ಎಳೆಯರ ಮನಸ್ಸಿನ ಪ್ರತಿಬಿಂಬ ಕೊಲಾಜ್‌ ನಾಟಕ

Team Udayavani, Feb 18, 2017, 7:25 AM IST

17-KALA-2.jpg

ಶಿಕ್ಷಣ ಎಂಬುದು ಇಂದು ಮಾರುಕಟ್ಟೆಯ ಸರಕಾಗಿದೆ. ಅದರಲ್ಲಿ ಎಳೆಯರ ಬಾಲ್ಯ ಸಹಜ ಚಟುವಟಿಕೆಗಳು ಕಳೆದು ಹೋಗುತ್ತಿವೆ. ಶಾಲೆಗಳಲ್ಲಿ ರಂಗ ಚಟುವಟಿಕೆಗಳ ಮೂಲಕ ಅವರ ಮೂಲಭೂತ ಪ್ರವೃತ್ತಿಯನ್ನು ಸಾಂಸ್ಕೃತಿಕವಾಗಿ ಪರಿವರ್ತಿಸಿದಾಗ ಅವರು ಸಹಜವಾಗಿ ಅರಳಬಲ್ಲರು. ಅದಕ್ಕಾಗಿ “”ಶಿಕ್ಷಣ ಮತ್ತು ರಂಗಭೂಮಿ” ಎನ್ನುವ ಶೀರ್ಷಿಕೆಯೊಂದಿಗೆ ಬ್ರಹ್ಮಾವರ ಎಸ್‌.ಎಂ.ಎಸ್‌. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಒಂದು ವಾರದ ರಂಗ ಚಟುವಟಿಕೆಯ ಶಿಬಿರವನ್ನು ಖ್ಯಾತ ರಂಗ ನಿರ್ದೇಶಕ ಡಾ| ಶ್ರೀಪಾದ ಭಟ್‌ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು. ಶಿಬಿರದ ಕೊನೆಯ ದಿನ ಕೊಲಾಜ್‌ ಕಲಾಕೃತಿ (ವಿವಿಧ ಬಣ್ಣದ ಕಾಗದದ ಚೂರುಗಳನ್ನು ಜೋಡಿಸಿ ಮಾಡುವ ಕಲಾಕೃತಿ) ಯಂತೆ ನಾಲ್ಕು ಬೇರೆ ಬೇರೆ ಭಾಷೆಗಳ ಚಿಕ್ಕ ಚಿಕ್ಕ ಕಥೆ ಮತ್ತು ಕವನಗಳನ್ನು ಜೋಡಿಸಿ ಒಂದು ಗಂಟೆಯ ಅವಧಿಯ ಕೊಲಾಜ್‌ ನಾಟಕವನ್ನು ಪ್ರದರ್ಶಿಸಿದರು. 

