ನೆನಪಿನಲ್ಲುಳಿಯುವ ಗಾರ್ಗಿ ಶಬರಾಯ ಕಛೇರಿ 


Team Udayavani, Apr 27, 2018, 6:00 AM IST

309.jpg

ಶಿವಮೊಗ್ಗದ ಸೌರಭ ಮತ್ತು ಐಸಿರಿ ಭಕ್ತಿವಾಹಿನಿ ಆಯೋಜಿಸಿದ ರಾಜ್ಯ ಮಟ್ಟದ ” ನನ್ನ ಹಾಡು ….ದಾಸರ ಹಾಡು’ ದಾಸರ ಪದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಉಡುಪಿಯ ಕು| ಗಾರ್ಗಿ ಶಬರಾಯ ಅವರನ್ನು ರಾಗಧನ, ಉಡುಪಿ ವತಿಯಿಂದ ಮಾ.24ರಂದು ಎಮ್‌ಜಿಎಮ್‌ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಅಭಿನಂದಿಸ ಲಾಯಿತು.ಈ ಸಂದರ್ಭದಲ್ಲಿ ಗಾರ್ಗಿ ಸುಗಮ ಸಂಗೀತ ಕಛೇರಿ ನೀಡಿದರು. ಸಾಂಪ್ರದಾಯಿಕವಾದ ಕೇದಾರ ರಾಗದಲ್ಲಿ ರ‌ಂಗನಾಥನ ನೋಡುವ ಬನ್ನಿರೀ (ಶ್ರೀಪಾದ ರಾಯರ ರಚನೆ) ಪದದಿಂದ ಹಿತಮಿತವಾದ ಸ್ವರಕಲ್ಪನೆಗಳೊಂದಿಗೆ ಹಾಡುಗಾರಿಕೆ ಶುರುವಾಯಿತು. ಬೃಂದಾವನೀ ಸಾರಂಗದಲ್ಲಿ ಸದಾ ಎನ್ನ ಹೃದಯದಲ್ಲಿ (ವಿಜಯದಾಸರ ಕೀರ್ತನೆ) ಇಂಪಾಗಿ ಮೂಡಿ ಬಂದಿತು. ಬಳಿಕ ತೋಡಿ ರಾಗದ ಜೀವ ಸ್ವರಗಳ ಸಂಚಾರಗಳನ್ನು ಹರಹರವಾಗಿ ಬಿಡಿಸಿಟ್ಟ ಉಗಾಭೋಗದ ಮುಖೇನ ರಾಗಾಲಾಪನೆ, ಪುರಂದರ ದಾಸರ ತಾ ತಕಧಿಮಿತ ಭಕ್ತಿ ಗೀತೆಯ ಪ್ರಸ್ತುತಿ, ರಾಗಕ್ಕೆ ಮೆರುಗು ತರುವಂತಹ ಕಲ್ಪನಾ ಸ್ವರಗಳೊಂದಿಗೆ ನಡೆಯಿತು. ಅನಂತರ ದ್ವಿಜಾವಂತಿಯ ರಾಗಾಲಾಪನೆಯನ್ನು ಮಾಡಿದ ಕಲಾವಿದೆ ಹಾಡಿದ್ದು ಕುವೆಂಪು ಅವರ ಸೂತ್ರಧಾರಿಯು ನೀನು ಪಾತ್ರಧಾರಿಯು ನಾನು ಎನ್ನುವ ಕವ‌ನವನ್ನು. 

ಇಲ್ಲಿ ಗಾಯಕಿಯು ಪದ್ಯದ ಅರ್ಥವನ್ನು ಶೃತಿ ಹಾಗೂ ಹಿಮ್ಮೇಳದೊಂದಿಗೆ ಮಾತಿನಲ್ಲಿ ವಿವರಿಸಿದಾಗ ಅದು ಬೇರೆಯೇ ತೆರನಾದ ಒಂದು ವಿಶೇಷವಾದ ಮಾಹೋಲ್‌ನ್ನು ಸೃಷ್ಟಿಸಿತು. ಖಂಡ ಛಾಪು ತಾಳದಲ್ಲಿ ಹಾಡಿದ ಈ ಪ್ರಸ್ತುತಿ ತುಂಬಾ ಪರಿಣಾಮಕಾರಿಯಾಗಿದ್ದು ಬಹಳ ಕಾಲ ಕೇಳುಗರ ಮನದಲ್ಲಿ ನಿಲ್ಲುವಂತದ್ದು. ಮುಂದೆ ದಾರಿಯ ತೋರೋ ಗೋಪಾಲ… ವಾದಿರಾಜರ ರಚನೆಯನ್ನು ವಿಭಿನ್ನವಾಗಿ ಹಾಡಿದರು. 

