ಹೆಜ್ಜೆಗೆಜ್ಜೆಯಲ್ಲಿ ಮನಮೋಹಕ ನೃತ್ಯಾಂಜಲಿ
Team Udayavani, Sep 7, 2018, 6:00 AM IST
ನೂರಾರು ವಿದ್ಯಾರ್ಥಿಗಳಿಗೆ ನೃತ್ಯವಿದ್ಯೆಯನ್ನು ಧಾರೆ ಎರೆಯುತ್ತಾ ಬಂದಿರುವ ಹೆಜ್ಜೆಗೆಜ್ಜೆ ನೃತ್ಯ ಸಂಸ್ಥೆಯು ಇದೀಗ ಇಪ್ಪತ್ತೈದು ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿದೆ. ನವೀಕೃತಗೊಂಡ ರಾಜಾಂಗಣದಲ್ಲಿ ಭರತನಾಟ್ಯ ಕಾರ್ಯಕ್ರಮಗಳು ಕಡಿಮೆಯಾಗುತ್ತಿದ್ದ ಈ ಸಂದರ್ಭದಲ್ಲೇ ವಿದುಷಿ ಯಶ ರಾಮಕೃಷ್ಣರ ಹೆಜ್ಜೆಗೆಜ್ಜೆ ಸಂಸ್ಥೆಯು ಬೆಳ್ಳಿಹೆಜ್ಜೆ ಇಡುತ್ತಿರುವುದು ಉಡುಪಿಯ ಕಲಾರಸಿಕರಿಗೆ ನೃತ್ಯದ ಸವಿಯನ್ನು ಸವಿಯಲು ಅವಕಾಶ ಕಲ್ಪಿಸಿದಂತಾಗಿದೆ
ಇತ್ತೀಚೆಗೆ ರಾಜಾಂಗಣದಲ್ಲಿ ಹೆಜ್ಜೆಗೆಜ್ಜೆಯ ರಜತ ಮಹೋತ್ಸವ ಉದ್ಘಾಟನೆಗೊಂಡಿತು. ಅದೇ ದಿನ ಬೆಂಗಳೂರಿನ ಗುರು ಅನುರಾಧಾ ವಿಕ್ರಾಂತ್ ಅವರ ದೃಷ್ಟಿ ಡ್ಯಾನ್ಸ್ ಎನ್ಸ್‌ಂಬಲ್ ನೃತ್ಯ ಕಾರ್ಯಕ್ರಮದ ಮೂಲಕ ನೃತ್ಯಾಂಜಲಿ ಎಂಬ ಸರಣಿ ನೃತ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿತು. ನೃತ್ಯಾಂಜಲಿ -1 ರಲ್ಲಿ ಅನುರಾಧಾ ವಿಕ್ರಾಂತ್‌ರ ಶಿಷ್ಯೆಯರಾದ ಶುಭಾ,ಐಶ್ವರ್ಯಾ, ಟಿನ್ಸಿ,ರಮ್ಯಾ ಇವರೊಂದಿಗೆ ಪ್ರದರ್ಶಿಸಿದ ಅಂಜಲಿ ನೃತ್ಯದಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ ಅವರ ಹಾಡಿನ ಸಂಯೋಜನೆ ಮತ್ತು ಅನುರಾಧಾ ಅವರ ನೃತ್ಯ ಸಂಯೋಜನೆಯು ವಿಭಿನ್ನವಾಗಿತ್ತು.ಎಲ್ಲರೂ ಮತ್ತೆ ಮತ್ತೆ ಅಭಿನಯಿಸುವ ಚರ್ವಿತಚರ್ವಣ ಅನಿಸುವ ಪುರಂದರದಾಸರ ಜಗನ್ಮೋಹನನೇ ಕೃಷ್ಣ ಎಂಬ ಹಾಡನ್ನು ವಿಶಿಷ್ಟ ರಂಗ ವಿನ್ಯಾಸ ದೊಂದಿಗೆ ಉತ್ತಮವಾಗಿ ಅಭಿನಯಿಸಿದ್ದು ಪ್ರಶಂಸನೀಯ.ಮುಂದೆ ಪ್ರದರ್ಶನಗೊಂಡ ಬೃಂದಾವನಿ ರಾಗದ ಆದಿತಾಳದ ಸ್ವಾತಿ ತಿರುನಾಳ್ ರಚನೆ ಚಲಿಯೇ ಕುಂಜನಮೊ ಸಿಂಧುಭೈರವಿ ರಾಗದ ಪುರಂದರದಾಸರ ತಂಬೂರಿ ಮೀಟಿದವ, ನಾಟಿಕುರಂಜಿ ರಾಗದ ಪುರಂದರದಾಸರ ಪೋಗುವುದುಚಿತವೇ ನೃತ್ಯಗಳನ್ನು ಅನುರಾಧಾರವರು ಮನಮುಟ್ಟುವಂತೆ ಅಭಿನಯಿಸಿದರು.