ಚಿಣ್ಣರಿಗೆ ಮಜಾ ನೀಡಿದ ದಸರಾ ರಜಾ ಶಿಬಿರ
Team Udayavani, Nov 23, 2018, 6:00 AM IST
ಇತ್ತೀಚೆಗೆ ಕುಂದಾಪುರದ ಕುಂಭಾಶಿ ಆನೆಗುಡ್ಡ ಶ್ರೀ ವಿನಾಯಕ ದೇವಾಲಯದಲ್ಲಿ ಚಿತ್ರಕಲೆಗೆ ಸಂಬಂಧ ಪಟ್ಟ ಹಲವಾರು ಚಟುವಟಿಕೆಗಳ ದಸರಾ ರಜಾ ಶಿಬಿರವನ್ನು ಕೋಟೇಶ್ವರದ ಮಯೂರ ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆ ಆಯೋಜಿಸಿತ್ತು.
ಅಂದು ಗ್ರಾಮೀಣ ವಲಯದ ಚಿಣ್ಣರ ಎವೆಯಿಕ್ಕಿ ಕಾಣುವ ಜೋಡಿ ಕಣ್ಣುಗಳು, ತೆರೆದಿಟ್ಟ ಪುಟ್ಟ ಮನಸ್ಸುಗಳು ಅಚ್ಚರಿಯ ಲೋಕದಲ್ಲಿ ವಿಹರಿಸುತ್ತಿದ್ದುವು. ಒಂದರಿಂದ ಹತ್ತನೇ ತರಗತಿಯ ವರೆಗಿನ ಮಕ್ಕಳಿಗಾಗಿ 6ದಿನಗಳ ಕಾಲ ಹಮ್ಮಿಕೊಂಡ ಶಿಬಿರ ಹೊರವಲಯದಲ್ಲಿ ಇತ್ತು.
ಎಲ್ಲಾ ಸೃಜನಾತ್ಮಕ ಕಲಾವಿದರಿಗೆ ಹೊಸತನದ ತುಡಿತ ಇರುವಂತೆ ಶಿಬಿರದ ರೂವಾರಿ ಕಲಾವಿದ ಮಹೇಂದ್ರ ಆಚಾರ್ಯ ಕೂಡ ಭಿನ್ನವಾದ ಆಲೋಚನೆಗಳನ್ನು ಪ್ರಯೋಗಿಸಲು ಸಿದ್ಧರಾಗಿದ್ದರು. ಮಂಗಳೂರು, ಉಡುಪಿ, ಕುಂದಾಪುರ ಮುಂತಾದೆಡೆಗಳಿಂದ ಅವರವರ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ಖ್ಯಾತ ಕಲಾವಿದರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗಿತ್ತು.
ಕಾಟೂìನಿಷ್ಟ್ ಜೀವನ್ ಶೆಟ್ಟಿಯವರು ವ್ಯಂಗ್ಯಚಿತ್ರ ರಚನೆಗೆ ಪೂರಕವಾಗಿ ಸುಲಭ ಚಿತ್ರಗಳನ್ನು ಬರೆಯಿಸಿ, ವಿವಿಧ ಆಕಾರಗಳ ಮುಖಗಳಲ್ಲಿ ನವರಸ ಭಾವ ಹೇಗೆ ಮೂಡುತ್ತದೆ ಎಂದು ತೋರಿಸಿದಾಗ ಮಕ್ಕಳು ಅನುಭವಿಸಿ ಸಂತೋಷ ಪಟ್ಟರು. ಸ್ಥಳದಲ್ಲೆ ಸಂಯೋಜಕರ ವ್ಯಂಗ್ಯಭಾವಚಿತ್ರ ಬರೆದಾಗ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಕಲಾವಿದ ತಾರಾನಾಥ ಕೈರಂಗಳ ಅವರಿಂದ ಕೊಲಾಜ್ ಕಲೆಯ ಕಲಿಕೆಯಲ್ಲಿ ಮಕ್ಕಳು ಬಿಳಿ ಹಾಳೆ ಮೇಲೆ ಬಣ್ಣ ಬಣ್ಣದ ಕಾಗದ ಕತ್ತರಿಸಿ ಹೂವು, ಆನೆ, ಮರ, ನವಿಲು, ಯಕ್ಷ ಮೊದಲಾದ ಚಿತ್ರಗಳ ಆಕಾರಕ್ಕೆ ಅಂಟಿಸಿ ಆನಂದಿಸಿದರು. ಕಲಾವಿದ ದಿನೇಶ್ ಹೊಳ್ಳ ಚಿತ್ರಕಲೆಗೆ ಗೆರೆಗಳ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿ, ಚಂದದ ಬರವಣಿಗೆಯಿಂದ ಮಕ್ಕಳಲ್ಲಿ ಹೊಸ ಹುರುಪು ಹುಟ್ಟಿಸಿದರು. ಅವರ ಜತೆ ಕಲಾವಿದ ಭವನ್ ಅವರು ಎ ಟು ಝಡ್ ಅಕ್ಷರಗಳಿಂದ ಚಿತ್ರಗಳು ಸಾಧ್ಯ ಎಂದು ತೋರಿಸಿದರು.
