ಪಂಚಮದ ಇಂಚರದಲ್ಲಿ ಗಾನ ಕೂಜನ


Team Udayavani, Aug 25, 2017, 6:20 AM IST

24-KAAL-3.jpg

ಕಳೆದ ಆರು ವರ್ಷಗಳಿಂದ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಸುರತ್ಕಲ್‌ನ ಚಿರಂತನ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದಲ್ಲಿ ನಡೆಯುತ್ತಿರುವ ಪಂಚಮದ ಇಂಚರ ವಿವೇಕಸ್ಮತಿ ಹಿಂದುಸ್ಥಾನಿ ಸಂಗೀತ ಮಹೋತ್ಸವ ಸಂಗೀತ ಪ್ರೇಮಿಗಳಿಗೆ ಉತ್ತಮ ಗುಣಮಟ್ಟದ ಸಂಗೀತ ಕಛೇರಿಗಳನ್ನು ನೀಡುತ್ತಾ ಬಂದಿದೆ. ಈ ವರ್ಷದ ಉತ್ಸವವನ್ನು ದ್ವಿದಿನ ಸಂಗೀತ ಕಾರ್ಯಾಗಾರದೊಂದಿಗೆ ಹೊಂದಿಸಿ, ಸಂಜೆ ಅತ್ಯುತ್ತಮವಾದ ನಾಲ್ಕು ಸಂಗೀತ ಕಛೇರಿಗಳನ್ನು ಪ್ರಸ್ತುತಪಡಿಸಿದೆ. 

ಹಿಂದುಸ್ಥಾನಿ ಸಂಗೀತದ ಹಲವು ಸೂಕ್ಷ್ಮ ಹಾಗೂ ಉನ್ನತ ಮಟ್ಟದ ವಿಚಾರ ಗಳನ್ನು ಇಲ್ಲಿನ ಸಂಗೀತ ಕಲಾವಿದ ರಿಗೆ ಒದಗಿಸುವ ಉದ್ದೇಶದಿಂದ ಈ ಸಂಗೀತ ಕಮ್ಮಟವನ್ನು ಆಯೋಜಿಸ ಲಾಗಿತ್ತು. ಕಿರಾಣಾ, ಗ್ವಾಲಿಯರ್‌, ಆಗ್ರಾ ಹಾಗೂ ಜೈಪುರ್‌ ಘರಾಣಾಗಳ ದಿಗ್ಗಜ ಗುರುಗಳಿಂದ ಪಾಠ ಹೇಳಿಸಿಕೊಂಡ ಹಾಗೂ ಪಂ| ಗಜಾನನ ಜೋಷಿ ಹಾಗೂ ಪಂ| ಬಬನ್‌ರಾವ್‌ ಹಳದಂಕರ್‌ ಅವರಿಂದ ಕಲಿತು, ಅವರ ಸ್ವರಚಿತ ಹಾಗೂ ಪಾರಂಪರಿಕ ಬಂದಿಶ್‌ಗಳ ಸಂಗ್ರಹವನ್ನು ಹೊಂದಿರುವ ಹಿರಿಯ ಸಂಗೀತ ಕಲಾವಿದೆ ಮುಂಬಯಿಯ ಪಂ| ಶುಭದಾ ಪರಾಡ್ಕರ್‌ ಅವರ ಮಾರ್ಗದರ್ಶನದಲ್ಲಿ ನಡೆದ ಕಮ್ಮಟದಲ್ಲಿ ಅನೇಕ ಸಮಪ್ರಕೃತಿ ರಾಗ ಗಳಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಸಿ ಕೊಡಲಾಯಿತು. ವಿಲಂಬಿತ್‌ ತಿಲ ವಾಡಾ, ಝೂಮ್ರಾ ಹಾಗೂ ಝಪ್‌ ತಾಳಗಳಲ್ಲಿ ದೃತ್‌ ತೀನ್‌ತಾಲ್‌, ಏಕ್‌ತಾಲ್‌ಗ‌ಳಲ್ಲಿ ಸುಂದರ ಬಂದಿಶ್‌ಗಳನ್ನೂ ತರಾನ ಹಾಗೂ ಅವುಗಳನ್ನು ವಿಸ್ತರಿಸುವ ಕ್ರಮಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸಿದರು. ಗಿಳಿಗುಂಡಿಯ ಸ್ವರ ಸಂವೇದನಾ ಪ್ರತಿಷ್ಠಾನದ ಸಹಯೋಗ ದೊಂದಿಗೆ ನಡೆದ ಈ ಕಮ್ಮಟದಲ್ಲಿ ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯ 25 ಕಲಾವಿದರು ಪಾಲ್ಗೊಂಡರು. 

