ನೃತ್ಯ ಚಿಲುಮೆಯ ಮನೋಲ್ಲಾಸ


Team Udayavani, Jan 24, 2020, 6:50 PM IST

jan-2

ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹೆಜ್ಜೆ ಗೆಜ್ಜೆ ನೃತ್ಯ ಸಂಸ್ಥೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭದ ಭಾಗ-1 ರಲ್ಲಿ “ನೃತ್ಯ ಚಿಲುಮೆ’ ಎಂಬ ಶೀರ್ಷಿಕೆಯಡಿಯಲ್ಲಿ ಲಘು ಶಾಸ್ತ್ರೀಯ, ಜಾನಪದ ನೃತ್ಯಗಳು ಹಾಗು ವಿವಿಧ ಪ್ರಕಾರದ ಕೊರವಂಜಿ ನೃತ್ಯಗಳು, ಸಂಸ್ಥೆಯ ನಿರ್ದೇಶಕಿ ವಿ| ಯಶಾ ರಾಮಕೃಷ್ಣರವರ ನಿರ್ದೇಶನದಲ್ಲಿ ರಾಜಾಂಗಣದಲ್ಲಿ ಜರ ಗಿ ತು. ಮೊದಲಿಗೆ ಹಿಂದೋಳ ರಾಗದ ಆದಿತಾಳದಲ್ಲಿ ನಿಬದ್ಧವಾದ ಮೀರಾಬಾಯಿಯಿಂದ ರಚಿತವಾದ ಪಗಘುಂಘುರು ಬಾಂದ್‌ ಮೀರ ನಾಚೀರೆ ಎಂಬ ಲಘು ಶಾಸ್ತ್ರೀಯ ನೃತ್ಯದಲ್ಲಿ ತನ್ನ ಹೃದಯದಲ್ಲಿರುವ ಶ್ರೀ ಕೃಷ್ಣನು ಪ್ರತ್ಯಕ್ಷವಾದಂತೆ ಅವನೊಂದಿಗೆ ನರ್ತಿಸಿದ ಅನುಭವವು ಮೀರಾಬಾಯಿಗೆ ಆಗಿದ್ದು, ನಂತರ ಅವಳಿಗೆ ಅರಿವಾಗುತ್ತದೆ.ತನ್ನ ಮನಸಿನ ಭ್ರಮೆ ಎಂದು ಮೀರಾಳ ಅತ್ತೆಯ ಕುಲನಾಶಿನಿಯೆಂದು ಹಗೆದರೂ, ಮಾವ ರಾಣಾ ರಾಜನು ವಿಷವನ್ನು ಕೊಟ್ಟರೂ ಶ್ರೀ ಕೃಷ್ಣನಲ್ಲಿ ತೋರುವ ಅತೀವ ಭಕ್ತಿ ಪ್ರೇಮವನ್ನು ಹೊಂದಿದ ಮೀರಾಳು ಗಿರಿಧರನ ದಾಸ ಎಂದು ಭಕ್ತಿಯಿಂದ ನರ್ತಿಸುವುದನ್ನು ಹೆಜ್ಜೆ-ಗೆಜ್ಜೆ ವಿದ್ಯಾರ್ಥಿನಿಯರು ಮನೋಜ್ಞವಾಗಿ ನರ್ತಿಸಿದರು. ಫಾಗು ನೋರೆ ಎಂಬ ಅಸ್ಸಾಮ್‌ ಜಾನಪದ ನೃತ್ಯ ಬೇಡರ ನೃತ್ಯವನ್ನು ಅಚ್ಚುಕಟ್ಟಾಗಿ ಪ್ರದ ರ್ಶಿಸಿದರು.

