ಗಣರಾಜ ಕುಂಬ್ಳೆ, ಪಾತಾಳ ವೆಂಕಟರಮಣ ಭಟ್‌ಗೆ ಶೇಣಿ ಪ್ರಶಸ್ತಿ


Team Udayavani, Jan 26, 2018, 3:31 PM IST

26-54.jpg

ಯಕ್ಷನಂದನ ಕಲಾಸಂಘ ಕೊಯಿಲ ಆಯೋಜಿಸಿರುವ ತಾಳಮದ್ದಳೆ ಸಪ್ತಾಹದಲ್ಲಿ ಶೇಣಿ ಚಾರಿಟೇಬಲ್‌ ಟ್ರಸ್ಟ್‌ (ರಿ.) ಸುರತ್ಕಲ್‌ ಸಹಯೋಗದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರ ಶತಮಾನೋತ್ಸವ ಸಂಸ್ಮರಣೆ ಕಾರ್ಯಕ್ರಮ ಜ.26 ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದಲ್ಲಿ ಜರಗಲಿದ್ದು, ಈ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪಾತಾಳ ವೆಂಕಟರಮಣ ಭಟ್‌ ಮತ್ತು ಗಣರಾಜ ಕುಂಬ್ಳೆ ಇವರಿಗೆ “ಶೇಣಿ ಶತಮಾನೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು

ಗಣರಾಜ ಕುಂಬ್ಳೆ 
ಕನ್ನಡ ಪಂಡಿತರಾಗಿದ್ದ ಕೆ. ತಿರುಮಲೇಶ್ವರ ಭಟ್‌ ಮತ್ತು ಶಾರದಾ ದಂಪತಿಯ ಪುತ್ರನಾಗಿ ಕುಂಬ್ಳೆಯಲ್ಲಿ ಜನಿಸಿದ ಗಣರಾಜರಿಗೆ ಯಕ್ಷಗಾನದ ದಟ್ಟ ಹಿನ್ನೆಲೆಯಿದೆ. ವೇಷಧಾರಿ ಕೆ.ವಿ.ಸುಬ್ರಾಯ, ಅರ್ಥದಾರಿ ಅಧ್ಯಾಪಕ ಕೆ.ವಿ.ಗಣಪಯ್ಯ , ವೇಷಧಾರಿ ಮತ್ತು ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್‌, ಸ್ತ್ರೀ ವೇಷಧಾರಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಇವರ ಸೋದರ ಮಾವಂದಿರು. ಉಪ್ಪಳ ಕೃಷ್ಣ ಮಾಸ್ತರ್‌ ನಾಟ್ಯಗುರು . 

 ಪ್ರೌಢಶಿಕ್ಷಣ ಹಂತದಲ್ಲಿಯೇ ಆಟ-ಕೂಟಗಳಲ್ಲಿ ಭಾಗವಹಿಸಿದ ಇವರು ಪರಿಸರದ ಶಿಕ್ಷಣ ಸಂಸ್ಥೆಗಳಲ್ಲಿ ಯಕ್ಷಗಾನ ಸಂಘಟನೆ ಮಾಡಿ ಪಾತ್ರಧಾರಿಯಾಗಿ ಭಾಗವಹಿಸುತ್ತ ಕಲಾವಿದನಾಗಿ ರೂಪುಗೊಂಡವರು. ಕುಂಬ್ಳೆಯಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪನೆ ಮಾಡಿ ಯಕ್ಷಗಾನ ಮತ್ತು ನಾಟಕಗಳ ಪ್ರದರ್ಶನ, ಅಷ್ಟಮಿ, ಚೌತಿಯಂತಹ ಹಬ್ಬಗಳನ್ನು ಸಾರ್ವಜನಿಕವಾಗಿ ಆಯೋಜಿಸುವಲ್ಲಿ ನೇತೃತ್ವ ವಹಿಸಿ ಅಲ್ಲೆಲ್ಲ ಯಕ್ಷಗಾನದ ಕಂಪನ್ನು ಬೀರಿದರು. ಕೋಟೂರಿನ ಕಾರ್ತಿಕೇಯ ಯಕ್ಷಗಾನ ಸಂಘದ ಕನ್ನಡ-ಮಲಯಾಳ ಯಕ್ಷಗಾನದಲ್ಲಿ ಭಾಗಿಯಾಗುತ್ತಾ ಪ್ರಸಿದ್ಧರಾದ ಗಣರಾಜರು ಉಪ್ಪಳದ ಭಗವತಿ ಮೇಳದಲ್ಲಿ 3 ವರ್ಷ ಭಾಗವತ ಕುಬಣೂರು ಶ್ರೀಧರ ರಾಯರ ನೇತೃತ್ವದಲ್ಲಿ ಕೂಡ್ಲು ಮೇಳದಲ್ಲಿಯೂ ಅತಿಥಿ ಕಲಾವಿದರಾಗಿ ತಿರುಗಾಟ ಮಾಡಿದ ಅನುಭವಿ. ಕನ್ನಡ ಎಂ.ಎ ಪದವೀಧ‌ರಾದ ಕಾರಣ ಅಧ್ಯಯನ, ಮಾತುಗಾರಿಕೆಯೊಂದಿಗೆ ಯಾವ ಸ್ಥಾಯಿಗೂ ಹೊಂದಿಕೊಳ್ಳುವ ಇವರ ಕಂಠ ಆಟ-ಕೂಟಗಳಿಗೆ ಧನಾತ್ಮಕ ಅಂಶವಾಗಿತ್ತು.

