ರಸಾನುಭೂತಿ ನೀಡಿದ ನೃತ್ಯ ದೀಪಂ


Team Udayavani, Jan 19, 2018, 2:48 PM IST

19-60.jpg

ಭರತಾಂಜಲಿ (ರಿ.) ಕೊಟ್ಟಾರ ಪ್ರಸ್ತುತಪಡಿಸಿದ ಕಲಾ ಸಂಸ್ಥೆಗಳ 12 ವರ್ಷದೊಳಗಿನ ಮಕ್ಕಳ ನೃತ್ಯ ಸಂಭ್ರಮ “ನೃತ್ಯ ದೀಪಂ’ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಿತು. ನಾಟ್ಯ ಗುರು ಉಳ್ಳಾಲ್‌ ಮೋಹನ್‌ ಕುಮಾರ್‌ ಮತ್ತು ವಿದುಷಿ ಕಮಲಾ ಭಟ್‌ ಉಪಸ್ಥಿತಿಯಲ್ಲಿ ನಡೆದ ನೃತ್ಯ ಕಾರ್ಯಕ್ರಮ  ರಸಾನುಭೂತಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ.

 ತಿಮಾ ಶ್ರೀಧರ್‌ ಶಿಷ್ಯೆಯಾದ ಅನ್ವಿತಾ ರಾವ್‌ ಅವರ ಗಣೇಶ ಸ್ತುತಿಯೊಂದಿಗೆ ಆರಂಭವಾದ ನೃತ್ಯ ನಾಟ ರಾಗದ ಚುಟುಕು ಸಾಹಿತ್ಯದ ಸಂಯೋಜನೆಯಲ್ಲಿ ಸುಂದರವಾಗಿ ಮೂಡಿಬಂತು. ತನ್ವಿ ಜಿ. ಅವರು ಪ್ರದರ್ಶಿಸಿದ ಶುದ್ಧ ಧನ್ಯಾಸಿ ರಾಗದ ಪ್ರಣವಕಾರಂ ಅರ್ಥಗರ್ಭಿತ ಸಾಹಿತ್ಯವನ್ನು ಒಳಗೊಂಡಿದ್ದು, ಹಸ್ತಮುದ್ರಿಕೆ ಅಂಗಶುದ್ಧ ನೃತ್ಯ ಭಂಗಿ ಮೆಚ್ಚುಗೆ ಪಡೆಯಿತು.ಸುಮನಸ ರಂಜನಿ ರಾಗದ ಶಿವ ಸ್ತುತಿ ಮೇಘಾರಾವ್‌ ಅವರ ವಯಸ್ಸಿಗೂ ಮೀರಿದ ನೃತ್ಯ ಪ್ರಾವೀಣ್ಯತೆಯನ್ನು ಹೊರ ತಂದಿತು. 

 ಸ್ಪಂದನಾ ಐತಾಳ್‌ ಕದ್ರಿ ಪ್ರದರ್ಶಿಸಿದ ತ್ರಿಮಾತಾ ಕೌತವಂನಲ್ಲಿ ಜತಿ ಕೊಂಚ ಎಡವಿದರೂ ಪುಟ್ಟ ಕಲಾವಿದೆ ಬುದ್ಧಿವಂತಿಕೆಯಿಂದ ಹೆಜ್ಜೆಯನ್ನು ತಾಳಕ್ಕೆ ತಂದು ಸೇರಿಸುವಲ್ಲಿ ಯಶ ಕಂಡಿದ್ದು ಶ್ಲಾಘನೀಯ.  ಕಮಲಾ ಭಟ್‌ ಶಿಷ್ಯರಾದ ಸ್ಮತಿ ಹಾಗೂ ಸಿದ್ಧಿ ಹರೀಶ್‌ ಪ್ರಸ್ತುತಪಡಿಸಿದ ಆನಂದ ನರ್ತನ ಗಣಪತಿ ಹಾಗೂ ಚತುರಶ್ರೀ ಜಾತಿ ಅಲರಿಪು ಪುಟಾಣಿಗಳ ತಾಳ ಜ್ಞಾನವನ್ನು ಪ್ರದರ್ಶಿಸಿತು.