ವಸಂತ ಮಾಸದ ಚಿತ್ರಣವನ್ನು ನೃತ್ಯಾಭಿನಯದಲ್ಲಿ ಪ್ರಕಟಿಸಿದ ಹೆಜ್ಜೆ ಗೆಜ್ಜೆಯ ವಿದ್ಯಾರ್ಥಿನಿಯರು,ವಸಂತ ಬಂದ ಋತುಗಳ ರಾಜ ಎಂದು ಬಿ.ಎಂ ಶ್ರೀಕಂಠಯ್ಯವರ ಇಂಗ್ಲೀಷ್‌ ಗೀತೆಗಳು ಎಂಬ ಕವನ ಸಂಕಲದಿಂದ ಆಯ್ದ ಈ ಹಾಡನ್ನು ಚುರುಕಾಗಿ ನರ್ತಿಸಿದರು. ಹಿರಿಯ ಕಲಾವಿದರು ಹಾಡು ಕೋಗಿಲೆ ಗಾನ ಸುಮಧುರ ಎಂಬ ಕೂರಾಡಿ ಸೀತಾರಾಮ ಅಡಿಗ ಕವಿಯವರು ರಚಿಸಿದ ಭಾವಗೀತೆಯನ್ನು ಹಸಿರೇ ಉಸಿರು ಎಂಬ ಮಂತ್ರದಿಂದ ಪ್ರಕೃತಿ ಮಾತೆಯನ್ನು ಪೂಜಿಸೋಣ ಎಂಬ ಆಶಯದಿಂದ ಭಾವ-ನೃತ್ಯದ ಮೂಲಕ ಹೊರಹೊಮ್ಮಿಸಿದರು.

