ನಾಗರ ಪಂಚಮಿಯಂದು ಕಂಸ ಕಂಡ ಕನಸು

ಕಿದಿಯೂರು ಹೊಟೇಲ್‌ ಪ್ರಸ್ತುತಿ

Team Udayavani, Aug 16, 2019, 5:00 AM IST

q-4

ಉಡುಪಿ ಕಿದಿಯೂರು ಹೋಟೆಲ್‌ ಪ್ರಾಯೋಜಕತ್ವದಲ್ಲಿ ನಾಗರ ಪಂಚಮಿಯಂದು ಆಯ್ದ ಕಲಾವಿದರಿಂದ ಪ್ರಸ್ತುತಗೊಂಡ “ಕನಸು ಕಂಡ ಕಂಸ’ ಪೌರಾಣಿಕ ಪ್ರಸಂಗ ಹಬ್ಬದ ದಿನ ರಸದೌತಣ ನೀಡಿತು.

“ಯಾಕೆ ತುಚ್ಛಿಕರಿಪರೆನ್ನನು ಮಾತಾಪಿತರು’ ಎಂದು ಹಲುಬುತ್ತಿರುವ ಕಂಸನಿಗೆ ಮಾತಾಪಿತರನ್ನು ಸೆರೆಮನೆಗಟ್ಟುವ ಸಲಹೆಯಿತ್ತ ನಾರದನಿಂದ ಪ್ರಸಂಗ ಆರಂಭವಾಯ್ತು. ತಮ್ಮ ಸ್ವಾರ್ಥಕ್ಕಾಗಿ ಮಾತಾಪಿತರನ್ನು ಹಿಂಸಿಸುವ ಜೈಲಿಗಟ್ಟುವ ಹಿಂದಿನ ಪರಿಪಾಠ ಈಗಲೂ ಉಳಿದು ಕೊಂಡಿರುವುದು ವಿಷಾದನೀಯ. ಉಗ್ರಸೇನ-ರುಚಿಮತಿಯರನ್ನು ಕಾರಾಗೃಹ ವಾಸಕ್ಕೆ ಕಳಿಸಿದ ಮಥುರಾಧಿಪತಿ ಕಂಸನು ಮಲ್ಲ ಯುದ್ಧದಲ್ಲಿ ಅಜೇಯನೆಂದೆನಿಸಿದ ಮಗಧಾಧಿಪತಿಯನ್ನು ಸೋಲಿಸಲೆಂದು ಮಗಧರಾಜ್ಯಕ್ಕೆ ಬಂದಾಗ ಅಲ್ಲಿ ಆತನ ಮಕ್ಕಳಾದ ಆಸ್ತಿ-ಪ್ರಾಸ್ತಿಯರೊಂದಿಗೆ ಮುಖಾಮುಖೀಯಾಗುತ್ತದೆ. ತಾನು ಬದುಕಬೇಕು, ಬೇರೆಯವರು ಸತ್ತರೂ ಚಿಂತಿಲ್ಲ ಆದರೆ ತಾನು ಹೇಗಾದರೂ ಬದುಕಬೇಕು, ಇನ್ನೊಬ್ಬರನ್ನು ತುಳಿದಾದರೂ ಸರಿ, ಬಲಿ ಕೊಟ್ಟಾದರೂ ಸರಿ ಎನ್ನುವ ದುಷ್ಟ ಮನೋಭಾವದ ಪಾಶವೀ ಶಕ್ತಿಯ ಮಗಧರಾಜನ ದುಷ್ಟ ಸಂತತಿ ನಡುವೆ ಈಗಲೂ ನಾವು ಬದುಕುತ್ತಿದ್ದೇವೆ ಎನ್ನುವುದೇ ನಮ್ಮ ದುರಾದೃಷ್ಟ. ಕಂಸನೊಡನೆ ಸರಿಸಮಾನವಾಗಿ ಹೋರಾಡಿ ಆತನಿಗೆ ತನ್ನ ಮಕ್ಕಳಾದ ಆಸ್ತಿ-ಪ್ರಾಸ್ತಿಯರನ್ನು ಮದುವೆ ಮಾಡಿ ಕೊಡುತ್ತಾನೆ ಮಗಧೇಂದ್ರ. ಈ ಕಥಾಭಾಗದಲ್ಲಿ ಕಂಸನಾಗಿ ನೀಲ್ಗೊàಡು ಶಂಕರ ಹೆಗಡೆ, ನಾರದನಾಗಿ ಆನಂದ್‌ ಕೇತ್ಕರ್‌, ಆಸ್ತಿ-ಪ್ರಾಸ್ತಿಯರಾಗಿ ಶಶಿಕಾಂತ್‌ ಶೆಟ್ಟಿ ಹಾಗೂ ವಂಡಾರು ಗೋವಿಂದ, ಮಗಧನಾಗಿ ತುಮ್ರಿ ಭಾಸ್ಕರ್‌ ರಾರಾಜಿಸಿದರು. ಭಾಗವತರಾಗಿ ಚಂದ್ರಕಾಂತ್‌ ಮೂಡುಬೆಳ್ಳೆ ಸುಶ್ರಾವ್ಯ ಹಾಡುಗಳಿಂದ ಮನಸೆಳೆದರು. ಚೆಂಡೆ ವಾದನದಲ್ಲಿ ರಾಕೇಶ್‌ ಮಲ್ಯ ಸಹಕರಿಸಿದರು.

