ಗಮ್ಮತ್ ಕೊಟ್ಟ ಗಮ್ಮತ್ ಕಲಾವಿದರ ನಾಟಕ
Team Udayavani, Mar 13, 2020, 6:16 PM IST
ಪ್ರತಿ ದೃಶ್ಯದ ಕೊನೆಗೆ ಸಿಳ್ಳೆ, ಚಪ್ಪಾಳೆಯ ಝೇಂಕಾರ, ವೃತ್ತಿಪರ ಕಲಾವಿದರಿಗಿಂತ ನಾವೇನು ಅಭಿನಯದಲ್ಲಿ ಕಮ್ಮಿ ಇಲ್ಲ ಎಂದು ತೋರಿಸಿ ಕೊಟ್ಟ ಹವ್ಯಾಸಿ ಕಲಾವಿದರು, ಆರಂಭದಲ್ಲಿ ನಗೆಗಡಲಲ್ಲಿ ತೇಲಾಡಿಸಿ ಕೊನೆಯಲ್ಲಿ ಕಣ್ಣೀರು ಸುರಿಸುವಂತೆ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಯುಎಈ ಕಲಾಭಿಮಾನಿಗಳಿಗೆ ಗಮ್ಮತ್ ಕೊಟ್ಟ ಗಮ್ಮತ್ ಕಲಾವಿದರು ದುಬೈ ಯುಎಈ ಯ 9ನೇ ವರ್ಷದ ಕಲಾ ಕಾಣಿಕೆ “ದಾದ ಮಲ್ಪೆರೆ ಆಪುಂಡು’ ನಾಟಕ ಫೆ.21 ರಂದು ಪ್ರದರ್ಶನಗೊಂಡಿತು.
ಶ್ರೀಮಂತಿಕೆಯ ಮದದಿಂದ ಮಾನವೀಯತೆಯನ್ನು ಮರೆತರೆ ಏನಾಗಬಹುದು, ತುಳುನಾಡಿನ ಕಲೆಯಾದ ಯಕ್ಷಗಾನವನ್ನು ಪ್ರೀತಿಸಬೇಕು, ಯಕ್ಷಗಾನದ ಮಹತ್ವದ ಬಗ್ಗೆ ವಿವರ ಸಹಿತ ಸಂಭಾಷಣೆಯ ಮೂಲಕ ಸಂದೇಶ,ಪ್ರೀತಿಗೆ ಶ್ರೀಮಂತ-ಬಡವ ಎಂಬ ಭೇದಭಾವ ಇಲ್ಲ, ಕೊನೆಗೆ ಪ್ರೀತಿಸಿದ ಹೃದಯ ಸಿಗದಿದ್ದರೆ ಹುಚ್ಚಾಗುವ ಸಾಧ್ಯತೆ, ಸರಕಾರಿ ಕೆಲಸ ದೇವರ ಕೆಲಸ, ಈ ಕೆಲಸದಲ್ಲಿದ್ದು ಲಂಚಕ್ಕೆ ಕೈ ನೀಡಿದರೆ ಕೊನೆಗೆ ಲಂಚದ ಹಣವನ್ನೆಲ್ಲ ಸರಕಾರಕ್ಕೆ ನೀಡಿ ಸೆರೆಮನೆ ಸೇರಬೇಕೆಂಬಂಥ ಉತ್ತಮ ಸಂದೇಶಗಳು ನಾಟಕದಲ್ಲಿದ್ದವು. ಕಲಾವಿದರಾಗಿ ವಾಸು ಕುಮಾರ್ ಶೆಟ್ಟಿ, ಚಿದಾನಂದ ಪೂಜಾರಿ,ಡೊನಾಲ್ಡ್ ಕೊರೇಯೊ,ಗಿರೀಶ್ ನಾರಾಯಣ್, ಸುನೀಲ್ ಸುವರ್ಣ, ಸಂದೀಪ್ ಬರ್ಕೆ,ರಮೇಶ್ ಸುವರ್ಣ, ಜೇಶ್ ಬಾಯಾರ್,ರೂಪೇಶ್ ಪೂಜಾರಿ, ದೀಪಕ್ ಎಸ್. ಪಿ., ಗೌತಮ್ ಬಂಗೇರ ,ಮೋನಪ್ಪ, ಸುವರ್ಣಾ ಸತೀಶ್,ದೀಪ್ತಿ ದೀನರಾಜ್,ಜಾನೆಟ್ ಸಿಕ್ವೆರಾ ಪಕ್ವ ಅಭಿ ನಯ ನೀಡಿ ದರು. ಸಂಗೀತ ನಿರ್ದೇಶಕರಾಗಿ ಶುಭಕರ ಬೆಳಪು,ನೃತ್ಯ ನಿರ್ದೇಶಕರಾಗಿ ಗೌತಮ್ ಬಂಗೇರ, ಮೇಕಪ್‌ನಲ್ಲಿ ಕಿಶೋರ್ ಗಟ್ಟಿ ಸಹಕರಿಸಿದರು. ನವೀನ್ ಶೆಟ್ಟಿ ಅಳಕೆ ರಚಿಸಿದ ನಾಟಕವನ್ನು ವಿಶ್ವನಾಥ ಶೆಟ್ಟಿ ದುಬೈ ನಿರ್ದೇಶಿಸಿದ್ದರು.
ವಿಜಯ ಕುಮಾರ್ ಶೆಟ್ಟಿ, ಮಜಿಬೈಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.