ನಾಲ್ಕು ಕೊರವಂಜಿ ನೃತ್ಯ ಗುತ್ಛಗಳು ಪ್ರಧಾನ ಆಕರ್ಷಣೆ ಯಾಗಿದ್ದವು. ಬೀದಿ ಬೀದಿಯ ಮೇಲೆ ಹೊರಟಾಳ್ಳೋ ಕೊರವಿ ಎಂಬ ನೃತ್ಯದಲ್ಲಿ ಕೊರವಂಜಿಯಾಗಿ 6 ವಿದ್ಯಾರ್ಥಿನಿಯರು ಹಾಗೂ ಕಣಿಯನ್ನು ಹೇಳಿಸಿಕೊಳ್ಳುವವಳು 6 ವಿದ್ಯಾರ್ಥಿನಿಯರು ಇದ್ದು, ಕೊರವಿ-ಹೆಂಗಳೆಯರ ಸಂಭಾಷಣೆಯಂತೆ ವಿವಿಧ ರಂಗ ಸಂಯೋಜನೆಗಳಿಂದ ಅದಕ್ಕೊಪ್ಪುವ ವೇಷ ಭೂಷಣಗಳಿಂದ ಪ್ರಸ್ತುತಗೊಂಡಿತ್ತು. 17 ಪುಟಾಣಿ ಕೊರವಂಜಿಯ ಕಲಾವಿದೆಯರು, ದೂರದ ಊರಿಂದ ಕಣಿ ಹೇಳುವುದಕ್ಕೆ ಬಂದು ಮಕ್ಕಳೆಷ್ಟಿವೆ, ಹಿಂದೇನೇನು ಮಾಡಿದ್ದೀರ ಮುಂದೇನು ಮಾಡ್ತೀರ ಎಂದು ಮುದ್ದಾಗಿ ಅಭಿನಯಿಸಿದ ನೃತ್ಯವು ಮನಸೆಳೆಯುವಂತ್ತಿತು. ತಮಿಳುನಾಡಿನ ತಿರು ಕುಟ್ರಾಲ ಕೊರಂಜಿಯು ಆನಂದ ಭೈರವಿ ರಾಗದಲ್ಲಿದ್ದು, ಇದರಲ್ಲಿ ಕುರತಿ ಎಂಬ ಜನಾಂಗದ ಹೆಣ್ಣು ಭವಿಷ್ಯವಾಣಿ ನುಡಿಯುತ್ತಾ ಶಿವ ದೇವರನ್ನು ಬಣ್ಣಿಸುತ್ತಾ ಶಿವನ ರೂಪ, ಗುಣ, ಮಹಿಮೆಗಳನ್ನು ಹೊಗಳಿ ಹಾಡುವುದನ್ನು ವಿದ್ಯಾರ್ಥಿನಿಯರು ಉತ್ತಮವಾಗಿ ಪ್ರದರ್ಶಿಸಿದರು. ಡಿ.ವಿ.ಜಿ. ರಚಿಸಿದ ಅರವತ್ತು ಮಧುರಗೀತೆಗಳ ಸುಂದರ ಗುಚ್ಚ ಅಂತಃಪುರಗೀತೆಗಳನ್ನು ಮದನಿಕೆಯರನ್ನು ಕುರಿತಾದ ಹೃದಯಂಗಮ ಹಾಡುಗಳಲ್ಲಿ ಒಂದಾದ ಕೊರವಂಜೆ ಶೀರ್ಷಿಕೆಯ ನಟನವಾಡಿದಳು ನೃತ್ಯದಲ್ಲಿ ಭಾವಾಭಿನಯ ತಾಂಡವ ನೃತ್ಯ, ರಾಸ ರಭಸ ನೃತ್ಯ ನಾಟ್ಯ ಶಾಸ್ತ್ರದಲ್ಲಿ ಹೇಳಿರುವ ಕೆಲವು ಚಾರಿ ಹಾಗೂ ಕರಣಗಳನ್ನು ಬಳಸಿದ್ದು ಬಹಳ ಸೂಕ್ತವಾಗಿತ್ತು. ಅಲ್ಲದೇ ಬೇಲೂರಿನ ಮದನಿಕಾ ವಿಗ್ರಹಗಳಂತೆಯೇ ವೇಷಭೂಷಣಗಳನ್ನು ತೊಟ್ಟಿದ್ದುದರಿಂದ ಮದನಿಕಾ ವಿಗ್ರಹಗಳೇ ನರ್ತನ ಮಾಡಿದಂತೆ ಭಾಸವಾಗಿತ್ತು. ಗುಜರಾತ್‌ನ ಬೆಸ್ತರ ನೃತ್ಯದಲ್ಲಿ ಬೆಸ್ತರ ದಿನಚರಿಯನ್ನು ಪ್ರಸ್ತುತಗೊಳಿಸುವುದುದೇ ಅಲ್ಲದೇ ಹೋಲಿ ಹಬ್ಬದ ಆಚರಣೆಯನ್ನು ಕೂಡಾ ಅರ್ಥಪೂರ್ಣವಾಗಿ ಪ್ರದರ್ಶಿಸಿದರು. ಕರ್ನಾಟಕದ ಕೋಲಾಟದಲ್ಲಿ ಸಾಮಾನ್ಯವಾದ ಕೋಲಾಟ ವಿನ್ಯಾಸ ಬಳಸದೇ ಆನೆಯ ಕಿವಿ ನವಿಲು ಕುದುರೆ ಗರುಡ ಹೀಗೆ ಕೆಲವು ವಿಶೇಷ ಕೋಲಾಟ ಹೆಜ್ಜೆಗಳನ್ನು ಚಲನವಲನಗಳನ್ನು ಹಾಡಿಗೆ ತಕ್ಕ ಹಾಗೆ ನರ್ತಿಸುತ್ತಿದ್ದು ವಿಶೇಷವಾಗಿ ಕಂಡು ಬಂತು. ಹಿರಿಯ ವಿದ್ಯಾರ್ಥಿನಿಯರಿಂದ ಝೂಲತ್‌ ರಾಧಾ ಎಂಬ ಲಘು ಶಾಸ್ತ್ರೀಯ ನೃತ್ಯದೊಂದಿಗೆ ಮುಕ್ತಾಯಗೊಂಡಿತು.

ರಾಘವೇಂದ್ರ ಆಚಾರ್ಯ-ವಿ| ದೀಕ್ಷಾ ರಾಮಕೃಷ್ಣರ ಹಾಡು ಗಾರಿಕೆ ಸಾಂಗತ್ಯದಿಂದ ಕೂಡಿತ್ತು. ಕೊಳಲಿನಲ್ಲಿ ನಿತೇಶ್‌ ಅಮ್ಮಣ್ಣಾಯ ಹಾಗೂ ಕೀ ಬೋರ್ಡಿನಲ್ಲಿ ಮುರಳೀಧರ್‌ , ತಬಲಾದಲ್ಲಿ ವಿ| ಮಾಧವ ಆಚಾರ್ಯ ಹಾಗೂ ಮೃದಂಗದಲ್ಲಿ ವಿ| ಬಾಲಚಂದ್ರ ಭಾಗವತರು ಸಹಕಾರ ನೀಡಿದರು.

ವಾಣಿ ವೆಂಕಟೇಶ್‌

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.