ಯಕ್ಷಸಾಧಕ ಕರ್ನೂರು ಕೊರಗಪ್ಪ ರೈ ಸ್ಮತಿ ಪರ್ವ 


Team Udayavani, Mar 30, 2018, 6:00 AM IST

3.jpg

ಯಕ್ಷಗಾನ ಕ್ಷೇತ್ರದಲ್ಲಿ ಹಲವು ಹೊಸತನಗಳ ಕೊಡುಗೆ ಕೊಟ್ಟವರು ಕರ್ನೂರು ಕೊರಗಪ್ಪ ರೈ. ಪ್ರದರ್ಶನ, ಪ್ರಯೋಗ, ತಾಳಮದ್ದಲೆ, ಪ್ರಸಂಗ ಸಂಯೋಜನೆ, ಗೋಷ್ಠಿ-ಕಮ್ಮಟಗಳ ಮೂಲಕ ಖ್ಯಾತಿ ಗಳಿಸಿದ ಕರ್ನೂರು ಹಲವು ಕಲಾವಿದರನ್ನು ಬೆಳಕಿಗೆ ತಂದರು. ಕಲಾವಿದರಿಗೆ ಕೈತುಂಬಾ ಸಂಪಾದಿಸುವ ದಾರಿ ತೋರಿದ ಅವರು, ತೆಂಕು-ಬಡಗುಗಳ ಮಿಶ್ರ ಪ್ರಯೋಗಗಳನ್ನು ಮಾಡಿ ಸೈ ಎನಿಸಿದರು. ಯಕ್ಷಗಾನದಲ್ಲಿ ಗಾನ ವೈಭವ, ನೃತ್ಯ ವೈವಿಧ್ಯಗಳಿಗೆ ನಾಂದಿ ಹಾಡಿದವರು ಅವರೇ. ಕಾಳಿಂಗ ನಾವಡ ಮತ್ತು ಪೊಳ್ಯ ಲಕ್ಷ್ಮೀನಾರಾಯಣ ಶೆಟ್ಟರ ದ್ವಂದ್ವ ಹಾಡುಗಾರಿಕೆಯ ಮೂಲಕ ಯಕ್ಷಗಾನ ವಲಯದಲ್ಲೊಂದು ಹೊಸ ಕ್ರಾಂತಿ ಎಬ್ಬಿಸಿದ ಮಹಾನ್‌ ಸಂಘಟಕ. 

ಜೀವನ-ಸಾಧನೆ 
ಕರ್ನೂರಿನಲ್ಲಿ ದಿ| ಶೆಟ್ಟಿಯಪ್ಪ ರೈ ಮತ್ತು ರಾಮಕ್ಕ ದಂಪತಿಗೆ 1942ರಲ್ಲಿ ಜನಿಸಿದ ಕೊರಗಪ್ಪ ರೈ 13ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದರು. ತೆಂಕುತಿಟ್ಟಿನ ಕಾವು ಕಣ್ಣರಿಂದ ಯಕ್ಷಗಾನ, ರಾಜನ್‌ ಅಯ್ಯರ್‌, ಮಾಸ್ಟರ್‌ ವಿಠಲ್‌, ಕೇಶವ ಮಾಸ್ಟರ್‌ ಇವರಿಂದ ಭರತನಾಟ್ಯ ಮತ್ತು ಪಿಳ್ಳೆ„ ಮಾಸ್ಟರ್‌ ಅವರಿಂದ ಸಂಗೀತ ಕಲಿತು ಪರಿಪೂರ್ಣ ಕಲಾವಿದರಾಗಿ ರಂಗಪ್ರವೇಶಿಸಿದುದು ಅವರ ಹೆಗ್ಗಳಿಕೆ. ಇರಾ ಸೋಮನಾಥೇಶ್ವರ ಯಕ್ಷಗಾನ ನಾಟಕ ಸಭಾದ ಮೂಲಕ ತಿರುಗಾಟ ಆರಂಭಿಸಿದ ಕರ್ನೂರು ಕರ್ನಾಟಕ, ಕೂಡ್ಲು, ಧರ್ಮಸ್ಥಳ, ಸುಂಕದಕಟ್ಟೆ ಮೇಳಗಳಲ್ಲಿ ವೇಷಧಾರಿಯಾಗಿ ಜನಪ್ರಿಯರಾಗಿದ್ದರು.     ಶ್ರೀಕೃಷ್ಣ, ಯಶೋದೆೆ, ಮಾಲಿನಿ, ಚಂಡ-ಮುಂಡ, ಮಧು-ಕೈಟಭ, ಈಶ್ವರ, ಕಂಸ, ಹಿರಣ್ಯ ಕಶ್ಯಪ, ಶೂರಪದ್ಮ, ಭೀಮ, ಭಸ್ಮಾಸುರ, ದಾರಿಕಾಸುರ, ಕೋಟಿ-ಚೆನ್ನಯ, ಚಂದುಗಿಡಿ, ಶಂಕರಾಳ್ವ, ವಾವರ ಮುಂತಾದ ವಿಭಿನ್ನ ಸ್ವಭಾವದ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದ ರೈ ಭಾಗವತರಾಗಿಯೂ ಹಲವು ಆಟ-ಕೂಟಗಳಲ್ಲಿ ಕಾಣಿಸಿಕೊಂಡರು. ಅಳಿಕೆ ರಾಮಯ್ಯ ರೈ, ಬೋಳಾರ ನಾರಾಯಣ ಶೆಟ್ಟಿ, ಶೇಣಿ ಗೋಪಾಲಕೃಷ್ಣ ಭಟ್‌, ರಾಮದಾಸ ಸಾಮಗ, ಕುಂಬಳೆ ಸುಂದರರಾವ್‌, ಕೆ. ಗೋವಿಂದ ಭಟ್‌, ಕೋಳ್ಯೂರು ರಾಮಚಂದ್ರ ರಾವ್‌ ಮುಂತಾದ ಕಲಾವಿದರ ಒಡನಾಡಿಯಾಗಿ ಸುದೀರ್ಘ‌ ಕಲಾಸೇವೆಗೈದ ಬಳಿಕ ಯಕ್ಷಗಾನ ಸಂಘಟಕರಾಗಿ ಜನಾನುರಾಗಿಯಾದರು.     ಎಪ್ಪತ್ತರ ದಶಕದಲ್ಲಿ ಮಂಗಳೂರು ನಗರದಲ್ಲಿ ಗೋಪಾಲಕೃಷ್ಣ ಕಲಾ ಸಂಪದ ಪಡೀಲು ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಹವ್ಯಾಸಿ ಸಂಘಟನೆಗಳಿಗೆ ಮಾರ್ಗದರ್ಶಕರಾಗಿ ವೇಷಭೂಷಣ ಮತ್ತು ಪ್ರಸಾಧನ ಸಲಕರಣೆಗಳನ್ನು ಒದಗಿಸುತ್ತಿದ್ದರು. 