 ಹಿರಿಯ ತಲೆಮಾರಿನ ಶೇಣಿ, ಸಾಮಗತ್ರಯರು, ಮೂಡಂಬೈಲು ಜೋಷಿ, ತೆಕ್ಕಟೆ, ಮಾರೂರು, ಕುಂಬ್ಳೆ ಸುಂದರ ರಾವ್‌, ಕೆ.ಗೋವಿಂದ ಭಟ್ಟರಲ್ಲದೆ ಸಮಕಾಲೀನ ಕಲಾವಿದರೊಂದಿಗೆ ದೊಡ್ಡ ಕೂಟಗಳಲ್ಲಿ ನಾಡಿನಾದ್ಯಂತ ಭಾಗವಹಿಸಿದ್ಧಾರೆ. ದಶರಥ, ಕೈಕೇಯಿ, ಶ್ರೀರಾಮ, ಭರತ, ವಾಲಿ, ಸುಗ್ರೀವ, ಹನುಮಂತ, ರಾವಣ, ಅತಿಕಾಯ, ಇಂದ್ರಜಿತು, ಭೀಷ್ಮ, ಅಂಬೆ, ಸಾಲ್ವ, ಪರಶುರಾಮ, ದಕ್ಷ, ಈಶ್ವರ, ದಾûಾಯಿನಿ, ಶ್ರೀಕೃಷ್ಣ, ಮಾಗಧ, ಕೌರವ, ಭೀಮ, ದ್ರೌಪದಿ ಹೀಗೆ ಒಂದು ಪ್ರಸಂಗದ ಎಲ್ಲ ಪಾತ್ರಗಳನ್ನು ನಿರ್ವಹಿಸಬಲ್ಲ ಅಪೂರ್ವ ಕಲಾವಿದ. ಹವ್ಯಾಸಿ ವೇಷಧಾರಿಯಾಗಿ ಪೌರಾಣಿಕ ಪ್ರಸಂಗಳಲ್ಲಿ ನಾನಾ ಪಾತ್ರಗಳನ್ನು ಮಾಡಿದ್ದಾರೆ. ತುಳು ಯಕ್ಷಗಾನದಲ್ಲಿ ಇವರ ಪೆರುಮಳ ಬಳ್ಳಾಲ, ಚಂದುಗಿಡಿ, ಶಬರಿಮಲೆ ಮಹಾತೆ¾ಯ ವಾವರ ಪಾತ್ರಗಳು ಪ್ರಸಿದ್ಧ.

