ಡಾ| ಎನ್. ನಾರಾಯಣ ಶೆಟ್ಟಿ ಅವರಿಗೆ ಪಟ್ಲ ಪ್ರಶಸ್ತಿ
Team Udayavani, May 25, 2018, 6:00 AM IST
ಯಕ್ಷಗಾನ ಸೇವೆಗಾಗಿ ನೀಡಲಾಗುತ್ತಿರುವ ಪ್ರತಿಷ್ಠಿತ ಪಟ್ಲ ಪ್ರಶಸ್ತಿ ಈ ಬಾರಿ ಖ್ಯಾತ ಯಕ್ಷಸಾಹಿತಿ, ಛಂದೋಬ್ರಹ್ಮ ಶಿಮಂತೂರಿನ ಡಾ| ಎನ್. ನಾರಾಯಣ ಶೆಟ್ಟಿ ಅವರಿಗೆ ಒಲಿದಿದೆ.
ಯಕ್ಷಗಾನ ಸಾಹಿತ್ಯದಲ್ಲಿ ಛಂದಸ್ಸಿನ ಬಗೆಗೆ ಅಪಾರವಾದ ಅಧ್ಯಯನ ನಡೆಸಿದ ಹಂಪಿಯ ಕನ್ನಡ ವಿವಿಯಿಂದ ಡಿ. ಲಿಟ್. ಪದವಿ ಪಡೆದ ಡಾ| ಎನ್. ನಾರಾಯಣ ಶೆಟ್ಟಿ ಅವರು ಕಾರ್ಕಳ ತಾಲೂಕು ನಂದಿಕೂರಿನಲ್ಲಿ ಎಳತ್ತೂರು ಗುತ್ತು ದಿ| ಅಚ್ಚಣ್ಣ ಶೆಟ್ಟಿ ಮತ್ತು ನಂದಿಕೂರು ಚೀಂಕ್ರಿಗುತ್ತು ದಿ| ಕಮಲಾಕ್ಷಿ ಶೆಡ್ತಿ ದಂಪತಿಯ ಪುತ್ರನಾಗಿ 1934 ಫೆ. 1ರಂದು ಜನಿಸಿದ್ದು, ಐದನೇ ತರಗತಿ ಯಲ್ಲಿ ದ್ದಾಗಲೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿದ್ದರು. ಆರನೇ ತರಗತಿಯಿಂದ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿ ದರ್ಪಣ, ಹೇಮಚಂದ್ರಮ ಛಂದೋ ನು ಶಾಸನಗಳನ್ನು ಅಧ್ಯಯನ ಮಾಡಿದರು.
ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಥಮ ಸದಸ್ಯ ರಾಗಿದ್ದು, ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರ ಕುರಿತಾಗಿ ಡಾ| ದಿನಕರ ಪಚ್ಚನಾಡಿ ಅವರು ಛಂದೋಬ್ರಹ್ಮ, ಹಿರಿಯ ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿ ಅಭಿನವ ನಾಗವರ್ಮ ಹೆಸರಿನಲ್ಲಿ ಕೃತಿ ರಚಿಸಿದ್ದಾರೆ. ಕಬ್ಬಿನಾಲೆ ವಸಂತ ಭಾರದ್ವಾಜ್ ಕೂಡ ಇವರ ಕುರಿತಾಗಿ ಹಲವಾರು ಮಾಹಿತಿಗಳನ್ನು ವಿವಿಧ ಲೇಖನಗಳ ರೂಪದಲ್ಲಿ ಆಸಕ್ತರಿಗೆ ನೀಡಿದ್ದಾರೆ. ಇವರು ಅಪಾರ ಶಿಷ್ಯರಲ್ಲಿ ಹೊಂದಿದ್ದು, ಅವರಲ್ಲಿ ಅನಂತರಾಂ ಬಂಗಾಡಿ, ತಾರಾನಾಥ ವರ್ಕಾಡಿ, ಗಣೇಶ್ ಕೊಲಕಾಡಿ, ಡಾ| ದಿನಕರ ಪಚ್ಚನಾಡಿ ಮುಂತಾದವರೂ ಇರುವುದು ಶೆಟ್ಟರ ಪಾಂಡಿತ್ಯಕ್ಕೆ ಸಾಕ್ಷಿ.
ಪ್ರಶಸ್ತಿ, ಬಿರುದುಗಳು
ದೇರಾಜೆ ಸ್ಮತಿ ಗೌರವ, ಕುಕ್ಕಿಲ ಪ್ರಶಸ್ತಿ, ಸನಾತನ ಪ್ರಶಸ್ತಿ, ಅಗರಿ ಪ್ರಶಸ್ತಿ, ಶ್ರೇಷ್ಠ ಯಕ್ಷಗಾನ ಸಾಹಿತ್ಯ ಸಾಧನಾ ಪ್ರಶಸ್ತಿ, ವಿಂಶತಿ ತಮ ವಿದ್ವತ್ ಪ್ರಶಸ್ತಿ, ಸ್ಕಂದ ಪುರಸ್ಕಾರ, ತಲ್ಲೂರು ಕನಕಾ-ಅಣ್ಣಯ್ಯ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮುದ್ದಣ ಪುರಸ್ಕಾರ, ಕಲ್ಕೂರ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಅಭಿನವ ನಾಗವರ್ಮ, ಯಕ್ಷ ಪಾಣಿನಿ, ಛಂದೋಂಬುಧಿ ಚಾರು ಚಂದ್ರ, ಛನªಶ್ಚತುರಾನನ, ಯಕ್ಷ ಛಂಧೋ ಭಾರ್ಗವ, ಛಂದೋ ವಾರಿಧಿ ಚಂದ್ರ ಬಿರುದು ಗಳು ಇವ ರಿಗೆ ಸಂದಿವೆ.
ಕೃತಿಗಳು: ವಿಚಿತ್ರಾ ತ್ರಿಪದಿ, ಕನ್ನಡದ ಅನಘ ಛಂದೋ ರತ್ನಗಳು, ಯಕ್ಷಗಾನ ಛಂದೋಂಬುಧಿ ಮುಂತಾದ ಅಮೂಲ್ಯ ಕೃತಿಗಳನ್ನೂ, ಕಟೀಲು ಕ್ಷೇತ್ರ ಮಹಾತ್ಮೆ, ದೀಕ್ಷಾ ಕಂಕಣ, ರಾಜಮುದ್ರಿಕಾ, ಬಿದ್ìದ ಬೈರವೆರ್, ಸೊರ್ಕುದ ಸಿರಿಗಿಂಡಿ ಮುಂತಾದ ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದಾರೆ. ಅವರ ಪ್ರಸಂಗಗಳು ಮೇ 27ರಂದು ನಡೆ ಯುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ವಾರ್ಷಿಕೋತ್ಸವದಲ್ಲಿ ಕೃತಿ ರೂಪ ದಲ್ಲಿ ಹೊರ ಬರಲಿದೆ.
ಪುತ್ತಿಗೆ ಪದ್ಮನಾಭ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.