ಅದೇನೆಂದರೆ ಬಿಲಹರಿ ಮತ್ತು ಚಂದ್ರಕೌಂಸ್‌ ಎರಡೂ ರಾಗಗಳಲ್ಲಿ ಹಾಡಿದ್ದು ಆದರೆ ಇದು ಮಾಮೂಲಿ ರಾಗ ಮಾಲಿಕಿಕೆಗಳಂತಿರದೆ ಪ್ರತಿ ಸಾಲುಗಳಗೆ ಎರಡೆರಡು ರಾಗಗಳನ್ನು ಬಳಸಿಕೊಂಡು ಹಾಡಲಾಯಿತು. ಒಂದೊಂದು ನಿಮಿಷಕ್ಕೂ ರಾಗಗಳನ್ನು ಬದಲಿಸಿಕೊಂಡು ಹಾಡಿದ ಈ ರಚನೆ ಗಾಯಕಿಗೆ ರಾಗಗಳ ಮೇಲಿರುವ‌ ಹಿಡಿತವನ್ನು ತೋರಿಸುತ್ತಿತ್ತು. ಕೊನೆಯಲ್ಲಿ ಎನ್ನ ಪಾಲಿಸೋ ಕರುಣಾಕರ- ಸೋಹನಿ, ಗಿಳಿಯು ಪಂಜರದೊಳಿಲ್ಲ – ಹಿಂದುಸ್ಥಾನಿ ಜಂಜೂಟಿ, ಹೀರನ್ನ ಸಮಜ್‌ – ಕಬೀರ್‌ ದಾಸ್‌ ಭಜನ್‌ನೊಂದಿಗೆ ಹಾಡಿಗಾರಿಕೆ ಸಮಾಪನಗೊ‌ಂಡಿತು.

ಈ ಕಾರ್ಯಕ್ರಮವನ್ನು ಸುಗಮ ಸಂಗೀತ ಕಛೇರಿ ಎನ್ನುವುದು ಹೆಚ್ಚು ಸೂಕ್ತವಾದೀತು. ಏಕೆಂದರೆ ಶಾಸ್ತ್ರೀಯತೆಗೆ ಚ್ಯುತಿ ಬಾರದಂತೆ ಭಕ್ತಿ ಗೀತೆಗಳಿಗೆ ರಾಗ ವಿಸ್ತಾರ, ಸ್ವರ ಪ್ರಸ್ತಾರಗಳನ್ನು ಅಳವಡಿಸಿಕೊಂಡಿರುವುದು ಹಾಗೆಯೇ ಸುಗಮತೆಗೆ ಕುಂದು ಬಾರದಂತೆ ಸುಗಮ ಸಂಗೀತದ ಜಾಡಿನಲ್ಲಿಯೇ ಹಾಡಿರುವಂತದ್ದು. 

ಒಟ್ಟಿನಲ್ಲಿ ಗಾರ್ಗಿ ಶಬರಾಯ ಸಂಗೀತ ಕಛೇರಿಯನ್ನು ನೀಡುವಾಗ ಅದು ಶಾಸ್ತ್ರೀಯತೆಯ ಚೌಕಟ್ಟಿನಲ್ಲಿಯೇ ಇರುತ್ತದೆ. ಅಂತೆಯೇ ಲಘು ಸಂಗೀತದ ಕಾರ್ಯಕ್ರಮದಲ್ಲಿ ಸುಗಮ ಸಂಗೀತಕ್ಕೆ ಬೇಕಾದಂತೆಯೇ ಇರುತ್ತದೆ. ಪಕ್ಕವಾದ್ಯದಲ್ಲಿ, ವೇಣುಗೋಪಾಲ್‌ ಶರ್ಮ, ವಯೊಲಿನ್‌ನಲ್ಲಿ ಸುಮುಖ ಕಾರಂತ, ಮೃದಂಗದಲ್ಲಿ ಮಾಧವ ಆಚಾರ್ಯಸಹಕರಿಸಿದರು. 

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.