 1984ರಿಂದ ರಾಮಕುಂಜದ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ಮಕ್ಕಳ ಯಕ್ಷಗಾನ ತಂಡವನ್ನು ರೂಪಿಸಿದ್ದಾರೆ. ಶ್ರೀ ರಾಮಕುಂಜೇಶ್ವರ ಯಕ್ಷಗಾನ ಸಂಘದ ಕಾರ್ಯಾದರ್ಶಿಯಾಗಿ ಹಲವಾರು ತಾಳಮದ್ದಳೆ ಕೂಟವನ್ನು ಸಂಘಟಿಸಿದ್ದಾರೆ. 2003ರಲ್ಲಿ ಕೊಯಿಲಾ ಯಕ್ಷನಂದನ ಕಲಾ ಸಂಘವನ್ನು ಸ್ಥಾಪಿಸಿ ಯಕ್ಷಗಾನ ಕಮ್ಮಟ, ಮುಖಮರ್ಣಿಕೆ ಶಿಬಿರ, ಮಹಿಳಾ ಯಕ್ಷಗಾನ ತಂಡಕ್ಕೆ ತರಬೇತಿ ನೀಡಿದ್ದಾರೆ. ಹಲವಾರು ಸ್ಮರಣ ಸಂಚಿಕೆ, ಅಭಿನಂದನಾ ಗ್ರಂಥಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ರೇಡಿಯೋ ತಾಳಮದ್ದಳೆ ಬಿಹೈಗ್ರೇಡ್‌ ಕಲಾವಿದರಾಗಿರುವ ಕುಂಬ್ಳೆಯವರು ಶ್ರೀ ರಾಮಕುಂಜೇಶ್ವರ ಕ್ಷೇತ್ರ ಮಹಾತ್ಮೆ, ವಜ್ರಜ್ವಾಲಾ ಪರಿಣಯ ಪ್ರಸಂಗ ರಚಿಸಿದ್ದಾರೆ.

 ಕುಂಬ್ಳೆ ಸುಂದರರಾಯರ ಬಗ್ಗೆ ಇವರು ಬರೆದಿರುವ “ಮಿಂಚುಮಾತಿನ ಯಕ್ಷ ‘ ಕೃತಿಯು ಕಾಂತಾವರ ಕನ್ನಡ ಸಂಘದಿಂದ ಪ್ರಕಟಗೊಂಡಿದೆ. ಜನಪದ ಹಾಡುಗಳ ಸಂಕಲನ “ಹಾಡುಗಳ ಮಣಿಸರ’ ಅರಳು ಮತ್ತು ಬಿರಿವ ಮೊಗ್ಗು ಕವನ ಸಂಕಲನ , ಪುಣ್ಯಕೋಟಿ ಸಾಮಾಜಿಕ ನಾಟಕ , ಮರಳು ಬಿಂದಿಗೆ ಪೌರಾಣಿಕ ನಾಟಕ , ಕಗ್ಗದೊಳಗಿನ ಸಗ್ಗ ಅಂಕಣ ಬರಹಗಳ ಸಂಕಲನ ಪ್ರಕಟಗೊಂಡಿದೆ .

ಪಾತಾಳ ವೆಂಕಟರಮಣ ಭಟ್‌
 ತೆಂಕು ಮತ್ತು ಬಡಗು ತಿಟ್ಟಿನ ಸ್ತ್ರೀ ವೇಷಧಾರಿಯಾಗಿ ಮೂರು ದಶಕಗಳ ಕಾಲ ರಂಗದಲ್ಲಿ ಮೆರೆದವರು ಪಾತಾಳ ವೆಂಕಟರಮಣ ಭಟ್ಟರು.ಕಬಕದ ಬೈಪದವಿನ ರಾಮಭಟ್ಟ ಮತ್ತು ಹೇಮಾವತಿ ದಂಪತಿಯ ಪುತ್ರರಾಗಿ 1933ರಲ್ಲಿ ಜನಿಸಿದ ಇವರು ಉಪ್ಪಿನಂಗಡಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. 

ಬಾಲ್ಯದ ಹಲವು ಸ್ಥಿತ್ಯಂತರಗಳ ನಡುವೆ ಕಲಾವಿದ ಮಾಣಂಗಾಯಿ ಕೃಷ್ಣ ಭಟ್ಟರ ಮೂಲಕ ಕಾಂಚನದಲ್ಲಿ ಸಂಗೀತ ಕಲಿಯಲು ಸೇರಿದರು. ಅದನ್ನು ಪೂರ್ಣಗೊಳಿಸದೆ 1955ರಲ್ಲಿ ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಯಕ್ಷಗಾನ ನಾಟಕ ಸಭಾದಲ್ಲಿ ಸೂಪಜ್ಞನ ಕಾರ್ಯದೊಂದಿಗೆ ಸಣ್ಣ ಪಾತ್ರಗಳನ್ನು ನಿರ್ವಹಿಸಿ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶ. 

