ಮಕ್ಕಳ ನಾಟಕ ಗ್ರಹಣ ಕಂಟಕ

Team Udayavani, Feb 21, 2020, 5:05 AM IST

kala-5

ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರಸಿದ್ಧ ರಂಗಕರ್ಮಿ ಐ.ಕೆ. ಬೊಳೂವಾರು ರಚಿಸಿದ ಗ್ರಹಣ ಕಂಟಕ ಎನ್ನುವ ನಾಟಕವನ್ನು ಮಕ್ಕಳು ಪ್ರಸ್ತುತಪಡಿಸಿದರು.

ಡಿ.2ರಂದು ಸಂಭವಿಸಿದ ಕಂಕಣ ಸೂರ್ಯಗ್ರಹಣದ ಆಗುಹೋಗುಗಳ ಬಗ್ಗೆ ಜನರ ನಂಬಿಕೆ, ಅಪನಂಬಿಕೆ, ಪ್ರಶ್ನಿಸುವ ಮನೋಭಾವ, ಅರಿವಿನ ವಿಸ್ತಾರದ ಕುರಿತು ಮಕ್ಕಳು ಇಲ್ಲಿ ನಮ್ಮೊಡನೆ ಮಾತನಾಡುತ್ತಾರೆ. ಗ್ರಹಣ ಸಂಭವಿಸಲು ಇರುವ ಪೌರಾಣಿಕ ಕಾರಣ ಮತ್ತು ವೈಜ್ಞಾನಿಕ ಕಾರಣಗಳನ್ನು ಮುಖಾಮುಖೀಯಾಗಿಸುತ್ತಾರೆ.

ಇವೆಲ್ಲ ಸಂಗತಿಗಳನ್ನು ಜನಪದ ಕಥಾ ಹಿನ್ನಲೆಯಲ್ಲಿ ಅದೇ ಹಂತದಲ್ಲಿ ಹೇಳುತ್ತಾ ಹೋಗುತ್ತಾರೆ. ರಾಜ (ಲವೀಶ್‌) ತನ್ನ ಅರಮನೆಯಲ್ಲಿ ತುರ್ತು ಸಭೆ ಕರೆದು ಮುಂಬರುವ ಗ್ರಹಣ ಕಂಟಕದ ಬಗ್ಗೆ ಜನಾಭಿಪ್ರಾಯ, ವೈಜ್ಞಾನಿಕ ಅಭಿಪ್ರಾಯದ ಕುರಿತು ಚರ್ಚೆ ಮಾಡುವಾಗ, ಒಬ್ಬ ಗುರು ಗ್ರಹಣದ ವಿಚಾರವಾಗಿ ಜನಾಭಿಪ್ರಾಯ ವಿರುದ್ಧ ಮಾತನಾಡುವುದನ್ನು ಕೇಳಿ ಅವನನ್ನು ಬಂಧಿಸಬೇಕೆಂದು ಮಂತ್ರಿ ಹೇಳುತ್ತಾನೆ.

ಇತ್ತ ಗುರು ತನ್ನ ಶಿಷ್ಯರೊಂದಿಗೆ ಪಾಠ ಪ್ರವಚನಗಳನ್ನು ಮಾಡುತ್ತಾ ಗ್ರಹಗಳು ತಮ್ಮ ಕಕ್ಷೆಯಲ್ಲಿ ತಿರುಗುವಾಗ ಆಗುವ ಪ್ರಕ್ರಿಯೆ ಸೂರ್ಯಗ್ರಹಣ, ಚಂದ್ರಗ್ರಹಣ ಎಂದು ಹೇಳುತ್ತಾನೆ. ಅರಸ ಮತ್ತು ಗುರುವಿನ ನಡುವೆ ವೈಜ್ಞಾನಿಕ ಸಂಘರ್ಷ ಉಂಟಾಗುತ್ತದೆ. ಅರಸನ ನಂಬಿಕೆಯ ವಿಷಯವನ್ನು ಎತ್ತಿ ಹಿಡಿದು ಹೆಚ್ಚಿನ ಜನಸಾಮಾನ್ಯರು ಇಂಥ ಸಂಪ್ರದಾಯಗಳಿಗೆ ಕಟ್ಟುಬೀಳುವುದರಿಂದ ಅರಸ ಜನರಿಗೆ ಬೆಂಬಲ ನೀಡಿ ಗುರುವನ್ನು ವಿಚಾರಣೆಗೆ ಒಳಪಡಿಸುತ್ತಾನೆ.

