ಭಕ್ತಿ -ಭಾವದ ಸಂಗಮ ಗಾನಲಹರಿ
Team Udayavani, Feb 2, 2018, 2:54 PM IST
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಮತ್ತು ಅವರ ಪುತ್ರಿ ಶ್ರೀರಾಗ ಅವರು ನಡೆಸಿಕೊಟ್ಟ “ಗಾನ ಲಹರಿ’ ಭಕ್ತಿ ಭಾವನೆಗಳ ಸಂಗಮವಾಗಿ ರಂಜಿಸಿತು.
ಆರಂಭದಲ್ಲಿ ಹಾಡಿ¨ ವಂದನೆ ಕೋಟಿ ವಂದನೆ ನಮಿಪೆ ನರಹರಿಯ ಗೀತೆಗಳು ಸ್ತುತಿಪ್ರದವಾಗಿ ಮನ ಮುಟ್ಟಿತು. ಭುವನಂ ಗಗನಂ, ಕಾದಿರುವಳು ಶಬರಿ, ಕರುಣಾಳು ಬಾ ಬೆಳಕೆ ಹಾಡುಗಳು ಭಕ್ತಿ ಭಾವನೆಗಳ ದೀಪಧ್ವನಿಯಾಗಿ ಮೊಳಗಿತು.ಸಂತ ಶಿಶಿನಾಳ ಶರೀಫರ ಬಿದಿರು ನಾನ್ಯಾರಿಗಲ್ಲದವಳು ಗೀತೆಯನ್ನು ಪಾರ್ವತಿಯವರು ಹಾಡಿದರು.ಜನಪ್ರಿಯವಾಗಿರುವ ನೀಡು ಶಿವಾ ನೀಡದಿರು ಶಿವಾ ಗೀತೆಯನ್ನು ಶ್ರೀರಾಗ ಸ್ವಂತ ಶೈಲಿಯಲ್ಲಿ ಹಾಡಿ ರಂಜಿಸಿದರು.
ಭಾಗ್ಯದ ಲಕ್ಷ್ಮೀ ಬಾರಮ್ಮ ಗೀತೆಯೊಂದಿಗೆ ಗಾನಲಹರಿ ಮುಕ್ತಾಯವಾಯಿತು. ಕೀಬೋರ್ಡ್ ವಾದಕರಾಗಿ ವಿಟ್ಲದ ಅರಮನೆಯ ಪ್ರಸಾದ ವರ್ಮ, ತಬಲಾದಲ್ಲಿ ಆತ್ಮರಾಮ ಮೈಸೂರು ಸಹಕರಿಸಿದರು.
ಅನೂಷಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.