ಎಳೆಯರ ಮನಸ್ಸೆಂಬುದು ಬಹಳ ನಿಷ್ಕಲ್ಮಶ ಮತ್ತು ನಿಷ್ಕಪಟ. ಅವರಲ್ಲಿರುವ ದಯಾಪರತೆ, ಸ್ನೇಹಶೀಲತೆ, ಪರೋಪಕಾರ ಗುಣಗಳನ್ನು ಗುರುತಿಸದೇ ಅವರ ಸುತ್ತ ಶಿಸ್ತು ಎನ್ನುವ ಬೇಲಿಯನ್ನು ನಿರ್ಮಿಸುವುದು, ಎಳೆಯ ಮನಗಳ ನಡುವೆ ಶ್ರೇಷ್ಠತೆ ಮತ್ತು ಕನಿಷ್ಠತೆ ಎನ್ನುವ ವಿಷ ಬೀಜ ಬಿತ್ತುವುದು, ತರಗತಿ ಕೊಠಡಿಯೊಳಗೆ ಎಳೆಯ ಮನಸ್ಸುಗಳ ನಡುವೆ ಅನಾರೋಗ್ಯಕರ ಸ್ಪರ್ಧೆಯಿಂದ ಉಂಟಾಗುವ ಅನಾಹುತ, ಭಾಷೆ-ಜನಾಂಗಗಳ  ನಡುವೆ ಅಡ್ಡ ಗೋಡೆ ನಿರ್ಮಿಸುವುದು ಇವೆಲ್ಲವೂ ನಮ್ಮನ್ನು ಮತ್ತೂಮ್ಮೆ ಎಚ್ಚರಿಸುವಂತಿದೆ. ಕೇವಲ ಏಳು ದಿನಗಳಲ್ಲಿ ಶ್ರೀಪಾದ ಭಟ್ಟರ ಮಾಂತ್ರಿಕ ನಿರ್ದೇಶನದಲ್ಲಿ ಪಳಗಿದ ಇಪ್ಪತ್ತೈದಕ್ಕೂ ಅಧಿಕ ಎಳೆಯರು ರಂಗದ ಮೇಲೆ ಬಹಳ ಲವಲವಿಕೆಯೊಂದಿಗೆ ಪಾತ್ರಗಳನ್ನು ನಿರ್ವಹಿಸುತ್ತಾ ಜತೆಗೆ ಸಂಗೀತವನ್ನು ಭಾವಾಭಿವ್ಯಕ್ತಿಯೊಂದಿಗೆ ಹಾಡುತ್ತಾ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು. ವಿಶೇಷವೆಂದರೆ ಯಾವುದೇ ಪ್ರಸಾಧನಗಳಿಲ್ಲದೇ ಸಹಜ ಶಾಲಾ ಸಮವಸ್ತ್ರದಲ್ಲೆ ನಟಿಸಿ, ಕಥೆಯಿಂದ ಕಥೆಗೆ ಬೇಕಾಗುವ ಹಿನ್ನೆಲೆಯ ರಂಗ ಪರಿಕರಗಳನ್ನು ತಾವೇ ಕ್ಷಣದೊಳಗೆ ಬದಲಾಯಿಸುತ್ತಾ ಮುಂದೆ ಸಾಗುತ್ತಿದ್ದುದು ಪ್ರಶಂಸಾರ್ಹವಾಗಿತ್ತು. 

ಇಂತಹ ಹೊಸತನದ ನಾಟಕಕ್ಕೆ ಎಳೆಯರನ್ನು ಅಣಿಗೊಳಿಸಿದ ಡಾ| ಶ್ರೀಪಾದ ಭಟ್‌ ಮತ್ತು ಅವರ ತಂಡ, ರಂಗ ಪರಿಕರ ತಜ್ಞ ರಾಜು ಮಣಿಪಾಲ ಹಾಗೂ ತನ್ನ ಶಾಲಾ ಎಳೆಯರೊಂದಿಗೆ ಇತರ ಎಳೆಯರಲ್ಲಿಯೂ ರಂಗ ಚಟುವಟಿಕೆಗಳ ಬಗ್ಗೆ ಆಸಕ್ತಿ ಹುಟ್ಟಿಸಿ, ಅಂತಹ ಶಿಬಿರಗಳನ್ನು ಏರ್ಪಡಿಸುತ್ತಾ ಅವರಲ್ಲಿ ರಂಗಾಸಕ್ತಿಯನ್ನು ಮೂಡಿಸುತ್ತಿರುವ ಸಾಹಿತಿ, ರಂಗ ನಿರ್ದೇಶಕಿ ಹಾಗೂ ಶಾಲಾ ಪ್ರಂಶುಪಾಲೆ ಅಭಿಲಾಷಾ ಮತ್ತು ಶಾಲಾ ಆಡಳಿತ ಮಂಡಳಿಯನ್ನು ಅಭಿನಂದಿಸಲೇಬೇಕು.

ಕೆ. ದಿನಮಣಿ ಶಾಸ್ತ್ರೀ

ಟಾಪ್ ನ್ಯೂಸ್

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.