ಪ್ರಸಂಗದ ಉತ್ತಾರಾರ್ಧದಲ್ಲಿ ಲವಲವಿಕೆಯ ಕೃಷ್ಣನಾಗಿ ಮಂಕಿ ಈಶ್ವರ ನಾಯಕ್‌ ಹಾಗೂ ಬಲರಾಮನಾಗಿ ವಿನಯ ಪಾತ್ರಗಳಿಗೆ ನ್ಯಾಯ ಒದಗಿಸಿದರು. ಅದರಲ್ಲೂ ಕೃಷ್ಣ ಪಾತ್ರಧಾರಿ ಸಂಪ್ರದಾಯಬದ್ಧ ಕುಣಿತ ಹಾಗೂ ಪ್ರಾಸಬದ್ಧ ಮಾತುಗಳಿಂದ ಕರತಾಡನ ಗಿಟ್ಟಿಸಿದರು. ಮಾವ ಕಂಸನಿಂದ ಅಕ್ರೂರನ ಮೂಲಕ ಮಧುರೆಯಲ್ಲಿ ನಡೆಯಲಿರುವ ಬಿಲ್ಲ ಹಬ್ಬದ ಆಹ್ವಾನ ಪಡೆದ ಕೃಷ್ಣ ಬಲರಾಮರು ಮಾರ್ಗ ಮಧ್ಯದಲ್ಲಿ ಅರಮನೆಯ ಮಡಿವಾಳನನ್ನು ಸಂಧಿಸುವರು. ತಮ್ಮನ್ನು ರಾಜರಜಕನೆಂದು ಪರಿಚಯಿಸಿಕೊಂಡ ಆಗಸರವನ ಪಾತ್ರದಲ್ಲಿ ಅರುಣ್‌ ಜಾರ್ಕಳ ಅವರ ಹಾಸ್ಯ ರಸಧಾರೆ, ಅಣುಕು ನೃತ್ಯ, ಅಸಾಧಾರಣ ವೇಗದಲ್ಲಿ ಗಿರಿಕಿ (ಸುತ್ತು) ಹಾಕುತ್ತಾ, ಗಿರಿಕಿ ಹಾಕುತ್ತಲೇ ಮುಂಡಾಸು ಬಿಚ್ಚಿ ಕಟ್ಟಿಕೊಳ್ಳುವ ಚಾಕಚಕ್ಯತೆ ಮೆಚ್ಚುಗೆ ಪಡೆಯಿತು.

ಕಂಚಿನ ಕಂಠದ ಹಿಲ್ಲೂರು ರಾಮಕೃಷ್ಣ ಹೆಗಡೆಯವರ ಅಬ್ಬರದ ಭಾಗವತಿಕೆಗೆ ಸರಿಸಾಟಿಯೆಂಬಂತೆ ರಂಗಪ್ರವೇಶಿಸಿದ ಮಧುರಾ ಮಹೀಂದ್ರನಾಗಿ ಬಳ್ಕೂರು ಕೃಷ್ಣ ಯಾಜಿಯವರು ರಂಗಸ್ಥಳದಲ್ಲಿ ವಿಜೃಂಭಿಸಿದರು. ಅದರಲ್ಲೂ ಸ್ಪಷ್ಟೋಚ್ಛಾರ ಹಾಗೂ ಕರ್ಣಾನಂದಕರ “ನೆತ್ತಿಗೆ ತೈಲವನೊತ್ತುತ’ ಹಾಡಿಗೆ ಭಾವಪೂರ್ವಕವಾಗಿ ಸ್ಪಂದಿಸಿ ಕಂಸನ ಕನಸನ್ನು ವ್ಯಕ್ತಪಡಿಸಿದ ರೀತಿ ಅದ್ಭುತವಾಗಿತ್ತು.

ಕಾಕತಾಳೀಯವೆನ್ನುವಂತೆ ಕಂಸನು ಕನಸು ಕಂಡು ಬೆಚ್ಚಿಬಿದ್ದು ಹೊರಳಿ ಕೆಳಗೆ ಬೀಳುವುದಕ್ಕೂ ಹೊರಗೆ ಸಿಡಿಲು-ಮಿಂಚಿನ ಅರ್ಭಟ ಕೇಳಿ ಬರುವುದು ಏಕಕಾಲದಲ್ಲಿ ಆಯ್ತು. ಬಲರಾಮ ಕೃಷ್ಣರೊಂದಿಗಿನ ಕಂಸನ ಮಲ್ಲಯುದ್ಧ ರುದ್ರರಮಣೀಯವಾಗಿತ್ತು. ಪ್ರಸಂಗದುದ್ದಕ್ಕೂ ಪರಮೇಶ್ವರ ಭಂಡಾರಿ ಕರ್ಕಿಯವರ ಮದ್ದಳೆ ವಾದನ ಕರ್ಣಾನಂದಕರವಾಗಿದ್ದರೆ ಶಿವಾನಂದ ಕೋಟ ತಮ್ಮ ಅಪ್ರತಿಮ ಚೆಂಡೆ ವಾದನದಿಂದ ರಂಗದಲ್ಲಿ ಜೀವಕಳೆ ತುಂಬುವಲ್ಲಿ ಸಹಕರಿಸಿದರು.

ಜನನಿ ಭಾಸ್ಕರ ಕೊಡವೂರು

ಟಾಪ್ ನ್ಯೂಸ್

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

Dinesh-Gundurao

Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್‌ ಅವ್ಯವಹಾರ ಉಲ್ಲೇಖ: ದಿನೇಶ್‌ ಗುಂಡೂರಾವ್‌

1-manipura

Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.