 ಆ ಮೇಳವು ಸ್ಥಗಿತಗೊಂಡಾಗ ಬಡಗಿನ ಸೌಕೂರು ಮೇಳಕ್ಕೆ ಸೇರಿ ಅಡುಗೆಯ ಕೆಲಸದೊಂದಿಗೆ ಪ್ರತಿದಿನದ ಪಾತ್ರಕ್ಕೆ ನಾಟ್ಯ, ಸಂಭಾಷಣೆ ಆಭ್ಯಾಸ ಮಾಡಿ ರಂಗದಲ್ಲಿ ಮೋಡಿ ಮಾಡಿದರು. ಇವರ ವೇಷದ ಸೊಬಗನ್ನು ಕಂಡ ಪೆರುವಡಿ ನಾರಾಯಣ ಭಟ್ಟರು 1957ರಲ್ಲಿ ಮೂಲ್ಕಿ ಮೇಳಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾಸ್ಟರ್‌ ವಿಠಲರ ಶಿಷ್ಯರಾಗಿ ಭರತನಾಟ್ಯ, ಶಿವ ತಾಂಡವ ನೃತ್ಯ, ಭಸ್ಮಾಸುರ ಮೋಹಿನಿ ನೃತ್ಯಗಳ ಪದಗತಿಯ ಅಭ್ಯಾಸ ಮಾಡಿದರು. ಇದರಿಂದ ಪಾತಾಳರ ಸ್ತ್ರೀ ಪಾತ್ರದ ನಿರ್ವಹಣೆಯಲ್ಲಿ ಹೊಸತನ ಪ್ರಾಪ್ತವಾಯಿತು.

 1962ರಲ್ಲಿ ಸುರತ್ಕಲ್‌ ಮೇಳದಲ್ಲಿ ದೊಡ್ಡ ಸಾಮಗರ ಸಹಚರ್ಯ ಇವರ ಪಾತ್ರಗಳಿಗೆ ಇನ್ನಷ್ಟು ಮೆರುಗನ್ನು ನೀಡಿತು. 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಯಾಗಿ 18 ವರ್ಷಗಳ ತಿರುಗಾಟದಲ್ಲಿ ಶೇಣಿ, ಕುಂಬ್ಳೆ, ಗೋವಿಂದ ಭಟ್‌, ನಾರಾಯಣ ಹೆಗ್ಡೆ, ಎಂಪೆಕಟ್ಟೆ, ಕಡತೋಕ, ಚಿಪ್ಪಾರು ಇವರೊಂದಿಗೆ ಯಶಸ್ವಿಯಾಗಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದ ಖ್ಯಾತಿ ಪಾತಾಳರದ್ದು. 

