ಗಿರಿಯ ಮಡಿಲಲ್ಲಿ ವನ ನಿನಾದ


Team Udayavani, Jan 27, 2017, 3:45 AM IST

26-KALA-1.jpg

ಪಶ್ಚಿಮ ಘಟ್ಟವೇ ಒಂದು ನಿಸರ್ಗ ಸಹಜ ಗ್ಯಾಲರಿಯಾಗಿದ್ದು ಅಲ್ಲಿ ಪ್ರತಿಯೊಂದು ದೃಶ್ಯಕ್ಕೂ ಅಗೋಚರವಾದ ಕಲಾತ್ಮಕ ಚೌಕಟ್ಟಿದೆ. ಕಾಣುವ ಕಣ್ಣು, ಗ್ರಹಿಸುವ ಮನಸ್ಸಿದ್ದರೆ ಪಶ್ಚಿಮಘಟ್ಟದ ಎಲ್ಲ ದೃಶ್ಯಗಳೂ ಕಲಾತ್ಮಕ ಸೌಂದರ್ಯದ ವಿವಿಧ ಆಯಾಮಗಳನ್ನು ತೆರೆದು ತೋರಿಸುತ್ತವೆ. ಗಿರಿಗಳನ್ನು ಚುಂಬಿಸುವ ಶ್ವೇತ ಮೇಘ ಮಾಲೆ, ಮುಂಜಾನೆಯ ಇಬ್ಬನಿ ದಿಬ್ಬಣ, ಗಾಳಿಗೆ ಮಂಜು ಸಂಚರಿಸುತ್ತಾ ಮಸುಕಾಗಿದ್ದ ಗಿರಿಗಳು ನಿಧಾನಕ್ಕೆ ಕಡು ಹಸಿರು ಬಣ್ಣಕ್ಕೆ ಬದಲಾವಣೆಯಾಗುವುದನ್ನು ಕಂಡರೆ ನಿಸರ್ಗದ ಕಾಣದ ಕುಂಚವು ಬೃಹತ್‌ ಕ್ಯಾನ್ವಾಸ್‌ನಲ್ಲಿ ರಚಿಸುವ ಚಿತ್ರಗಳು ದಿಗೂಢರನ್ನಾಗಿಸುತ್ತವೆ.  

ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿಯ ಕಲಾವಿದರು ತಮ್ಮ ವರ್ಣಕುಂಚಗಳನ್ನು ಬೆನ್ನಿಗೇರಿಸಿ ಹೊರಟದ್ದು ಪಶ್ಚಿಮಘಟ್ಟದ ಚಾರ್ಮಾಡಿಘಾಟಿಯ ತುತ್ತತುದಿಯ ಅಲೇಖಾನ ಹೊರಟ್ಟಿ ಅರಣ್ಯ ಪ್ರದೇಶಕ್ಕೆ. ಕಾಫಿ ತೋಟದ ಘಮವನ್ನು ಶೋಧಿಸಿ ಅಡವಿ ಯೊಳಗಿನ ಚಳಿಯನ್ನು ಭೇದಿಸಿ ಕಾನನದಾಚೆಯ ಪುಟ್ಟಹಳ್ಳಿ ಹೊರಟ್ಟಿಗೆ ಬಂದಾಗ ಸೂರ್ಯನು ಕಿರಣಗಳನ್ನು ಚಾಚುತ್ತಾ ನಮ್ಮನ್ನು ವೀಕ್ಷಿಸುತ್ತಿದ್ದ. ಆ ದೃಶ್ಯಗಳನ್ನು ಕ್ಯಾನ್ವಾಸ್‌ನಲ್ಲಿ ಸೆರೆ ಹಿಡಿಯಬೇಕೆಂದು ಹೊರಟ ಚಾವಡಿಯ 22 ಕಲಾವಿದರು ಹೊರಟ್ಟಿಯ ಮನೋಹರವಾದ ಕಣಿವೆ ದೃಶ್ಯಗಳನ್ನು ಆಗಲೇ ಮನಸ್ಸಿನೊಳಗೆ ತುಂಬಿಕೊಂಡಿದ್ದರು.  