ಮಳೆಗಾಲದಲ್ಲೂ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿ ಹೊಸ ಬಗೆಯ ಸಂಯೋಜನೆಯೊಂದಿಗೆ ತೆಂಕು ಬಡಗು ಮಿಶ್ರ ಪ್ರಯೋಗಗಳಿಂದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಬೆಂಗಳೂರಿನಲ್ಲಿ ಸಚಿವ-ಶಾಸಕರುಗಳಿಗೆ ಯಕ್ಷಗಾನ ತರಬೇತು ನೀಡಿ ಶಾಸಕರ ದಿನಾಚರಣೆಯಂದು ಡಾ| ಜೀವರಾಜ ಆಳ್ವ, ವೀರಪ್ಪ ಮೊಲಿ, ಅಮರನಾಥ ಶೆಟ್ಟಿ, ರಮಾನಾಥ ರೈ ಮುಂತಾದವರಿಗೆ ವೇಷ ತೊಡಿಸಿ ಯಶಸ್ವೀ ಪ್ರದರ್ಶನಕ್ಕೆ ಕಾರಣಾದರು. ಮುಂಬಯಿ, ಗುಜರಾತ್‌, ಹೈದರಾಬಾದ್‌, ಚೆನ್ನೈಗಳಲ್ಲೂ ಯಕ್ಷಗಾನ ಆಟ-ಕೂಟಗಳನ್ನು ನಡೆಸಿ ಖ್ಯಾತರಾದರು. 

ನಾಲ್ಕು ದಶಕ ಕಲಾಸೇವೆಗೈದ ಬಳಿಕ ಮೇಳದ ವ್ಯವಸ್ಥಾಪಕರಾಗಿ ಕದ್ರಿ ಶ್ರೀ ಮಂಜುನಾಥ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿಯನ್ನು ಪುನರಾರಂಭಿಸಿ ಒಂಭತ್ತು ವರ್ಷ ನಡೆಸಿದರು. ಯಕ್ಷಗಾನ ಕ್ಷೇತ್ರದ ಅವರ ಸಾಧನೆಗಾಗಿ ಯಕ್ಷರಂಗ ರತ್ನಾಕರ, ಯಕ್ಷ ಸಂಘಟನಾ ಚತುರ ಮುಂತಾದ ಬಿರುದುಗಳು ಲಭಿಸಿವೆ. ಬೋಳೂರು ದೋಗ್ರಪೂಜಾರಿ ಪ್ರಶಸ್ತಿ, ಮುಂಬಯಿ ಬಂಟರ ಸಂಘದ ಪ್ರಶಸ್ತಿ, ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠಲ ಶೆಟ್ಟಿ ಪ್ರತಿಷ್ಠಾನ ಪ್ರಶಸ್ತಿ, ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ, ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸ್ಮಾರಕ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿ, ಕದ್ರಿ ಹವ್ಯಾಸಿ ಬಳಗ, ಉಡುಪಿ ಯಕ್ಷಗಾನ ಕಲಾರಂಗ ಮತ್ತು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರಶಸ್ತಿ ಸೇರಿದಂತೆ ಮೂವತ್ತಕ್ಕೂ ಮಿಕ್ಕಿದ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ.     ಮೇಳದ ವ್ಯವಹಾರದಲ್ಲಿ ಕೈ ಸುಟ್ಟುಕೊಂಡ ಬಳಿಕ ಕೆಲವು ವರ್ಷ ಮುಂಬಯಿಯಲ್ಲಿ ನೆಲೆಸಿದ್ದ ಕೊರಗಪ್ಪ ರೈ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕಾಲೊಂದು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಮತ್ತೆ ಮಂಗಳೂರಿಗೆ ಮರಳಿದರು. ಜೀವನ್ಮರಣ ಹೋರಾಟದಲ್ಲಿ ಚೇತರಿಸಿಕೊಳ್ಳಲಾಗದೆ 2008 ಜೂನ್‌ 12 ರಂದು ಕೊನೆಯುಸಿರೆಳೆದರು. 