 ಪ್ರಯೋಗ-ಆವಿಷ್ಕಾರ : ಡಾ| ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯ ಪ್ರಯೋಗವು ಇವರಲ್ಲಿ ಯಕ್ಷಗಾನದ ಸ್ತ್ರೀ ವೇಷದ ಪರಿಷ್ಕಾರಕ್ಕೆ ಚಿಂತನೆಯನ್ನು ಮೂಡಿಸಿತ್ತು. ಡಿ.ವಿ.ಜಿ.ಯವರ ಅಂತಪುರ ಗೀತೆಯ ಓದಿನಿಂದ ಬೇಲೂರು ಶಿಲಾಬಾಲಿಕೆಯರ ಶಿಲ್ಪದಲ್ಲಿ ಮೂಡಿದ ಭಾವ-ಭಂಗಿ, ಮುದ್ರೆಗಳ ಬಗ್ಗೆ ಆಸಕ್ತಿ ಮೂಡಿ ಲಕ್ಷ್ಮಣ ಆಚಾರ್ಯರ ಸಹಕಾರದಿಂದ ಕ್ಷೇತ್ರ ಅಧ್ಯಯನ ನಡೆಸಿ ಬೇಕಾದ ಅಭರಣ, ವೇಷಭೂಷಣ, ಶಿರೋಭೂಷಣಗಳ ರೂಪುರೇಷೆ‌ ಸಿದ್ಧಪಡಿಸಿಕೊಂಡರು. 1967-68ರ ಅವಧಿಯಲ್ಲಿ ಧರ್ಮಸ್ಥಳ ಮೇಳವು ಹೊಸತನದ ವ್ಯವಸ್ಥೆಗೆ ತೆರೆದುಕೊಂಡಾಗ ಇವರ ಕಲ್ಪನೆಗಳು ಸಾಕಾರಗೊಂಡವು. ವಿವಿಧ ಸ್ತ್ರೀ ಪಾತ್ರಗಳಿಗೆ ಬೇಕಾಗುವ ಆಹಾರ್ಯಗಳನ್ನು ಸಿದ್ಧಪಡಿಸಿ ಪರಂಪರೆಗೆ ತೊಡಕಾಗದೆ ರಂಗದಲ್ಲಿ ಪ್ರಯೋಗಿಸುವ ಮೂಲಕ ಸ್ತ್ರೀ ಪಾತ್ರಗಳ ಚಿತ್ರಣದಲ್ಲಿ ನೂತನ ಆಯಾಮವನ್ನು ತಂದರು. ಇವರ ಪುತ್ರ ಅಂಬಾ ಪ್ರಸಾದರು ಸ್ತ್ರೀ ವೇಷಾಧಾರಿಯಾಗಿ ಈ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

 ಉಪ್ಪಿನಂಗಡಿಯ ಪಾತಾಳದಲ್ಲಿ ಕೃಷಿ-ಆಧ್ಯಾತ್ಮಿಕ ಚಿಂತನೆಯಲಿ ತೊಡಗಿರುವ ವೆಂಕಟರಮಣ ಭಟ್ಟರು ನಿವೃತ್ತಿಯ ನಂತರ ಯಕ್ಷಗಾನ ಪ್ರಾತ್ಯಕ್ಷಿಕೆಗಳಲ್ಲಿ ತನ್ನ ಅನುಭವವನ್ನು ದಾಖಲಿಸಿದ್ದಾರೆ. 85ರ ಹರೆಯದ ಪಾತಾಳರು ಯಕ್ಷಗಾನ ಸಂಬಂಧಿ ಕಾರ್ಯಕ್ರಮಗಳಲ್ಲಿ ಈಗಲೂ ಉತ್ಸಾಹದಿಂದ ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.

 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಆಕಾಡೆಮಿಯ ಜ್ಞಾನ-ವಿಜ್ಞಾನ ಪ್ರಶಸ್ತಿ, ಕರಾವಳಿ ಯಕ್ಷಗಾನ ಸಮ್ಮೇಳನದ ಗೌರವ ಪ್ರಶಸ್ತಿ, ಕ.ಸಾ.ಪ ಬೆಂಗಳೂರು ವತಿಯಿಂದ ಕರ್ನಾಟಕ ಶ್ರೀ ಪ್ರಶಸ್ತಿ, ಮಾಜಿ ರಾಷ್ಟ್ರಪತಿ ಆರ್‌.ವೆಂಕಟ್ರಾಮನ್‌ರಿಂದ ಮಣಿವಿಳಾ ಬಿರುದು ಇವರಿಗೆ ಸಂದಿದೆ. “ಯಕ್ಷಶಾಂತಲಾ’ ಅಭಿನಂದನಾ ಗ್ರಂಥ ಕಲಾಭಿಮಾನಿಗಳಿಂದ ಸಮರ್ಪಣೆಯಾಗಿದೆ. ಯಕ್ಷಗಾನದಲ್ಲಿ ಗಣನೀಯ ಸಾಧನೆ ಮಾಡಿದ ಕಲಾವಿದರನ್ನು ವಾರ್ಷಿಕವಾಗಿ “ಪಾತಾಳ ಪ್ರಶಸ್ತಿ’ ನೀಡಿ ಗೌರವಿಸುವ ಪರಿಪಾಠವನ್ನು ನಡೆಸುತ್ತಿದ್ದಾರೆ. 

ದಿವಾಕರ ಆಚಾರ್ಯ  

ಟಾಪ್ ನ್ಯೂಸ್

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.