ಹಿರಿಯ ಕಲಾವಿದ ಗಣೇಶ್‌ ಸೋಮಯಾಜಿ ತಮ್ಮ ಜಲ ವರ್ಣದ ಚಮತ್ಕಾರದೊಂದಿಗೆ ಅಲ್ಲಿನ ಕಾನನ ದೃಶ್ಯಗಳನ್ನು ತಮ್ಮ ಕುಂಚ – ಕ್ಯಾನ್ವಾಸ್‌ನಲ್ಲಿ ಸೆರೆ ಹಿಡಿದರು. ಜತೆಯಲ್ಲೇ ಕಮಾಲ್‌ ಅವರು ಕಾಫಿ ತೋಟ, ಕಾನನ ದೊಂದಿಗೆ ಬೆರೆತ ಮರಗಿಡಗಳನ್ನು ಚಿತ್ರಿಸಿದರು. ತಿಲಕ್‌ರಾಜ್‌ ಅಡವಿಯ ನಡುವೆ ಇರುವ ಮುರುಕಲು ಮನೆ, ಹರಕಲು ಬೇಲಿಯ ದೃಶ್ಯಗಳನ್ನು ಸೆರೆಹಿಡಿದರೆ, ಸುಧೀರ್‌ ಕಾವೂರು ಕಾಡಿನ ಹಾಡಿಯಲ್ಲಿ ನೆರಳು ಬೆಳಕಿನ ಸಂಗಮ ವನ್ನು ಸಾದರ ಪಡಿಸಿದರು. ವೀಣಾ ಮಧುಸೂದನ್‌ ಕಾಫಿ ತೋಟದ ಹಸಿರು ಎಲೆಗಳ ನಡುವೆ ಅರಳಿದ ಕೆಂಪು ಹೂವಿನ ಕಂಪನ್ನು ಚಿತ್ರಿಸಿದರೆ ವಿದ್ಯಾ ಕಾಮತ್‌ ಕಾಫಿ ಕಣಿವೆಯ ನಡುವಿನ ಅಂಶುಧರನನ್ನು, ನವೀನ್‌ ಕೋಡಿಕಲ್‌ ಘಟ್ಟದ ಕಂದರವನ್ನು ಚಿತ್ರಿಸಿದರು. ಯುವ ಕಲಾವಿದ ಡೆಸ್ಮಂಡ್‌ ಹಳ್ಳಿಯ ಹಳ್ಳದ ಒಪ್ಪ ಓರಣವನ್ನು ಬರೆದರು. 

ಕಾನನದ ಹೂರಣವನ್ನು ಬಣ್ಣಗಳಲ್ಲಿ ಹಿಡಿದಿರಿಸುವ ಪ್ರಯತ್ನ ಮಾಡಿದ ಕರಾವಳಿ ಚಿತ್ರ ಕಲಾ ಚಾವಡಿಯ ಈ “ವನನಿನಾದ ಕಲಾ ಶಿಬಿರ’ವು ಪಶ್ಚಿಮ ಘಟ್ಟದ ದೃಶ್ಯಾವಳಿಗಳಲ್ಲಿರುವ ರಮಣೀಯತೆಯನ್ನು ಅಭಿವ್ಯಕ್ತಪಡಿಸಿತ್ತು. ಹೊರಟ್ಟಿ ಕಾನನ ಕಣಿವೆಯ ಸುಂದರ ದೃಶ್ಯಗಳು ಮಾತ್ರವಲ್ಲ, ಅಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗ ದವರ ರೋಚಕ ಬದುಕು ಕೂಡ ಕಲಾವಿದರ ಕಲಾಕೃತಿಗಳಿಗೆ ಆಹಾರವಾದವು.   

ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.