 ದೀಪಕ್‌ ಪುತ್ತೂರು ಅವರ ಶಿಷ್ಯೆ ಅಕ್ಷಯಾ ಪಾರ್ವತಿ ಸರೋಳಿ ಪ್ರದರ್ಶಿಸಿದ ಪ್ರಣವಕಾರ ಆನಂದ ನಟಪಾದಂ ಹಾಗೂ ದಾಸ ಸಾಹಿತ್ಯದ ಆಡಲು ಹೋಗೋಣ ಬಾರೋ ರಂಗದಲ್ಲಿ ಮೂಡಿಬಂತು. ಸುಧೀರ್‌ ಕೊಡವೂರು ಮತ್ತು ಮಾನಸಿ ಸುಧೀರ್‌ ಅವರ ಪುತ್ರಿ ಹಾಗು ಶಿಷ್ಯೆ ಪ್ರದರ್ಶಿಸಿದ ರಾಗಮಾಲಿಕೆ ಆದಿತಾಳ “ಕಾಣದ ಸೀತೆಯ’ ರಚನೆಯ ಡಿ. ವಿ ಪ್ರಸನ್ನ ಕುಮಾರ್‌ ಅವರ ಪದವರ್ಣ ಶ್ರೀ ರಾಮನ ಕಥಾಭಾಗ ಹಾಗೂ ಮನೋಜ್ಞ ನೃತ್ಯ ಭಂಗಿಗಳು ತಾಳ ಜ್ಞಾನದ ಹೆಜ್ಜೆಗಾರಿಕೆ ರಾಮಾಯಣವನ್ನೇ ಶಿಲೆಯಂತೆ ಕೆತ್ತಿದಂತಿತ್ತು. 

ಅಂತ್ಯದಲ್ಲಿ ಪ್ರವಿತಾ ಅಶೋಕ್‌ ಪುತ್ರಿಯರಾದ ಪೂರ್ವಿಕಾ ಹಾಗೂ ಗಾರ್ಗೀ ದೇವಿ ಪ್ರದರ್ಶಿಸಿದ ಬಿಭಾಶ್‌ ರಾಗದ ಕಾಳಿದಾಸ ಕೃತಿ ಹಾಗೂ ದಾಸ ಸಾಹಿತ್ಯ ಗುಮ್ಮನ ಕರೆಯದಿರೋ ರಾಗಮಾಲಿಕೆಯ ನೃತ್ಯಾಭಿನಯ ಪುಟಾಣಿಗಳ ನೃತ್ಯಾಸಕ್ತಿ, ನೃತ್ಯಾಭ್ಯಾಸವನ್ನು ಒರೆಗಲ್ಲಿಗೆ ಹಚ್ಚಿದಂತಿತ್ತು. ಪ್ರತಿಮಾ ಶ್ರೀಧರ್‌, ಶ್ರೀಧರ ಹೊಳ್ಳ ಇವರುಗಳು ತಮ್ಮ ಭರತಾಂಜಲಿ ಸಂಸ್ಥೆಯ ಮೂಲಕ “ನೃತ್ಯ ದೀಪಂ’ ಕಾರ್ಯಕ್ರಮವನ್ನು ಆಯೋಜಿಸಿ ಪುಟ್ಟ ಕಲಾವಿದರಿಗೆ ಏಕವ್ಯಕ್ತಿ ಪ್ರದರ್ಶವನ್ನು ನೀಡಲು ಅವಕಾಶ ಕಲ್ಪಿಸಿಕೊಟ್ಟು ಸಾರ್ಥಕತೆಯನ್ನು ಕಂಡುಕೊಂಡರು.

ಪ್ರಮೋದ್‌ ಉಳ್ಳಾಲ್‌

ಟಾಪ್ ನ್ಯೂಸ್

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌

7-munirathna

Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bengaluru; Cab driver fell asleep: Passenger drove the vehicle!

Bengaluru; ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video

ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

11

Kasaragodu: ಹೊಳೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

9-

Delhi ಗಣರಾಜ್ಯೋತ್ಸವ; ಹೆಬ್ರಿಯ ಮಹಿಳೆಗೆ ವಿಶೇಷ ಅವಕಾಶ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.