರನ್ನು ರಂಜಿಸಿದರು. ಸಂದೀಪ್‌ ಶೆಟ್ಟಿ ದೋಟ ಸಖೀಯಾದರು. ಕೆ. ಗೋವಿಂದ ಭಟ್‌ ಆಕಾಶರಾಯನಾದರೆ ಗಗನ್‌ ಅವರು ಶ್ರೀನಿವಾಸನಾದರು. ಸಪ್ತಾಹದಲ್ಲೇ ಉತ್ತಮವಾಗಿ ಮೂಡಿಬಂದ ಕಥಾನಕ ಇದು.

ಏಳನೇ ದಿನ ದಿನಪೂರ್ತಿ ಕಾರ್ಯಕ್ರಮ. ವಿವಿಧ ಮಹಿಳಾ ತಂಡಗಳು ವೀರಮಣಿ, ಶ್ರೀದೇವಿ ಕದಂಬ ಕೌಶಿಕೆ, ಶ್ರೀ ಕೃಷ್ಣ ಲೀಲಾರ್ಣವ ಮತ್ತು ಕೃಷ್ಣಾರ್ಜುನ ಪ್ರಸಂಗಗಳನ್ನು ನಡೆಸಿಕೊಟ್ಟರು. ಸಾಯಂಕಾಲ ಅವಧಿಯಲ್ಲಿ “ಶಾಂಭವಿ ವಿಲಾಸ’ ಯಕ್ಷಗಾನ ಸರಯೂ ಮಕ್ಕಳಿಂದ ನಡೆ ಯಿತು. ಭಾಗವತರಾಗಿ ಪುರುಷೋತ್ತಮ ಭಟ್‌, ಮುರಾರಿ ಹಾಗೂ ಅಕ್ಷಯ ರಾವ್‌ ಸಹಕರಿಸಿದ್ದರು.

ಈ ಬಾರಿಯ ವಿಶೇಷವೆಂದರೆ ಸರಯೂ ಸದಸ್ಯರೇ “ದೇವಿ ಮಹಾತ್ಮೆಯನ್ನು ಮೂರು ಭಾಗಗಳಲ್ಲಿ ನಡೆಸಿಕೊಟ್ಟರು. ರಮ್ಯಾ ರಾಘವೇಂದ್ರ, ಅಪೂರ್ವ, ವಿಜಯಲಕ್ಷ್ಮೀ, ಮಮತಾ, ಪದ್ಮಾ, ಸ್ವಸ್ತಿಶ್ರೀ, ಅನಿರುದ್ಧ ಭಟ್‌, ಗಗನ್‌ ಶೆಟ್ಟಿ, ಹರಿಚರಣ್‌, ಪವನ್‌, ಪ್ರಥಮ್‌, ಹಿತೇನ್‌, ಹರ್ಷಿತ್‌, ಶಶಾಂಕ್‌, ಆದಿತ್ಯ, ದಿಲೀಪ್‌, ಶ್ರೀಕಾಂತ್‌, ಧೀರಜ್‌ರವರು ಮೂರು ಭಾಗಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ರಂಜಿಸಿ ವಾರಪೂರ್ತಿ ಚಟುವಟಿಕೆಯ ಕಲಾವಿದರಾದರು.

ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಧುಸೂದನ ಅಲೆವೂರಾಯರ ಅಪೂರ್ವ ಯಕ್ಷಚಿತ್ರಗಳ ಸಂಗ್ರಹ – ಲೇಖನಗಳುಳ್ಳ ಮಧುಛಾಯಾ ಎಂಬ ವಿಶೇಷ ಕೃತಿ ಬಿಡುಗಡೆಯಾಯಿತು. ಸುಂದರ ಕೋಟ್ಯಾನ್‌ ಪೊರ್ಕೋಡಿ, ರಾಮಚಂದ್ರ ಸಾಲ್ಯಾನ್‌, ಡಾ| ಪಿ. ಸತ್ಯಮೂರ್ತಿ ಐತಾಳ್‌, ಗುರುರಾಜ್‌, ಪುಂಡಿಕಾ ಗೋಪಾಲಕೃಷ್ಣ ಭಟ್‌, ಸೀತಾರಾಂ ಕುಮಾರ್‌ ಕಟೀಲು, ಸಂದೀಪ ಶೆಟ್ಟಿ ದೋಟ, ಕು| ರಂಜಿತಾ, ಎಲ್ಲೂರು ಹಾಗೂ ಪುರುಷೋತ್ತಮ ಭಟ್‌ ನಿಡುವಜೆಯವರನ್ನು ಸಮ್ಮಾನಿಸಲಾಯಿತು. ಅನೇಕ ಗಣ್ಯಾತಿಗಣ್ಯರು ಭಾಗವಹಿಸಿ ಯಶಸ್ವಿಗೊಳಿಸಿದರು. ಯಕ್ಷ ಕಲಾವಿದ ರವಿ ಅಲೆವೂರಾಯ, ವರ್ಕಾಡಿಯವರ ಪ್ರಯತ್ನ ಸ್ತುತ್ಯರ್ಹ.  

ಕೇಶವ ಕೋಡಿಕಲ್‌

ಟಾಪ್ ನ್ಯೂಸ್

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.