ದಾಸರ ಹಾಡು ಒಂದರ ಬೆನ್ನಿಗೆ ಇನ್ನೊಂದು ಇರದಿರುತ್ತಿದ್ದರೆ ಸಣ್ಣ ಮಟ್ಟಿನ ಏಕತಾನತೆಯನ್ನು ತಪ್ಪಿಸಬಹುದಿತ್ತು.ಡಿ.ವಿ ಗುಂಡಪ್ಪನವರ ಅಂತಃಪುರ ಗೀತೆಯ ಮುರುಜಾಮೋದೆ ಎಂಬ ಶಿಲಾಬಾಲಿಕೆಯ ವರ್ಣನೆ ಇರುವ ಏನೀ ಮಹಾನಂದವೇ ನೃತ್ಯವನ್ನು ಇಬ್ಬರು ಶಿಲಾಬಾಲಿಕೆಯರ ಸಂಭಾಷಣೆಯಂತೆ ಪೋಣಿಸಿದ್ದು ವಿಶೇಷ.ಕೊನೆಯಲ್ಲಿ ಪ್ರದರ್ಶನಗೊಂಡ ಸುಮನಸರಂಜನಿ ರಾಗದ ಆದಿತಾಳದ ನಾಗವಲ್ಲಿ ನಾಗರಾಜ್ ಮತ್ತು ಆರ್. ಗಣೇಶ್ ವಿರಚಿತ ತಿಲ್ಲಾನವು ವೈವಿಧ್ಯಮಯ ನೃತ್ತ ಚಲನೆಗಳೊಂದಿಗೆ ಚುರುಕಾಗಿ ಮೂಡಿ ಬಂತು.
ನೃತ್ಯ-2ನ್ನು ವೈ.ಜಿ.ಶ್ರೀಲತಾ ಅವರು ತಮ್ಮ ಪುಟ್ಟ ಶಿಷ್ಯೆಯರೊಂದಿಗೆ ನಡೆಸಿಕೊಟ್ಟರು.ಕಾರ್ಯಕ್ರಮವು ಪುಷ್ಪಾಂಜಲಿಯೊಂದಿಗೆ ಆರಂಭಗೊಂಡು ನಂತರ ಕ್ರಮವಾಗಿ ಮುತ್ತುಸ್ವಾಮಿ ದೀಕ್ಷಿತರ ಗಜಾನನಯುತಂ ದಯಾನಂದ ಸರಸ್ವತಿಯವರ ಭೋಶಂಭೋ, ನರಸಿಂಹ ಕೌತ್ವಂ, ದ್ವಾರಕಿ ಕೃಷ್ಣಸ್ವಾಮಿಯವರ ಆನಂದ ತಾಂಡವೇಶ್ವರನ, ದಾಸರುಗಳ ಆಡಿದನೋ ರಂಗ, ಯಮನೆಲ್ಲೂ ಕಾಣನೆಂದು,ಜಗದೋದ್ಧಾರನ ಮತ್ತು ಕೊನೆಯಲ್ಲಿ ಶಿವಕಲ್ಯಾಣಿ ತಿಲ್ಲಾನದೊಂದಿಗೆ ಸಮಾಪ್ತಿ ಗೊಂಡಿತು ಶ್ರೀಲತಾರವರ ಅಂಗ ಶುದ್ಧತೆ,ಸ್ಪಷ್ಟ ಹೆಜ್ಜೆಗಾರಿಕೆ,ಹಿತಮಿತವಾದ ಅಭಿನಯ,ನೃತ್ತರೇಖೆಗಳ ನಿಖರತೆ ಪ್ರದರ್ಶನದ ಶ್ಲಾಘನಾರ್ಹ ಸಂಗತಿ.ಇವರ ಶಿಷ್ಯೆಯರಾದ ಸ್ಫೂರ್ತಿ, ಪೆ¤àಕ್ಷಾ, ಶ್ರೀಲಾಸ್ಯ,ಶ್ರಾವಣಿ ವಯಸ್ಸಿಗೆ ತಕ್ಕಂತೆ ಅಚ್ಚುಕಟ್ಟಾಗಿ ನರ್ತಿಸಿದ್ದರೂ ಇನ್ನಷ್ಟು ಅನುಭವ ಪಡೆದು ಹೆಚ್ಚಿನ ಅಂಗಶುದ್ಧಿ,ಅಭಿನಯ, ಹೊಂದಾಣಿಕೆಯೊಂದಿಗೆ ನೃತ್ಯಗಳನ್ನು ಪ್ರದರ್ಶಿಸಿದ್ದರೆ ಕಾರ್ಯಕ್ರಮದ ಮಟ್ಟ ಇನ್ನಷ್ಟು ಏರುತ್ತಿತ್ತೇನೋ.
ವಿ| ಮಾನಸಿ ಸುಧೀರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.