ಚೆಂಡೆ ವಾದಕ ರಾಕೇಶ್ ಮಲ್ಯ
Team Udayavani, Aug 3, 2018, 6:00 AM IST
ಯಕ್ಷಗಾನ ಕಳೆಗಟ್ಟುವಲ್ಲಿ ಚೆಂಡೆಯ ಪಾತ್ರ ಮಹತ್ತರವಾದುದು. ಅದರಲ್ಲೂ ನುರಿತ ಚೆಂಡೆ ವಾದಕನಿದ್ದರೆ ಪ್ರಸಂಗದ ಸೊಗಸೇ ಬೇರೆ. ಚೆಂಡೆ ವಾದಕನಿಗೆ ರಂಗ ಸೂಕ್ಷ್ಮತೆ, ಬದ್ಧತೆ ಮತ್ತು ಚಾಕಚಕ್ಯತೆ ಆಗತ್ಯ. ಈ ಎಲ್ಲ ಗುಣಗಳಿರುವ ಚೆಂಡೆ ವಾದಕ ಪೆರ್ಡೂರು ಮೇಳದ ರಾಕೇಶ್ ಮಲ್ಯ. ರಾಕೇಶ್ ಮಲ್ಯರಿಗೆ ತಂದೆ ದಿ| ಸುಬ್ರಾಯ ಮಲ್ಯರೇ ಮೊದಲ ಗುರು. ಎಸ್‌ಎಸ್‌ಎಲ್‌ಸಿ ಬಳಿಕ ಯಕ್ಷರಂಗಕ್ಕೆ ಬಂದ ರಾಕೇಶ್ ಮಲ್ಯರು ಆರಂಭದಲ್ಲಿ ಹವ್ಯಾಸಿಯಾಗಿ ವೇಷಗಳನ್ನೂ ಮಾಡುತ್ತಿದ್ದರು. ಆದರೆ ಅವರ ಒಲವಿದ್ದದ್ದು ಚೆಂಡೆಯತ್ತ. ಶಂಕರ ಭಾಗವತರಿಂದ ಚೆಂಡೆ ವಾದನದ ಸೂಕ್ಷ್ಮಗಳನ್ನು ಕಲಿತು ವೃತ್ತಿಪರ ಚೆಂಡೆ ವಾದಕರಾಗಿ ರೂಪುಗೊಂಡರು.
ಶಿರಸಿ, ಮಂದಾರ್ತಿ, ಸೌಕೂರು, ನೀಲಾವರ ಮೇಳಗಳಲ್ಲಿ ದುಡಿದಿರುವ ಮಲ್ಯರು ಪ್ರಸ್ತುತ ಪೆರ್ಡೂರು ಮೇಳದಲ್ಲಿದ್ದಾರೆ. ನೆಬ್ಬೂರು, ಕೆ. ಪಿ. ಹೆಗಡೆ, ಧಾರೇಶ್ವರ, ರಾಘವೇಂದ್ರ ಮಯ್ಯ, ಗೋಪಾಲ ಗಾಣಿಗ ಮುಂತಾದ ದಿಗ್ಗಜರಿಗೆ ಚೆಂಡೆಯಲ್ಲಿ ಸಾಥ್ ನೀಡಿದ ಹಿರಿಮೆ ಅವರದ್ದು. ಮೂರು ದಶಕವನ್ನು ಯಕ್ಷಗಾನ ರಂಗದಲ್ಲಿ ಕಳೆದಿರುವ ರಾಕೇಶ್ ಮಲ್ಯ ಬಡಗುತಿಟ್ಟಿನಲ್ಲಿ ಅಗ್ರಗಣ್ಯ ಚೆಂಡೆವಾದಕರಾಗಿ ಗುರುತಿಸಿಕೊಂಡಿದ್ದಾರೆ.
ಸಂದೀಪ್ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.