ಮನಮೋಹಕ ಸಿತಾರ್- ಬಾನ್ಸುರಿ ಜುಗಲ್ಬಂಧಿ
Team Udayavani, Sep 13, 2019, 5:05 AM IST
ಮಂಗಳೂರಿನ ಶ್ರೀಕೃಷ್ಣ ಮಂದಿರದಲ್ಲಿ ತಾರಾನಾಥ ಜೋಶಿ ಮತ್ತು ಮನೀಷ್ ದಾಸ್‌ರವರ ಸಿತಾರ್ ಮತ್ತು ಬಾನ್ಸುರಿ ಜುಗಲ್ಬಂಧಿ ಆಯೋಜಿಸಿತ್ತು.ಧಾರ್ಮಿಕ ಸಮಾರಂಭಗಳಲ್ಲಿ ಸಂಗೀತ ಸಂಗಮಿಸಿದರೆ ಆಹ್ಲಾದಕರ ವಾತಾವರಣ ಮೂಡುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ನಿದರ್ಶನವಾಯಿತು.
ಕಾರ್ಯಕ್ರಮ ಚಿಕ್ಕದಾದರೂ ಅಚ್ಚುಕಟ್ಟಾಗಿ ಸಮಗ್ರ ಹೊಂದಾಣಿಕೆಯಿಂದ ಸುಲಲಿತವಾಗಿ ನಡೆಯಿತು.ಸಿತಾರ ವಾದಕರ ಕೃಂಥನ್ ಮತ್ತು ಝಮಾ ಝಮಾಗಳು ಪಂ| ರವಿಶಂಕರ್ ಅವರ ಶೆೃಲಿ ಬಿಂಬಿಸುತ್ತಿದ್ದವು. ಕನ್ನಡ ಮತ್ತು ಮರಾಠಿ ಸ್ತುತಿಗಳು ಪ್ರಸ್ತುತಗೊಂಡವು.
ಯಮನ್ ರಾಗದಲ್ಲಿ ಪ್ರಥಮತುಲಾ ವಂದಿತೋ ಸ್ತುತಿಯೊಂದಿಗೆ ಆರಂಭವಾಗಿ ರಾಮಾಚೆ ಭಜನ-ಬೇಹಾಗ್, ಯಾದವ ನೀ ಬಾ-ಭೀಮ ತಲಾಸ್, ರಾಮ ಕಾ ಗುಣಗಾನ- ಆಹಿರ್ ಬೈರವ, ಮಾಝೆ ಮಾಹೆರ ಪಂಡರಿ- ಮಾಂಡ,ಕೇಶವ ಮಾಧವ, ದುರ್ಗಾ ರಾಗದಲ್ಲಿ ಗಾಯತ್ರಿ ಮಂತ್ರ ಮತ್ತು ಗೋವಿಂದಬೊಲೊ ಭಜನಾ ಸ್ತುತಿ ಭೊಪಾಲೀ ರಾಗದಲ್ಲಿ ಮುಕ್ತಾಯಗೊಳಿಸಿದರು.
ತಬ್ಲಾದಲ್ಲಿ ಮಂಗಲದಾಸ ಗುಲ್ವಾಡಿ ,ತಾಳದಲ್ಲಿ ರಘುರಾಮ ಪೈ ಮತ್ತು ಮಾ| ಹೃಷಿಕೇಶ ಪೈ ಪ್ರತಿಭೆಯನ್ನು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದರು.
ಸಂದೀಪ್ ನಾಯಕ್ ಸುಜೀರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.