ಗುರುಗಳ ಶಿಷ್ಯರು ಅರಮನೆಗೆ ಬಂದು ಪ್ರತಿಭಟಿಸುತ್ತಾರೆ. ರಂಗದಲ್ಲಿ ಸೂರ್ಯ, ಭೂಮಿ, ಚಂದ್ರ ತಮ್ಮ ಕಕ್ಷೆಯಲ್ಲಿ ಸುತ್ತುವುದನ್ನು ತೋರ್ಪಡಿಸುವುದನ್ನು ನೋಡುವುದೇ ಚಂದ. ಕೊನೆಗೆ ರಾಜ, ಮಂತ್ರಿಗಳು ಜನಾಭಿಪ್ರಾಯಕ್ಕೆ ಸೋತು ಮಂತ್ರಿಯನ್ನು ಹಿಡಿದು ಜೈಲಿನಲ್ಲಿಟ್ಟು ಅವನ ನಾಲಿಗೆಯನ್ನು ಕತ್ತರಿಸಿ ಮಾತನಾಡದ ಹಾಗೆ ಮಾಡುತ್ತಾರೆ.

ಇಲ್ಲಿ ನಮಗೆ ಕಾಡುವುದು ಕೆಲವು ಶತಮಾನದ ಹಿಂದೆ ಗೆಲಿಲಿಯೊಗೆ ಇದೇ ರೀತಿ ಅಳುವವರು ವಿಷಪ್ರಾಸನ ಮಾಡಿದ ನೆನಪು ಮತ್ತು ಇತ್ತೀಚೆಗೆ ಗ್ರಹಣವಾದಾಗ ಈ 21ನೇ ಶತಮಾನದಲ್ಲಿಯೂ ಜನ ಕುಲಬುರ್ಗಿಯಲ್ಲಿ ಮಕ್ಕಳನ್ನು ಕೆಸರಿನಲ್ಲಿ ಹೂತ ಪ್ರಕರಣ. ಹೀಗೆ ಈ ನಾಟಕ ಸಂಘರ್ಷದೊಂದಿಗೆ ಒಟ್ಟು ಪಾಠದಂತಿದೆ.

ರಾಜನಾಗಿ ಲವೀಶ್‌, ಕಾಂತಣ್ಣ – ಸಮರ್ಥ್, ಮಂತ್ರಿ – ವಿಜಯ, ಸೈನಿಕನಾಗಿ ಸಿದ್ದು, ಕುಶಕುಮಾರ್‌, ದುಗೇìಶ್‌, ಸೇವಕರಾಗಿ ಗಣೇಶ್‌, ಪ್ರಿತೇಶ್‌, ಯಶಸ್ವಿ, ಮಕ್ಕಳಾಗಿ ಮಂಜುನಾಥ, ಜಾವೇದ್‌, ಲಿಖೀತ್‌, ಪವಿತ್ರ ಅಫಿಯಾ, ಸಾನಿಯಾ, ಮಳೆ – ಶೃತಿ, ದೀಕ್ಷಾ, ಲವಿಣ, ಅನ್ವಿತಾ ಪೂಜಾರಿ, ಸೂರ್ಯ – ದೀಕ್ಷಾ, ಚಂದ್ರ -ಸಾನ್ವಿ, ಭೂಮಿ-ರಶ್ಮಿ, ರಾಹು – ಲವಿಕಾ, ಕೇತು – ಅನ್ವಿತಾ ಪೂಜಾರಿ, ಅಭಿ ನ ಯಿ ಸಿ ದರು. ಇಂಪಾದ ಹಾಡು, ನೃತ್ಯ ಪೂರಕವಾಗಿ ಮೂಡಿಬಂದಿದೆ. ವಿನ್ಯಾಸ ಮತ್ತು ನಿರ್ದೇಶನ ಉದ್ಯಾವರ ನಾಗೇಶ್‌ಕುಮಾರ್‌.

ಜಯರಾಂ ನೀಲಾವರ

ಟಾಪ್ ನ್ಯೂಸ್

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.