ಮೊದಲನೆಯ ದಿನ ಸಂಜೆ ಸಿತಾರ್‌ ಕಲಾವಿದ ಉಸ್ತಾದ್‌ ರಫೀಕ್‌ಖಾನ್‌ ಅವರ ಸಿತಾರ್‌ ವಾದನ ನಡೆಯಿತು. ರಾಗ್‌ ಜಿಂಜೋಟಿಯನ್ನು ಮಧ್ಯಲಯ ರೂಪಕ ತಾಳ ಹಾಗೂ ದೃತ್‌ ತೀನ್‌ತಾಳದಲ್ಲಿ ನುಡಿಸಿದರು. ಬಳಿಕ ವರ್ಷ ಋತುವಿಗೆ ಸಂಬಂಧಿಸಿದ ಮಲ್ಹಾರ್‌ ರಾಗಗಳ ರಾಗ ಮಾಲಾ ನುಡಿಸಿ ರಂಜಿಸಿದರು. ಈ ಪ್ರಸ್ತುತಿಯೊಂದಿಗೆ ಧುಲಿಯಾ ಮಲ್ಹಾರ್‌, ಸೂರ್‌ದಾಸೀ ಮಲ್ಹಾರ್‌, ರಾಮ್‌ದಾಸೀ ಮಲ್ಹಾರ್‌, ಗೌಡ್‌ಮಲ್ಹಾರ್‌ ಹಾಗೂ ಮಿಯಾಮಲ್ಹಾರ್‌ ರಾಗಗಳನ್ನು ಪರಿಚಯಿಸಿದರು. ಧಾರವಾಡದ ಡಾ| ಉದಯ್‌ ಕುಲಕರ್ಣಿ ಸಮರ್ಥ ತಬಲಾ ಸಾಥ್‌ ನೀಡಿದರು. 

ಅನಂತರದ ಕಛೇರಿಯಲ್ಲಿ ಬೆಂಗಳೂರಿನ ಹಿರಿಯ ಗಾಯಕ ಪಂ| ಪರಮೇಶ್ವರ ಹೆಗಡೆಯವರು ಶುದ್ಧಕಲ್ಯಾಣ್‌ ರಾಗವನ್ನು ವಿಲಂಬಿತ್‌ ಏಕ್‌ತಾಲ್‌ನ ಬಂದಿಶ್‌ ಬೋಲಾನ ಲಾಗೆ  ಹಾಗೂ ದೃತ್‌ ತೀನ್‌ತಾಲ್‌ನ ಮಂದರ ಬಾಜೋ ಹಾಗೂ ಔಡವ ಬಾಗೇಶ್ರೀ ಎಂಬ ಅಪರೂಪದ ರಾಗದಲ್ಲಿ  ಮಧ್ಯಲಯ ಝಪ್‌ತಾಲ್‌ನ ಶರದ ರಜನೀ ರುಚಿರ ಹಾಗೂ ದೃತ್‌ ಏಕ್‌ತಾಲ್‌ನಲ್ಲಿ ಬಿನತೀ ಕರತ ತೋರೆ ಎಂಬ ಸುಂದರ ಬಂದಿಶ್‌ಗಳನ್ನು ಪ್ರಸ್ತುತ ಪಡಿಸಿದರು. ಭೈರವಿಯಲ್ಲಿ ನಂದ ನಂದನ ಪಾಹೀ ಎಂಬ ಒಂದು ಭಜನ್‌ ಪ್ರಸ್ತುತಪಡಿಸಿ ತಮ್ಮ ಕಛೇರಿ ಕೊನೆಗೊಳಿಸಿದರು. ಇವರಿಗೆ ಸಂವಾದಿನಿಯಲ್ಲಿ ಧಾರವಾಡದ ಗುರುಪ್ರಸಾದ್‌ ಹೆಗಡೆ ಹಾಗೂ ತಬಲಾದಲ್ಲಿ   ಭಾರವಿ ದೇರಾಜೆ, ತಂಬೂರ ಹಾಗೂ ಮಂಜೀರಗಳಲ್ಲಿ ಚೈತನ್ಯ ಭಟ್‌ ಹಾಗೂ ಸತೀಶ್‌ ಕಾಮತ್‌ ಸಹಕರಿಸಿದರು.