ನಾಲ್ಕನೇ ದಿನ ವಿನಯಚಂದ್ರ ಸಾಸ್ತಾನ ಮತ್ತು ಸುಮಾ ಆಚಾರ್ಯ ಅವರು ಪೇಪರ್ ಕ್ರಾಫ್ಟ್ ಕಲಿಸಿದರು. ಅವರು ಪ್ರಸ್ತುತ ಪರಿಸರ ಪ್ರಜ್ಞೆ ಕುರಿತು ಮಾಹಿತಿ ನೀಡುತ್ತಾ, ಮಣ್ಣಿಂದ ಸೀಡ್ ಬಾಲ್ ಹಾಗೂ ಸಜೀವ ಗಣಪ ಪ್ರಾತ್ಯಕ್ಷಿಕೆಗೆ ಮಕ್ಕಳ ಕೈಗಳನ್ನೂ ಕುಣಿದಾಡಿಸಿದರು. ಮನೆಯಲ್ಲಿ ಮಣ್ಣಾಟಕ್ಕೆ ಅವಕಾಶ ನೀಡದ್ದು ಶಿಬಿರದಲ್ಲಿ ನೆರವೇರಿದ ಖುಷಿ ಅದು! ಕಲಾವಿದ ಪೂರ್ಣೇಶ್ ಥರ್ಮಾಫೋಮ್ ಬಳಸಿ ಪ್ರಾಣಿ ಪಕ್ಷಿಗಳ ಮುಖವಾಡ ಪ್ರತಿಯೊಬ್ಬರೂ ಧರಿಸುವಂತೆ ಮಾಡಿದರು. ನಿರೀಕ್ಷಾ, ವಿಶ್ರುತ ಮತ್ತಿತರರು ಒಂದಷ್ಟು ಆಟ- ರಂಜನೆಗಳಿಗೂ ಆಗಿಂದಾಗ್ಗೆ ಅವಕಾಶ ಕೊಟ್ಟರು.
ಕೊನೆಯ ದಿನ ತುಂಬಾ ಕುತೂಹಲದ ಬೆಂಕಿಯಿಲ್ಲದೆ ಅಡುಗೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಯಿತು. ನಾಗರತ್ನ ಹೇಳೆìಯವರು ಕನ್ನಡ ಸಾಹಿತ್ಯವನ್ನು ಮಕ್ಕಳಲ್ಲೂ ಬೆಳೆಸುವ ಸಲುವಾಗಿ ಕವನ ರಚನೆ ಮತ್ತು ವೇದಿಕೆಯಲ್ಲಿ ನಿರೂಪಣೆ, ಸ್ವಾಗತ ಭಾಷಣ ಮಾಡುವ ಕುರಿತು ಪ್ರೇರೇಪಣೆ ನೀಡಿದರು. ಮೊದಲ ದಿನ ಹೆಸರು ಹೇಳಲು ಹಿಂಜರಿಯುತ್ತಿದ್ದ ಮಕ್ಕಳು ನಾ ಮುಂದು ತಾ ಮುಂದು ಎಂದು ತಮ್ಮ ವಾಕ್ಚತುರತೆ ತೋರಿದರು.
ಜೀವನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.