ಮನಮೋಹಕ ರಂಗಸಿರಿ ವಿದ್ಯಾರ್ಥಿಗಳ ಯಕ್ಷಗಾನ
Team Udayavani, Sep 21, 2018, 6:00 AM IST
ಕಾಸರಗೋಡಿನ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬದಿಯಡ್ಕ ರಂಗಸಿರಿ ವೇದಿಕೆಯ ವಿದ್ಯಾರ್ಥಿಗಳಿಂದ “ಶಕಟಧೇನುಕ ವಧೆ- ಕಾಳಿಂಗ ಮರ್ದನ- ಶ್ರೀಹರಿ ದರ್ಶನ’ಬಯಲಾಟ ಪ್ರದರ್ಶನಗೊಂಡಿತು.
ಪಾತ್ರವರ್ಗದಲ್ಲಿ ಕಿಶನ್ ಅಗ್ಗಿತ್ತಾಯ ಮತ್ತು ಉಪಾಸನಾ ಕೃಷ್ಣನಾಗಿ, ಶಶಾಂಕ್ ಮೈರ್ಕಳ ವಿಜಯನಾಗಿ,ಆಕಾಶ್ ಶಕಟನಾಗಿ , ಶ್ರೀಜಾ ಧೇನುಕನಾಗಿ , ಮನೀಶ್ ವಾತಾಸುರನಾಗಿ, ಸಂದೇಶ್ ಪುಲಂಬಾಸುರನಾಗಿ ,ನಂದಕಿಶೋರ ಕಾಳಿಂಗನಾಗಿ , ಗರುಡನಾಗಿ ಅಭಿಜ್ಞಾ ಪಾತ್ರಗಳಿಗೆ ಜೀವ ತುಂಬಿದರು.
ಶ್ರೀಹರಿದರ್ಶನದಲ್ಲಿ ಗಂಧರ್ವನಾಗಿ ವಿದ್ಯಾ, ರಾಣಿಯಾಗಿ ಸುಪ್ರೀತಾ ಹಾಗೂ ಗಾಯತ್ರಿ, ಋಷಿಯಾಗಿ ಹರ್ಷ ಪ್ರಸಾದ್, ಇಂದ್ರದ್ಯುಮ್ನನಾಗಿ ರಾಕೇಶ್, ಅಗಸ್ತ್ಯ ಋಷಿಯಾಗಿ ಶ್ರೀಹರಿ, ಗಜೇಂದ್ರನಾಗಿ ಶ್ರೀಷ ಪಂಜಿತ್ತಡ್ಕ, ಮಕರನಾಗಿ ರಾಜೇಂದ್ರ ವಾಂತಿಚ್ಚಾಲು ಪಾತ್ರಗಳಿಗೆ ತಕ್ಕಂತೆ ಅಭಿನಯಿಸಿದರು.ಭಾಗವತರಾದ ರಮೇಶ್ ಭಟ್ ಪುತ್ತೂರು ಮತ್ತು ವಾಸುದೇವ ಕಲ್ಲೂರಾಯ ಸಿರಿಕಂಠದಿಂದ ಸಮ್ಮೊಹನಗೊಳಿಸಿದರು. ಮದ್ದಳೆಯಲ್ಲಿ ಗೋಪಾಲಕೃಷ್ಣ ನಾವಡ, ಚೆಂಡೆಯಲ್ಲಿ ಲಕ್ಷ್ಮೀನಾರಾಯಣ ಅಡೂರು, ಚಕ್ರತಾಳದಲ್ಲಿ ಉದನೇಶ್ ಕುಂಬ್ಲೆ ಸಾಥ್ ನೀಡಿದರು. ಯಕ್ಷಗಾನ ಗುರುಗಳಾದ ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ಅವರ ನಿರ್ದೇಶನದಲ್ಲಿ ಸೊಗಸಾಗಿ ಕಾರ್ಯಕ್ರಮ ಮೂಡಿಬಂತು.
ಪ್ರಸಾದ್ ಮೈರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.