ಎರಡನೆಯ ದಿನದ ಪ್ರಾರಂಭಿಕ ಕಛೇರಿ ಯನ್ನು ನಾಗರಾಜ್‌ ಹೆಗಡೆ ಶಿರನಾಲ ತನ್ನ ಬಾನ್ಸುರಿ ವಾದನದೊಂದಿಗೆ ಆರಂಭಿಸಿದರು. ಸಂಜೆಯ ಸುಂದರ ರಾಗ ಮುಲ್ತಾನಿಯನ್ನು ವಿಲಂಬಿತ್‌ ಝಪ್‌ ತಾಲ್‌ ಹಾಗೂ ದೃತ್‌ ತೀನ್‌ತಾಳಗಳಲ್ಲೂ ಅನಂತರ ಮೇಘ… ರಾಗ ವನ್ನು ಮಧ್ಯ ಲಯ್‌ ತೀನ್‌ ತಾಲ್‌, ದೃತ್‌ ಆಢಾ ಚೌತಾಲ್‌ ಹಾಗೂ ಅತಿದೃತ್‌ ತೀನ್‌ ತಾಲ ಗಳಲ್ಲಿ ಪ್ರಸ್ತುತಪಡಿಸಿ ಸಂಗೀತ ರಸಿಕರ ಮನವನ್ನು ಗೆದ್ದರು. ಇವರಿಗೆ ಬೆಂಗಳೂರಿನ ಗುರು ಮೂರ್ತಿ ವೈದ್ಯ ಅತ್ಯುತ್ತಮವಾಗಿ ತಬಲಾ ಸಾಥ್‌ ನೀಡಿದರು. 

ಕೊನೆಯ ಕಛೇರಿ ನಡೆಸಿಕೊಟ್ಟವರು ಮುಂಬೈಯ ಹಿರಿಯ ಕಲಾವಿದೆ ಪಂ| ಶುಭದಾ ಪರಾಡ್ಕರ್‌. ಮಿಯಾ ಮಲ್ಹಾರ್‌ ರಾಗದಲ್ಲಿ ವಿಲಂಬಿತ್‌ ತಿಲವಾಡ ತಾಳದ ರೇ ಅತ ಧೂಮ ಎಂಬ ಬಂದಿಶ್‌ ಹಾಗೂ ದೃತ್‌ ತೀನ್‌ತಾಲ್‌ನಲ್ಲಿ ಆಲಿರೀ ಮೇರೋ ನೈನಾ ಬರಸತ ಎಂಬ ಬಂದಿಶ್‌ಗಳೊಂದಿಗೆ ಪ್ರಸ್ತುತ ಪಡಿಸಿ ಅನಂತರ ಅಪರೂಪದ ರಾಗ ಸಾವನಿಯಲ್ಲಿ ಝಪ್‌ತಾಲ್‌ದ ಹರ ಹರ ದಿನಕೆ  ಹಾಗೂ ತೀನ್‌ತಾಲ್‌ನ ಮಾನತ ನಾಹೀ ಬಂದಿಶ್‌ ಪ್ರಸ್ತುತಪಡಿಸಿದರು. ಕೊನೆಗೆ ಕೈಸೇ ಬಲಾಯೀ ರೇ ಕನ್ಹಯ್ಯ ಎಂಬ ಕೃಷ್ಣನನ್ನು ಕುರಿತ ರಚನೆಯನ್ನು ಭೈರವಿಯಲ್ಲಿ ಹಾಡಿದರು. ಇವರಿಗೆ ಗುರುಮೂರ್ತಿ ವೈದ್ಯ ತಬಲಾದಲ್ಲೂ ಗುರುಪ್ರಸಾದ್‌ ಹೆಗಡೆೆ ಸಂವಾದಿನಿ ಯಲ್ಲೂ ಉತ್ತಮ ಸಾಥ್‌ ನೀಡಿದರು. ರಶ್ಮಿ ಹಾಗೂ ಉಮಾ ಹೆಗಡೆ ತಾನ್ಪುರ ಹಾಗೂ ಸಹ ಗಾಯನದ ಬೆಂಬಲ ನೀಡಿದರು.

ಮುರಳೀಧರ ಕಾಯಾರ

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.