ಕೃಷ್ಣನಿಗೆ ದುಬೈ ಗುರು ಶಿಷ್ಯರ ನೃತ್ಯ ನಮನ
Team Udayavani, Aug 10, 2018, 6:00 AM IST
ಪಿಳ್ಳಂಗೋವಿಯ ಚೆಲುವ ಕೃಷ್ಣನ , ಗೋವಿಂದ ನಿನ್ನ ನಾಮವೇ ಚೆಂದ ಮೂಲಕ ಶಿಷ್ಯವೃಂದವು ಕೃಷ್ಣನನ್ನು ನಾಟ್ಯ ವೈಭವದಿಂದ ಮೆರೆಸಿದರೆ ,ಗುರು ಸಪ್ನಾ ಕಿರಣ್‌ರವರು ಬಾರೋ ಕೃಷ್ಣಯ್ಯ ಹಾಡಿಗೆ ನೃತ್ಯ ಮಾಡಿ ಮಮತಾಮಯಿ ಯಶೋದೆ , ಪ್ರೀತಿ ತುಂಬಿದ ರಾಧೆ ,ಭಕ್ತಿ ಲೋಕದ ಮೀರಾ ದರ್ಶನ ಮಾಡಿಸಿದರು.
ಶ್ರೀಕೃಷ್ಣ ನಿಗೆ ಪ್ರಿಯವಾದ ನಾಟ್ಯಸೇವೆಯ ಮೂಲಕ ಜುಲೈ 29ರ ಸಂಜೆ ಉಡುಪಿಯ ರಾಜಾಂಗಣದಲ್ಲಿ ಸಂಕೀರ್ಣ ನೃತ್ಯಶಾಲೆ ದುಬೈಯ ಗುರು ಶಿಷ್ಯರು ಜನಮನ ಗೆದ್ದರು. ಉಡುಪಿ ಪರ್ಯಾಯ ಪೀಠದ ಪಲಿಮಾರು ಶ್ರೀಗಳು ಹಾಗೂ ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ಶ್ರೀ ವಿಶ್ವಪ್ರಸನ್ನ ಸ್ವಾಮಿಗಳ ಸಾನ್ನಿಧ್ಯದಲ್ಲಿ ಪುಷ್ಪಾಂಜಲಿ,ಗಣಪತಿ ವಂದನೆ ಮೂಲಕ ಕಾರ್ಯಕ್ರಮ ಆರಂಭಿಸಿದರೆ ,ದಶಾವತಾರದ ಮೂಲಕ ನಾಟ್ಯ ದೃಶ್ಯದೌತಣ ನೀಡಿದರು . ಸಂಕೀರ್ಣದ ಪ್ರತಿಭಾನ್ವಿತ ಕಿರಿಯ ವಿದ್ಯಾರ್ಥಿನಿಯರು ವಿಷಮಕಾರಿ ಕಣ್ಣನ್ ಆಗಿ ಬಾಲಕೃಷ್ಣನ ಚೆಲ್ಲಾಟದ ಮೂಲಕ ಪ್ರೇಕ್ಷಕರಲ್ಲಿ ಮಂದಹಾಸ ಮೂಡಿಸಿದರು.
ಪಿಳ್ಳಂಗೋವಿಯ ಚೆಲುವ ಕೃಷ್ಣನ , ಗೋವಿಂದ ನಿನ್ನ ನಾಮವೇ ಚೆಂದ ಮೂಲಕ ಶಿಷ್ಯವೃಂದವು ಕೃಷ್ಣನನ್ನು ನಾಟ್ಯ ವೈಭವದಿಂದ ಮೆರೆಸಿದರೆ ,ಸ್ವತಃ ಗುರು ಸಪ್ನಾ ಕಿರಣ್‌ರವರು ಬಾರೋ ಕೃಷ್ಣಯ್ಯ ಹಾಡಿಗೆ ನೃತ್ಯ ಮಾಡಿ ಮಮತಾಮಯಿ ಯಶೋದೆ , ಪ್ರೀತಿ ತುಂಬಿದ ರಾಧೆ ,ಭಕ್ತಿ ಲೋಕದ ಮೀರಾ ಅವರ ದರ್ಶನ ಮಾಡಿಸಿದರು .
ನಂತರ ಸಂಕೀರ್ಣ ತಂಡದಿಂದ ಕಾಳಿ ಕೌಥುವಾ , ಅಯಗಿರಿ ನಂದಿನಿ ನಾಟ್ಯದಿಂದ ಶಕ್ತಿ ಸ್ವರೂಪಿಣಿಗೆ ನೃತ್ಯ ಅರ್ಪಣೆ ನೀಡಿದರು. ಭೋ ಶಂಭೋ , ಕೋಲಾಟ ಮುಂತಾದ ವೈವಿಧ್ಯಮಯ ನೃತ್ಯ ನೆರವೇರಿತು . ಯುದ್ಧ ಭೂಮಿಯಲ್ಲಿ ತನ್ನವರನ್ನೆಲ್ಲ ಕಂಡು ವಿಚಲಿತಗೊಂಡು ಹಿಂದೆ ಸರಿಯುವ ಅರ್ಜುನನಿಗೆ ಗೀತೋಪದೇಶದ ಮೂಲಕ ಧರ್ಮ ಜ್ಞಾನ ,ಚೈತನ್ಯ ತುಂಬುವ ಧರ್ಮ ಕ್ಷೇತ್ರ ವಿದ್ಯುತ್ ಸಂಚಾರ ಮಾಡಿಸಿತು.
ನೃತ್ಯ ನಮನದಲ್ಲಿ ಗುರು ಸಪ್ನಾಕಿರಣ್ ಜೊತೆಗೆ ನೃತ್ಯ ಸಂಕೀರ್ಣದ ಕಲಾವಿದರಾದ ಅದಿತಿ ಕಿರಣ್, ಆಜ್ಞಾé ಆದೇಶ್ , ಅಹಂತಿ ಸಂಕಮೇಶ್ವರನ್, ಅವನಿ ಶ್ರೀನಿವಾಸಮೂರ್ತಿ ರಾವ್, ಯಶ್ವಿ ಪಾಠಕ್, ತೇಜಸ್ವಿನಿ ಭಟ್, ಶರಣ್ಯ ಭಟ್, ನಿರ್ವಿ ಶೆಟ್ಟಿ, ಗ್ರೇಸ್ ಸ್ಟೀಪನ್ ರೋಡ್ರಿಗಸ್, ತನ್ವಿ ಪ್ರಸನ್ನ, ಹಂಸಿನಿ ಪ್ರಸನ್ನ, ಪ್ರಜ್ಞಾ ಅನಂತ್, ದೀಕ್ಷಾ ರಾಜ್, ಅಧಿತ್ರಿ ಸಂಕಮೇಶ್ವರನ್, ದಿವ್ಯಾ ನರಸಿಂಹನ್, ಯಾಶ್ನಾ ಶೆಟ್ಟಿ, ಪ್ರಾಪ್ತಿ ಪಾಠಕ್ ಮತ್ತು ಪ್ರಿಯ ವಿಜಯಕುಮಾರ್ ಪಾಲ್ಗೊಂಡಿದ್ದರು.
ಆರತಿ ಅಡಿಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.