ಸ್ಮತಿ ಪರ್ವ – ಪ್ರಶಸ್ತಿ ಪ್ರದಾನ     ಕರ್ನೂರು ಗತಿಸಿದ ಮರುವರ್ಷದಿಂದ ಸ್ಮಾರಕ ಸಮಿತಿಯೊಂದು ಆಸ್ತಿತ್ವಕ್ಕೆ ಬಂದಿದ್ದು, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಪರಿಪಾಠ ಬೆಳದು ಬಂತು. ಹಿರಿಯ ಪುತ್ರ ಕರ್ನೂರು ಮೋಹನ್‌ ರೈ ಮುಂಬಯಿಯಲ್ಲಿ ಅದ್ದೂರಿಯ ಯಕ್ಷಗಾನ ಪ್ರದರ್ಶನಗಳೊಂದಿಗೆ ಇದಕ್ಕೆ ಚಾಲನೆ ನೀಡಿದರೆ, ಕಿರಿಯ ಮಗ ಕರ್ನೂರು ಸುಭಾಷ್‌ ರೈ ಬೆಂಗಳೂರಿನಲ್ಲಿ ಕಲಾಸಂಪದದ ಕಾರ್ಯಕ್ರಮಗಳನ್ನು ಮುಂದುವರಿಸುತ್ತಿರುವುದು ಗಮನಾರ್ಹ.     ಕುಂಬಳೆ ಸುಂದರರಾವ್‌, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಕೆ.ಹೆಚ್‌.ದಾಸಪ್ಪ ರೈ ಮೊದಲಾದ ಹಿರಿಯ ಕಲಾವಿದರು ಕರ್ನೂರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೀಗ ನಡೆಯುತ್ತಿರುವುದು ರೈಯವರ ದಶಕದ ಸಂಸ್ಮರಣೆ. ಇದರ ಅಂಗವಾಗಿ ಎ.1 ರಂದು ಕರ್ನೂರು ಸುಭಾಷ್‌ ರೈಯವರ ಸಾರಥ್ಯದಲ್ಲಿ ಕರ್ನೂರು ದಶಕದ ಸ್ಮತಿ ಪರ್ವ – 2018 ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಬೆಂಗಳೂರು ವಿಜಯ ನಗರದ ಬಂಟರ ಸಂಘ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. 

ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಕಟೀಲು ಸೀತಾರಾಮ ಕುಮಾರ್‌ ಅವರು ಈ ಬಾರಿಯ ಕರ್ನೂರು ಪ್ರಶಸ್ತಿ-2018 ಯನ್ನು ಸ್ವೀಕರಿಸುತ್ತಿದ್ದಾರೆ. ಹಿರಿಯ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಡಾ| ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಡಾ| ಟಿ. ಶ್ಯಾಮಭಟ್‌ ಪ್ರಶಸ್ತಿ ಪ್ರದಾನ ಮಾಡುವರು. ಕುತ್ಯಾರು ರಾಜೇಶ್‌ ಶೆಟ್ಟಿ, ಮಣೂರು ವಾಸುದೇವ ಮಯ್ಯ, ಐರೋಡಿ ಗೋವಿಂದಪ್ಪ, ಕೊಳ್ತಿಗೆ ನಾರಾಯಣ ಗೌಡ, ಆರ್‌. ಕೆ.ಭಟ್‌. ಬೆಳ್ಳಾರೆ ಮತ್ತು ವಿಜಯ ಶೆಟ್ಟಿ ಹಾಲಾಡಿ ದಂಪತಿಗೆ ಕಲಾ ಸಂಪದ ಪ್ರಶಸ್ತಿ ನೀಡಲಾಗುವುದು. ದಿನವಿಡೀ ಯಕ್ಷನಾಟ್ಯ, ತಾಳಮದ್ದಲೆ, ಯಕ್ಷ – ಗಾನ ನೃತ್ಯ ಕುಂಚ, ತೆಂಕು-ಬಡಗು ಯಕ್ಷಗಾನ ಪ್ರದರ್ಶನ ಜರಗುವುದು.              
                 
ಭಾಸ್ಕರ ರೈ ಕುಕ್ಕುವಳ್ಳಿ 

ಟಾಪ್ ನ್ಯೂಸ್

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

KN-Rajaanna

Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Untitled-1

Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು

Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು

Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

missing

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.