ಮುಂಬಯಿಯಲ್ಲಿ ಗರುಡ ಗರ್ವಭಂಗ
Team Udayavani, Aug 10, 2018, 6:00 AM IST
ಕರ್ನಾಟಕ ಜಾನಪದ ಪರಿಷತ್ ಮಹಾರಾಷ್ಟ್ರ ಘಟಕ ಮತ್ತು ಮುಲುಂಡ್ ಪ್ರಂಡ್ಸ್ (ರಿ.) ಇವರ ಜಂಟಿ ಆಯೋಜನೆಯಲ್ಲಿ ಗರುಡ ಗರ್ವ ಭಂಗ ಯಕ್ಷಗಾನ ತಾಳಮದ್ದಳೆ ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಇವರ ತಾಯ್ನಾಡಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮುಲುಂಡ್‌ನಲ್ಲಿ ಇತ್ತೀಚೆಗೆ ಸಂಪನ್ನಗೊಂಡಿತು.
ಶ್ರೀಕೃಷ್ಣ ಅರ್ಥಧಾರಿಯಾದ ಹರೀಶ್ ಭಟ್ ಬೊಳಂತಿಮೊಗರು ಅರ್ಥವನ್ನು ಉಪಕಥೆ ನೀತಿಕಥೆ ಉದಾಹರಣೆಗಳ ಮೂಲಕ ವ್ಯಾಖ್ಯಾನಿಸಿದರು. ನಾರದರ ಪಾತ್ರವನ್ನು ನಿರ್ವಹಿಸಿದ ಯುವ ಅರ್ಥದಾರಿ ಅವಿನಾಶ್ ಶೆಟ್ಟಿ ಉಬರಡ್ಕ ಉತ್ತಮ ಮಾತುಗಾರಿಕೆಯಿಂದ ರಂಜಿಸಿದರು. ನಡು ನಡುವೆ ವರ್ತಮಾನ ಕಾಲಘಟ್ಟದ ರಾಜಕೀಯ ನಡಾವಳಿಗಳನ್ನು ಪ್ರಸಂಗಕ್ಕೆ ಹೊಂದುವಂತೆ ಉದಾಹರಣೆಗಳ ಮೂಲಕ ಅಣುಕು ನುಡಿಗಾಳಾಗಿ ಆಡಿನಗು ಮೂಡಿಸಿದರು. ಹನುಮಂತನ ಪಾತ್ರ ನಿರ್ವಹಣೆ ಮಾಡಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಭಕ್ತಿ ರಸ, ಕರುಣಾ ರಸಗಳಲ್ಲಿ ಪಾತ್ರದ ಅರ್ಥವನ್ನು ಅರ್ಥಗರ್ಭಿತ ಪದಪುಂಜಗಳ ಜೋಡಿಸಿ, ಸಂಭಾಷಣೆಗಳ ಮಾಲೆ ಕಟ್ಟಿ ವಾಗ್ಝರಿಯಿಂದ ರಂಜಿಸಿದರು. ಗರ್ವಭಂಗಕ್ಕೆ ಒಳ ಪಡುವ ಪ್ರಸಂಗದ ಕೇಂದ್ರ ಪಾತ್ರಗಳಾದ ಬಲರಾಮನ ಪಾತ್ರವನ್ನು ಶ್ಯಾಮ್ ಭಟ್ ಪಕಳಕುಂಜ, ಗರುಡನ ಪಾತ್ರವನ್ನು ಜಯ ಪ್ರಕಾಶ್ ಶೆಟ್ಟಿ ಪೆರ್ಮುದೆ ಶ್ರೋತೃಗಳಿಗೆ ‘ಅಹಂಭಾವ- ಗರ್ವಭಾವ’ ಸಲ್ಲದು ಎನ್ನುವ ಅಮೃತಾರ್ಥದ ಪುರಾಣದ “ಗರುಡ ಗರ್ವಭಂಗ’ ಕಥಾನಕವನ್ನು ಮುಂಬಯಿ ಕನ್ನಡಿಗರಿಗೆ ಉಣಬಡಿಸಿದರು.
ತೆಂಕುತಿಟ್ಟಿನಲ್ಲಿ ಪ್ರಸಿದ್ಧಿಯ ಪಥದಡೆ ಸಾಗುತ್ತಿರುವ ಗಾನಕೋಗಿಲೆ ಕು| ಕಾವ್ಯಾಶ್ರೀ ಅಜೇರು ಅವರ ಭಾಗವತಿಕೆಯು ನವರಸ ಭಾವ ಅಭಿವ್ಯಕ್ತಿಯಿಂದ ತಲೆತೂಗುವಂತೆ ಮೂಡಿ ಬಂದಿತು. ಚಂಡೆಯಲ್ಲಿ ಶ್ರೀಪತಿ ನಾಯಕ್, ಮದ್ದಳೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು ಸಹಕರಿಸಿದರು.
ತಾರಾನಾಥ್ ಮೇಸ್ತ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.