ದ್ವಾಪರದ ನಾಯಕಿಯರಿಗೆ ಒಂದು ವೇದಿಕೆ
Team Udayavani, Jan 27, 2017, 3:45 AM IST
ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ನೃತ್ಯ ಲೋಕದ ಹೊಸ ಹೊಳಹುಗಳನ್ನು ಅನ್ವೇಷಿಸುತ್ತಿರುವ ಸಂಸ್ಥೆ. ಕಲಾಶ್ರೀ ಚಂದ್ರಶೇಖರ ನಾವಡರ ಅನುಭವ ಪರಿಕಲ್ಪನೆ, ದೃಷ್ಟಿಕೋನ, ಪ್ರಯೋಗ ಇವೆಲ್ಲವುಗಳಿಗೆ ಇಂತಹ ಹೊಸ ಕನಸನ್ನು ಕಂಡು ಅದು ನನಸಾಗಿ ಹೊರಹೊಮ್ಮಿ ನೃತ್ಯ ಲೋಕಕ್ಕೆ ಅರ್ಪಣೆಯಾಗುತ್ತದೆ. ಜನವರಿ 29ರಂದು ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನಲ್ಲಿ ಸಂಜೆ 4.30ಕ್ಕೆ ಆಯೋಜಿಸಲ್ಪಟ್ಟಿರುವ ದ್ವಾಪರದ ನಾಯಕಿಯರು ನೃತ್ಯ ಬ್ಯಾಲೆ ರಸಿಕರ ಮನದಾಳದಲ್ಲಿ ಹೊಸ ಕಲ್ಪನೆಯನ್ನು ಮೂಡಿಸಿದೆ.
ದಕ್ಷಿಣಕನ್ನಡ -ಉಡುಪಿ ಜಿಲ್ಲೆಗಳ ಪ್ರತಿಷ್ಠಿತ ನೃತ್ಯ ಸಂಸ್ಥೆಗಳ ನಿರ್ದೇಶಕಿಯರೇ ಪ್ರಸ್ತುತ ಪಡಿಸುವ ಏಕವ್ಯಕ್ತಿ ನೃತ್ಯಬ್ಯಾಲೆ. ಇಲ್ಲಿ ದ್ವಾಪರದ ರಾಧೆ, ಅಂಬೆ, ದ್ರೌಪದಿ ಹಾಗೂ ಹಿಡಿಂಬೆಯರು ಪ್ರಧಾನ ನಾಯಕಿಯರಾಗಿರುತ್ತಾರೆ. ಆರಂಭದಲ್ಲಿ ಅಗ್ನಿಕನ್ಯೆಯನ್ನು ನಾದನೃತ್ಯ ಸ್ಕೂಲ್ ಆಫ್ ಡಾ… ಸಂಸ್ಥೆಯ ನಿರ್ದೇಶಕಿ ವಿ| ಭ್ರಮರಿ ಶಿವಪ್ರಕಾಶ್ ಅಭಿನಯಸಲಿದ್ದಾರೆ. ಅನಂತರ ಪ್ರತೀಕಾರದ ಅವತಾರ ಜ್ವಾಲಾಮುಖೀ ಅಂಬೆ. ಈ ನೃತ್ಯಬ್ಯಾಲೆಯ ಪ್ರಸ್ತುತಿ ಗಾನ ನೃತ್ಯ ಅಕಾಡೆಮಿ ಸಂಸ್ಥೆಯ ನಿರ್ದೇಶಕಿ ವಿ| ವಿದ್ಯಾಶ್ರೀ ರಾಧಾಕೃಷ್ಣ ಅವರದು. ಮುಂದೆ ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ನಿರ್ದೇಶಕಿ ವಿ| ಮಾನಸಿ ಸುಧೀರ್ ಕಥಾನಾಯಕಿ ಹಿಡಿಂಬೆಯನ್ನು ಅಭಿನಯಿಸುತ್ತಾರೆ. ಕೊನೆಗೆ ಸಂಭ್ರಮಿಸಲಿರುವ ರಾಧೆಯ ಚಿತ್ರಣವು ಪುತ್ತೂರಿನ ನೃತ್ಯ ನಿರ್ದೇಶಕಿ ವಿ| ಮಂಜುಳಾ ಸುಬ್ರಹ್ಮಣ್ಯ ಅವರಿಂದ ಮೂಡಿ ಬರಲಿದೆ.
ಈ ನಾಲ್ಕು ನಾಯಕಿಯರು ಒಂದೇ ವೇದಿಕೆಯಲ್ಲಿ ಪ್ರಕಟಗೊಳ್ಳುವುದು ಶ್ರೀ ನಾಟ್ಯಾಂಜಲಿಯ ಈ ವರ್ಷದ ಕೊಡುಗೆ.
ರಮೇಶ್ ಭಟ್ ಸುರತ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.