ಧಾರೇಶ್ವರರಿಗೆ ಅರೆಶಿರೂರು ಸಂಸ್ಮರಣಾ ಪ್ರಶಸ್ತಿ
Team Udayavani, Dec 7, 2018, 6:00 AM IST
ಬಡಗುತಿಟ್ಟಿನ ಮೇರು ಭಾಗವತ, ಸುಬ್ರಹ್ಮಣ್ಯ ಧಾರೇಶ್ವರರಿಗೆ ಈ ಬಾರಿಯ ಅರೆಶಿರೂರು ದಿ|ರಾಮಚಂದ್ರ ಭಟ್ಟ ಸಂಸ್ಮರಣಾ ಪ್ರಶಸ್ತಿ ಒಲಿದು ಬಂದಿದೆ. ಪ್ರಶಸ್ತಿ ಪ್ರದಾನ ಡಿ. 11ರಂದು ಕುಂದಾಪುರದ ಯಳಜಿತ ಗ್ರಾಮದ ಹೆರಗುಡಿ ಶ್ರೀ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ.
ಸುಬ್ರಹ್ಮಣ್ಯ ಭಾಗವತರು ಕಾಳಿಂಗ ನಾವಡರ ಭಾಗವತಿಕೆಯಿಂದ ಆಕರ್ಷಿತರಾಗಿ ಯಕ್ಷರಂಗವನ್ನು ಸೇರಲು ಬಯಸಿ, ಉಪ್ಪೂರು ನಾರಾಯಣ ಭಾವಗವತರ ಶಿಷ್ಯರಾಗಿ, ಆಮೂಲಕ ಯಕ್ಷಗಾನಕ್ಕೆ ಪದಾರ್ಪಣೆ ಮಾಡಿದರು. ಹಿರಿಯರಿಂದ ಹಿಡಿದು ಕಿರಿಯರ ತನಕ ಅನೇಕ ಕಲಾವಿದರನ್ನು ರಂಗದಲ್ಲಿ ಕುಣಿಸಿ, ಗಾನ ಮಾಧುರ್ಯತೆಯಿಂದ ಲಕ್ಷಾಂತರ ಪ್ರೇಕ್ಷಕರಿಗೆ ಆನಂದವನ್ನು ಉಣಬಡಿಸಿದ್ದು; ಉಣ ಬಡಿಸುತ್ತಿರುವುದು ಎಲ್ಲಾ ಕಾಲದಲ್ಲೂ ಸ್ಮರಣೀಯ. ಧಾರೇಶ್ವರರು ಕಲಾಸೇವೆಯನ್ನು ಅಮೃತೇಶ್ವರಿ ಮೇಳ, ಶಿರಸಿ ಪಂಚಲಿಂಗ ಮೇಳ, ಹಿರೆಮಹಾಲಿಂಗೇಶ್ವರ ಮೇಳಗಳಲ್ಲಿ ಸಲ್ಲಿಸಿದ್ದಲ್ಲದೆ 26 ವರ್ಷಗಳ ಕಾಲ ನಿರಂತರವಾಗಿ ಪೆರ್ಡೂರು ಮೇಳದಲ್ಲಿ ಸೇವೆಸಲ್ಲಿಸಿದ್ದು ಗಣನೀಯವಾದುದು.
ಗಾನಕೋಗಿಲೆ, ರಂಗಮಾಂತ್ರಿಕ ಎಂದೇ ಖ್ಯಾತರಾಗಿರುವ ಧಾರೇಶ್ವರರ ಕಂಠ ಮಾಧುರ್ಯವನ್ನು ಅನುಭವಿಸಿ ಆನಂದಿಸಿದವರು ಅಪಾರ. ಅರವತ್ತು ಸಂವತ್ಸರಗಳನ್ನು ಪೂರೈಸಿದ್ದರೂ ಅದೇ ಇಂಪಾದ ಸ್ವರದಿಂದ ಮನವನ್ನು ತಂಪಾಗಿಸುವ ಇವರ ಪ್ರತಿಭೆಯನ್ನು ಮೆಚ್ಚ ಬೇಕು. ಯಕ್ಷಗಾನದಲ್ಲಿ ಭಾಗವತರೇ ಸೂತ್ರಧಾರರಾಗಿರುತ್ತಾರೆ. ಇಡೀ ಪ್ರಸಂಗ, ಸನ್ನಿವೇಶ, ಪಾತ್ರಗಳನ್ನು ಹಿಡಿತದಲ್ಲಿಟ್ಟುಕೊಂಡು, ರಂಗದಲ್ಲಿ ಅನವಶ್ಯಕ ವಾಗ್ವಾದಗಳನ್ನು ನಿಯಂತ್ರಿಸುತ್ತ, ಕಾಲಮಿತಿಯನ್ನು ಸೂಚಿಸುತ್ತ, ಪ್ರೇಕ್ಷಕರನ್ನು ಕೊನೆಯತನಕ ಹಿಡಿದಿಟ್ಟುಕೊಳ್ಳುವ ದಿಶೆಯಲ್ಲಿ ಭಾಗವತರ ಪಾತ್ರ ಹಿರಿದಾದುದು. ಇಂತಹ ರಂಗತಂತ್ರದಲ್ಲಿ ವಿಶೇಷ ಒಲವು , ಪರಿಣತಿ ಹೊಂದಿರುವವರು ಧಾರೇಶ್ವರರು.
ವಿಷ್ಣು ಭಟ್ಟ ಹೊಸ್ಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.